Advertisement
ಉಡುಪಿ ಜಿಲ್ಲೆಯಲ್ಲಿ 29, ದ.ಕ.ದಲ್ಲಿ 44 ಸಹಿತ ರಾಜ್ಯದಲ್ಲಿ ಒಟ್ಟು 201 ಎ ಗ್ರೇಡ್ ದೇವಸ್ಥಾನಗಳಿವೆ. ಉಡುಪಿಯ 20 ಮತ್ತು ದಕ್ಷಿಣ ಕನ್ನಡದ 25 ದೇಗುಲಗಳ ಅವ ಧಿ ಪೂರ್ಣಗೊಂಡಿದೆ. ಇದರಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು, ಅಮೃತೇಶ್ವರೀ ಸಹಿತ ಮೂರು, ದ.ಕ.ದ ಹನ್ನೊಂದು ದೇವಾಲಯಗಳಿಗೆ ಮೊದಲ ಹಂತದಲ್ಲಿ ಅರ್ಜಿ ಆಹ್ವಾನಿಸಿ ಪರಿಶೀಲನೆ ಮುಗಿದಿದ್ದು, ಇನ್ನುಳಿದವುಗಳಿಗೆ ಈಗ ಅರ್ಜಿ ಆಹ್ವಾನಿಸಲಾಗಿದೆ.
ಈ ದೇಗುಲಗಳಲ್ಲಿ ಒಂದೂವರೆ ವರ್ಷದಿಂದ ಆಡಳಿತಾ ಧಿಕಾರಿಗಳೇ ಆಡಳಿತ ನಡೆಸುತ್ತಿದ್ದು, ನಿತ್ಯ ಚಟುವಟಿಕೆಗಳು, ವಿಶೇಷ ಹಬ್ಬ ಹರಿದಿನಗಳ ಆಚರಣೆ ಮಾತ್ರ ನಡೆಯುತ್ತಿದೆ. ಹೊಸ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನವರಾತ್ರಿ ಮುಂತಾದ ಪ್ರಮುಖ ಉತ್ಸವಗಳ ಸಂದರ್ಭದಲ್ಲಿ ತಯಾರಿ ನಡೆಸಲು, ಪ್ರಮುಖ ತೀರ್ಮಾನ ಕೈಗೊಳ್ಳಲು ವ್ಯವಸ್ಥಾಪನ ಸಮಿತಿ ಇದ್ದರೆ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ಇದೆ. ಆಕಾಂಕ್ಷಿಗಳ ರಾಜಕೀಯ ಮೇಲಾಟ?
ಎ ದರ್ಜೆ ದೇಗುಲಗಳ ವ್ಯವಸ್ಥಾಪನ ಸಮಿತಿ ಸದಸ್ಯರು, ಅಧ್ಯಕ್ಷರಾಗಲು ಭಾರೀ ಪೈಪೋಟಿ ಇದ್ದು, ಹಲವೆಡೆ 9 ಸ್ಥಾನಗಳಿಗೆ ನೂರಾರು ಮಂದಿ ಆಕಾಂಕ್ಷಿಗಳಿರುತ್ತಾರೆ. ಇವರೆಲ್ಲರೂ ಬೇರೆ ಬೇರೆ ರಾಜಕೀಯ ಪ್ರಭಾವ ಹೊಂದಿರುವುದೂ ಇದೆ. ಈ ಕಾರಣದಿಂದ ಒಂದೊಂದು ದೇಗುಲಗಳ 9 ಸ್ಥಾನಗಳಿಗೆ ನೂರಾರು ಆಕಾಂಕ್ಷಿಗಳು ಮೂರ್‍ನಾಲ್ಕು ಪಟ್ಟಿಗಳು ಸಚಿವರ ಕೈ ಸೇರಿವೆ. ಆದ್ದರಿಂದ ಆಯ್ಕೆ ಕಗ್ಗಂಟಾಗುತ್ತಿದೆ ಎನ್ನಲಾಗುತ್ತಿದೆ.
Related Articles
ಮೊದಲ ಹಂತದಲ್ಲಿ ಆರ್ಜಿ ಆಹ್ವಾನಿಸಿದ ಕೊಲ್ಲೂರು ಸಹಿತ ಇತರ ಎ ದರ್ಜೆ ದೇಗುಲಗಳ ವ್ಯವಸ್ಥಾಪನ ಸಮಿತಿ ರಚನೆಗೆ ಎಲ್ಲ ಪ್ರಕ್ರಿಯೆ ಮುಗಿದಿದ್ದು, ಯಾವುದೇ ಸಮಸ್ಯೆಗಳಿಲ್ಲ. ಶೀಘ್ರದಲ್ಲಿ ಸಮಿತಿ ಘೋಷಣೆಯಾಗಲಿದೆ.
ರಾಮಲಿಂಗಾ ರೆಡ್ಡಿ, ಹಿಂದೂ ಧಾರ್ಮಿಕ ಸಂಸ್ಥೆ, ಧರ್ಮಾದಾಯ ದತ್ತಿ ಸಚಿವರು
Advertisement
– ರಾಜೇಶ್ ಗಾಣಿಗ ಅಚ್ಲಾಡಿ