Advertisement

ಗೋ ಶಾಲೆ ಆರಂಭಿಸಲು ಒತ್ತಾಯಿಸಿ ಧರಣಿ

02:51 PM Sep 05, 2017 | Team Udayavani |

ಮೊಳಕಾಲ್ಮೂರು: ತಾಲೂಕಿನಲ್ಲಿ ಭೀಕರ ಬರ ಆವರಿಸಿರುವುದರಿಂದ ಗೋ ರಕ್ಷಣೆಗಾಗಿ ಕೂಡಲೇ ಗೋಶಾಲೆ ಆರಂಭಿಸಬೇಕೆಂದು ಆಗ್ರಹಿಸಿ ಸೋಮವಾರ ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಸೆಂಟರ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ ಸಂಘಟನೆ (ಸಿಐಟಿಯು) ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎಚ್‌.ಎ. ಮಾರಣ್ಣ, ತಾಲೂಕಿನಲ್ಲಿ ಈವರೆಗೂ ಉತ್ತಮ ಮಳೆಯಾಗಿಲ್ಲ. ಹೀಗಾಗಿ ಅಂತರ್ಜಲ ಬತ್ತಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ತಾಲೂಕಿನಲ್ಲಿನ ಗೋಶಾಲೆಗಳನ್ನು ಸೂಚನೆ ನೀಡದೆ ಸ್ಥಗಿತಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಗೋವುಗಳಿಗೆ ಮೇವು, ನೀರಿಲ್ಲದೆ ಪ್ರಾಣ ಕಳೆದುಕೊಳ್ಳುವ ಭೀತಿಯಲ್ಲಿವೆ. ಕೆಲವೆಡೆ ಮೇವು ಬ್ಯಾಂಕ್‌ ಗಳನ್ನು ಪ್ರಾರಂಭಿಸಿದ್ದರೂ ಬಡ ರೈತರಲ್ಲಿ ಹಣವಿಲ್ಲದೆ ಗೋವುಗಳನ್ನು ಸಂರಕ್ಷಿಸಿಕೊಳ್ಳಲಾಗದೆ ಕಸಾಯಿ ಖಾನೆಗೆ ದೂಡುವಂತಾಗಿದೆ ಎಂದರು.

ಪಟ್ಟಣದಲ್ಲಿ ಹಲವಾರು ದಶಕಗಳಿಂದಲೂ ವಸತಿ ರಹಿತ ನಿರ್ಗತಿಕ ಬಡ ಜನತೆಯು ವಾಸಿಸಲು ಸೂರಿಲ್ಲದೆ ಬಾಡಿಗೆ ಮನೆಗಳಲ್ಲಿ ದುಸ್ಥಿತಿಯ ಜೀವನ ಸಾಗಿಸುವಂತಾಗಿದೆ. ತಾಲೂಕಿನಲ್ಲಿ ಭೀಕರ ಬರ ಆವರಿಸಿರುವುದರಿಂದ ಒಪ್ಪತ್ತಿನ ಊಟಕ್ಕೂ ಚಿಂತಿಸುವ ಸಂಕಷ್ಟದಲ್ಲಿ ಕೆಲಸವಿಲ್ಲದೆ ಬಾಡಿಗೆ ಹಣ ಕಟ್ಟಲಾಗದೆ ಬೀದಿಗೆ ಬೀಳುವಂತಾಗಿರುವ ನೂರಾರು ಬಡ ಕುಟುಂಬಗಳ ಸ್ವಾಭಿಮಾನದ ಜೀವನಕ್ಕೆ ಸೂರು ಕಲ್ಪಿಸಬೇಕು. ಮುಂದಿನ ಬುಧವಾರದೊಳಗೆ ತಾಲೂಕಿನಲ್ಲಿ ಗೋಶಾಲೆಗಳನ್ನು ಪ್ರಾರಂಭಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

ತಹಶೀಲ್ದಾರ್‌ ಜಿ. ಕೊಟ್ರೇಶ್‌ ಅವರಿಗೆ ಮನವಿ ಸಲ್ಲಿಸಿದರು. ಸ್ತ್ರೀ ಸುರಕ್ಷಿತಾ ಮಹಿಳಾ ಸಂಘದ ಅಧ್ಯಕ್ಷೆ ಸರಸ್ವತಿ, ವನರಾಜ, ಸಣ್ಣಣ್ಣ, ಪಾಲಣ್ಣ, ದಾನಪ್ಪ, ಶಿವಣ್ಣ, ತಿಪ್ಪಮ್ಮ, ವೀಣಾ, ಲಕ್ಷ್ಮೀ, ಮೀನಾಕ್ಷಿ, ಮಂಗಳಮ್ಮ, ರಾಧಾ, ರಾಧಿಕಾ, ವಿಜಯಲಕ್ಷ್ಮೀ, ಅಂಜಿನಮ್ಮ, ಬೋರಕ್ಕ, ಗಂಗಮ್ಮ, ಹನುಮಕ್ಕ, ಯಶೋದಾ, ಚಂದ್ರಮ್ಮ, ಶಿವಮ್ಮ ಹಾಗೂ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next