Advertisement
ತಾರಾ ಆಟಗಾರನ ಹಿಂದೆ ಅಭಿಮಾನಿಗಳುಐಪಿಎಲ್ನಲ್ಲಿ ಎಲ್ಲಾ ತಂಡದಲ್ಲಿಯೂ ಸ್ಟಾರ್ ಆಟಗಾರರಿದ್ದಾರೆ. ಸ್ಟಾರ್‌ಗಳು ಅಬ್ಬರದ ಬ್ಯಾಟಿಂಗ್ ಮಾಡುತ್ತಾರೆ, ಪಂದ್ಯದ ದಿಕ್ಕನ್ನೆ ಬದಲಿಸುತ್ತಾರೆ. ಕೊನೆ ಎಸೆತದಲ್ಲಿ ಗೆಲುವನ್ನು ಕಸಿಯುವ ಫಿನಿಷರ್‌ಗಳಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರ ಯಾವ ತಂಡದಲ್ಲಿ ಆಡುತ್ತಾನೋ ಅದೇ ತಂಡಕ್ಕೆ ಜೈ ಕಾರ ಹಾಕುತ್ತಾರೆ ಅಭಿಮಾನಿಗಳು. ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ ಆರ್‌ಸಿಬಿ ತಂಡದಲ್ಲಿದ್ದಾರೆ. ಈ ಮೂವರು ಆಟಗಾರರಿಗೂ ವಿಶ್ವಾದ್ಯಂತ ದೊಡ್ಡ ಅಭಿಮಾನಿ ವರ್ಗವಿದೆ. ನೋ ಟೌಟ್, ಈ ಬಾರಿ ಹೆಚ್ಚಿನ ಅಭಿಮಾನಿಗಳ ಬೆಂಬಲ ಆರ್‌ಸಿಬಿ ತಂಡಕ್ಕಿರುತ್ತದೆ. ಉಳಿದಂತೆ ಪುಣೆಯಲ್ಲಿ ಧೋನಿ, ಸ್ಮಿತ್. ಹೈದರಾಬಾದ್‌ನಲ್ಲಿ ಯುವರಾಜ್ ಸಿಂಗ್, ಡೇವಿಡ್ ವಾರ್ನರ್. ಮುಂಬೈನಲ್ಲಿ ರೋಹಿತ್ ಶರ್ಮಾ, ಕೈರನ್ ಪೊಲಾರ್ಡ್. ಕೋಲ್ಕತ್ತಾದಲ್ಲಿ ಗಂಭೀರ್, ರಾಬಿನ್ ಉತ್ತಪ್ಪ. ಪಂಜಾಬ್‌ನಲ್ಲಿ ಡೇವಿಡ್ ಮಿಲ್ಲರ್, ಗ್ಲೆನ್ ಮ್ಯಾಕ್ಸ್‌ವೆಲ್. ಗುಜರಾತ್‌ನಲ್ಲಿ ಸುರೇಶ್ ರೈನಾ….ಹೀಗಾ ಎಲ್ಲಾ ಫ್ರಾಂಚೈಸಿಯಲ್ಲಿಯೂ ಸ್ಟಾರ್ ಆಟಗಾರರು ಸಿಗುತ್ತಾರೆ. ಒಂದು ಮನೆಯಲ್ಲಿ ಒಬ್ಬ ತಂದೆ ಇಬ್ಬರು ಮಕ್ಕಳನ್ನು ಹೊಂದಿದ್ದರೆ, ಐಪಿಎಲ್ ವಿಷಯದಲ್ಲಿ ಮಾತ್ರ ಮನೆಯೊಂದು ಮೂರುಬಾಗಿಲು ಎನ್ನುವಂತೆ ಮೂವರದ್ದು ಒಂದೊಂದು ತಂಡವಾಗಿರುತ್ತದೆ.
ಏ.5 ರಿಂದ ಆರಂಭವಾದ ಐಪಿಎಲ್ ಅಂತ್ಯವಾಗುವುದು ಮೇ 21ಕ್ಕೆ. ಹೀಗಾಗಿ 47 ದಿನಗಳ ಕಾಲ ಅಭಿಮಾನಿಗಳ ಪಾಲಿಗೆ ಭರ್ಜರಿ ಹಬ್ಬ. ಬಿಸಿಲಿನ ಝಳ ಏರುತ್ತಿರುವಂತೆ ಕ್ರಿಕೆಟ್ ಜ್ವರ ಕೂಡ ಏರುತ್ತಿರುತ್ತದೆ. ಪ್ರತಿ ಬಾರಿ ಐಪಿಎಲ್ ಆರಂಭವಾದಾಗಲೂ ಈ ಬಾರಿ ಐಪಿಎಲ್ ಹವಾ ಅಷ್ಟೇನು ಇಲ್ಲ ಎನ್ನುತ್ತಲೇ ಆರಂಭವಾಗುತ್ತದೆ. ನಿಧಾನಕ್ಕೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಲಾರಂಭಿಸುತ್ತಾರೆ. ಹೀಗಾಗಿ ಕೊನೆಯ ಹಂತದಲ್ಲಿ ಮತ್ತಷ್ಟು ಕೌತುಕ, ಕುತೂಹಲ ಹುಟ್ಟಿಸಿರುತ್ತದೆ. ಕೊನೆಯ ಎಸೆತದವರೆಗೂ ಕುತೂಹಲ
ಐಪಿಎಲ್ ಪಂದ್ಯಗಳು ಅಭಿಮಾನಿಗಳನ್ನು ಕೊನೆಯ ಎಸೆತದವರೆಗೂ ಕ್ರೀಡಾಂಗಣದಲ್ಲಿ ಹಿಡಿದಿಡುತ್ತವೆ. ಯಾವ ಸಮಯದಲ್ಲಿ ಪಂದ್ಯ ತನ್ನ ದಿಕ್ಕನ್ನು ಬದಲಿಸುತ್ತದೆ ಎಂದು ಹೇಳಲಾಗದು. ಎಂದೂ ಕೇಳಿರದ ಆಟಗಾರನೊಬ್ಬ ಕೆಳ ಕ್ರಮಾಂಕದಲ್ಲಿ ಬಂದು ಸ್ಟಾರ್ ಬೌಲರ್‌ಗೆ ಸಿಕ್ಸರ್ ಬಾರಿಸುತ್ತಾನೆ. ಪಂದ್ಯದ ಗೆಲುವನ್ನೇ ಕಸಿದು ಬಿಡುತ್ತಾನೆ. ಒಂದೇ ದಿನದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಬಿಡುತ್ತಾನೆ. ಹೀಗಾಗಿ ಇಲ್ಲಿ ಯಾವ ಆಟಗಾರರನ್ನು ಕಡೆಗಣಿಸಲಾಗದು.
Related Articles
ಒಬ್ಬ ಬಲಾಡ್ಯ ಕ್ರಿಕೆಟಿಗನಾಗಿರುವ ಕ್ರಿಸ್ ಗೇಲ್‌ಗೆ ಭಾರತದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚು. ಗೇಲ್ ಸಿಕ್ಸ್ ಹೊಡಿಬೇಕು ಆದರೆ ಆರ್‌ಸಿಬಿ ಗೆಲ್ಲಬಾರದು ಅನ್ನುತ್ತಾರೆ ಇತರೆ ಫ್ರಾಂಚೈಸಿ ತಂಡದ ಅಭಿಮಾನಿಗಳು. ಕ್ರೀಸ್‌ನಲ್ಲಿ ಗೇಲ್ ಇದ್ದಾರೆ ಅಂದರೆ ಅಭಿಮಾನಿಗಳಿಗೆ ಹಬ್ಬ, ಎದುರಾಳಿ ತಂಡದ ಬೌಲರ್‌ಗಳಿಗೆ ಬೆವರಿಳಿಯುತ್ತೆ. ಸ್ಕೋರ್ ಮಾತ್ರ ಏರುತ್ತಿರುತ್ತದೆ.
Advertisement
ನಮ್ಮವರೇ ವಾಗ್ವಾದ ನಡೆಸುತ್ತಾರೆಐಪಿಎಲ್ನಲ್ಲಿ ಇದೊಂದು ದೊಡ್ಡ ಅಪಾಯ. ರಾಷ್ಟ್ರೀಯ ತಂಡದಲ್ಲಿ ಒಟ್ಟಿಗೆ ಆಡಿದವರು ಇಲ್ಲಿ ಬೇರೆ ಬೇರೆ ಫ್ರಾಂಚೈಸಿಗಳ ತಂಡದಲ್ಲಿ ಆಡುತ್ತಾರೆ. ಎಷ್ಟೋ ಸಂದರ್ಭದಲ್ಲಿ ಇವರೇ ವಾಗ್ವಾದ ನಡೆಸುತ್ತಾರೆ. ಈ ವಾಗ್ವಾದ ನಂತರವೂ ಬುದಿಮುಚ್ಚಿದ ಕೆಂಡದಂತಿರುತ್ತದೆ. ಆಮೇಲೆ ಸಮಯ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ನೀಡುತ್ತಾರೆ. ಈ ಹಿಂದೆ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಮತ್ತು ಹರ್ಭಜನ್ ಸಿಂಗ್, ಶ್ರೀಶಾಂತ್ ಕ್ರೀಡಾಂಗಣದಲ್ಲಿ ವಾಗ್ವಾದ ನಡೆಸಿದ್ದನ್ನು ನೋಡಿದ್ದೇವೆ. ಗಂಭೀರ್ ಮತ್ತು ಕೊಹ್ಲಿ ನಡುವಿನ ಸಂಬಂಧ ಇನ್ನೂ ಸರಿಯಾದಂತಿಲ್ಲ. ಆದರೆ ಸಚಿನ್, ದ್ರಾವಿಡ್, ಗಂಗೂಲಿ
ಅಂತಹ ಹಿರಿಯ ಆಟಗಾರರು ಐಪಿಎಲ್‌ನಲ್ಲಿ ಬೇರೆ ಬೇರೆ ತಂಡದಲ್ಲಿ ಆಡಿದರೂ ವಾಗ್ವಾದ ನಡೆಸಿದವರಲ್ಲಿ. ಅವರಲ್ಲಿ ಪ್ರೌಢಿಮೆ ಇತ್ತು. ಇಂದಿನ ಆಟಗಾರರಲ್ಲಿ ಅಂತಹ ಗುಣವನ್ನು ನಿರೀಕ್ಷಿಸಲಾಗದು. ಇದು ನಮ್ಮ ರಾಷ್ಟ್ರದ ಆಟಗಾರರಲ್ಲಿ ಮಾತ್ರವಲ್ಲ. ಐಪಿಎಲ್‌ನಲ್ಲಿ ಅತೀ ಹೆಚ್ಚಿನ ಆಟಗಾರರಿರುವ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಆಟಗಾರರ ನಡುವೆಯೂ ಇಂತಹ ಘಟನೆಗಳು ಮರುಕಳಿಸುತ್ತವೆ. ಆದರೆ ಇದು ಒಂದೇ ರಾಷ್ಟ್ರದ ಆಟಗಾರರ ಮೇಲೆ ಪರಿಣಾಮ ಬೀರುವುದನ್ನು ಅಲ್ಲಗೆಳೆಯಲಾಗದು.
ವಿರಾಟ್ ಕೊಹ್ಲಿ ಮತ್ತು ಎಂ.ಎಸ್.ಧೋನಿ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವವರು. ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ಆರ್‌ಸಿಬಿ ತಂಡದಲ್ಲಿ. ಧೋನಿ ಪುಣೆ ತಂಡದಲ್ಲಿ ಆಡುತ್ತಿದ್ದಾರೆ. ಎರಡೂ ತಂಡಗಳ ನಡುವಿನ ಪಂದ್ಯದಲ್ಲಿ ಪರಸ್ಪರ ಇಬ್ಬರು ಆಟಗಾರರೂ ಮಾತಿನ ಯುದ್ಧ ನಡೆಸಿದರೆ ಅಚ್ಚರಿ ಪಡಬೇಕಾಗಿಲ್ಲ. ಮಂಜು ಮಳಗುಳಿ