Advertisement

ಘಟಪ್ರಭಾದಲ್ಲಿ ರೈತರಿಂದ ರಸ್ತೆ ತಡೆ

12:13 PM May 15, 2019 | Team Udayavani |

ಘಟಪ್ರಭಾ: ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ಮಂಗಳವಾರ ಘಟಪ್ರಭಾ ಮೃತ್ಯುಂಜಯ ಸರ್ಕಲ್ನಲ್ಲಿ ರೈತರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಗೋಕಾಕ, ಮೂಡಲಗಿ, ರಾಯಬಾಗ, ಮುಧೋಳ, ಜಮಖಂಡಿ, ಬೀಳಗಿ ತಾಲೂಕು ಭಾಗದ‌ ರೈತರು ಆಗಮಿಸಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಚೂನ್ನಪ್ಪ ಪೂಜೇರಿ ಮಾತನಾಡಿ, ಮೇ 24ರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 2ಟಿಎಂಸಿ ಅಡಿ ನೀರು ಬಿಡುತ್ತಿದ್ದು, ಅದರಲ್ಲಿ 1 ಟಿಎಂಸಿ ನೀರನ್ನು ಎಡದಂಡೆ ಕಾಲುವೆಗೆ ಹರಿಸಬೇಕು. ಈಗಾಗಲೆ ಈ ಭಾಗದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕೆರೆ, ಬಾವಿ, ಬೋರ್‌ವೆಲ್ಗಳು ಸಂಪೂರ್ಣ ಬತ್ತಿ ಹೋಗಿರುವುದರಿಂದ ನೀರಿಗಾಗಿ ಪರದಾಡಬೇಕಾಗಿದೆ ಎಂದು ಆಗ್ರಹಿಸಿದರು.

ಇದೇ ಬೇಡಿಕೆಗೆ ಆಗ್ರಹಿಸಿ 20ರಂದು ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂರಾರು ರೈತರು ಸೇರಿ ನೀರು ಬಿಡಲು ಆಗ್ರಹಿಸಿ ಮುತ್ತಿಗೆ ಹಾಕಲು ನಿರ್ಧರಿಸಿರುವುದಾಗಿ ತಿಳಿಸಿದರು. ರೈತರ ಮನವಿ ಸ್ವೀಕರಿಸಿದ ನೀರಾವರಿ ನಿಗಮದ ಅಧಿಕಾರಿ ಕಲ್ಲಪ್ಪ ಕೊಣ್ಣೂರಕರ ಮಾತನಾಡಿ, ಹಿಡಕಲ್ ಜಲಾಶಯದಿಂದ ನೀರು ಬಿಡುವುದಾಗಲಿ ಹಾಗೂ ಕಾಲುವೆಗೆ ನೀರು ಬಿಡುವ ಅಧಿಕಾರ ನಮ್ಮ ಕೈಯಲ್ಲಿ ಇಲ್ಲ ರೈತರು ನೀಡಿದ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿ ಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಗಂಗಾಧರ ಮೇಟಿ, ಕಲ್ಯಾಣ ಮಗದುಮ, ಕಲ್ಲನ್ನಗೌಡ ಪಾಟೀಲ, ಮಂಜು ಗದಾಡಿ, ಲಕ್ಕಪ್ಪ ಕಣದಾಳೆ, ರಮೇಶ ಕಪ್ಪಲಗುದ್ದಿ, ಜಗದೀಶ ಮುತ್ನಾಳಿ ಹಾಗೂ ಬಾಗಲಕೋಟೆ, ಜಮಖಂಡಿ, ಮುಧೋಳ, ಬೀಳಗಿ, ರಾಯಬಾಗ, ಮೂಡಲಗಿ, ಗೋಕಾಕ ತಾಲೂಕಿನ ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next