Advertisement

ಮೊದಲ ತ್ತೈಮಾಸಿಕದಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿ

08:17 PM Aug 25, 2022 | Team Udayavani |

ನವದೆಹಲಿ: ಕೊರೊನಾ ನಂತರದ ಆರ್ಥಿಕ ಚೇತರಿಕೆಗೆ ಪುಷ್ಟಿ ನೀಡುವಂತೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ಔಪಚಾರಿಕ ಉದ್ಯೋಗ ಸೃಷ್ಟಿಯು ಗಣನೀಯವಾಗಿ ಏರಿಕೆಯಾಗಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ದತ್ತಾಂಶವೇ ಈ ಮಾಹಿತಿ ನೀಡಿದೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲ ತ್ತೈಮಾಸಿಕದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ)ಯ ಚಂದಾದಾರರ ಪ್ರಮಾಣ ಶೇ.40.05ರಷ್ಟು ಹೆಚ್ಚಳವಾಗಿದೆ. ಜೂನ್‌ ತಿಂಗಳೊಂದರಲ್ಲೇ ಇದು ಶೇ.30.05ರಷ್ಟು ಏರಿಕೆ ಕಂಡಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಜೂನ್‌ಗೆ ಅಂತ್ಯವಾದ ತ್ತೈಮಾಸಿಕದಲ್ಲಿ ಔಪಚಾರಿಕ ಉದ್ಯೋಗಿಗಳ ಪ್ರಮಾಣ ಶೇ.51 ಏರಿಕೆಯಾಗಿದೆ. ಜೂನ್‌ವೊಂದರಲ್ಲೇ ಇದು ಶೇ.48.6ರಷ್ಟು ಹೆಚ್ಚಳವಾಗಿದೆ ಎಂದೂ ಸಚಿವಾಲಯದ ಅಂಕಿಅಂಶ ತಿಳಿಸಿದೆ.

ಇದೇ ವೇಳೆ, ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಚಂದಾದಾರರ ಸಂಖ್ಯೆ ಮೊದಲ ತ್ತೈಮಾಸಿಕದಲ್ಲಿ ಶೇ.45ರಷ್ಟು ಹೆಚ್ಚಳವಾಗಿದೆ. ಆದರೆ, ರಾಷ್ಟ್ರೀಯ ಪಿಂಚಣಿ ಯೋಜನೆಯ ಚಂದಾದಾರರ ಪ್ರಮಾಣ ಮೊದಲ ತ್ತೈಮಾಸಿಕದಲ್ಲಿ ಶೇ.0.4ರಷ್ಟು ಇಳಿಕೆಯಾಗಿದೆ ಎಂದೂ ದತ್ತಾಂಶ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next