Advertisement

ಅಗ್ನಿದುರಂತ ದುಃಸ್ವಪ್ನ ಮರೆತು ಕಾರ್ಲ್ಟನ್‌ ಟವರ್‌ ಆರಂಭ

11:51 AM Jul 04, 2017 | Team Udayavani |

ಬೆಂಗಳೂರು: ಏಳು ವರ್ಷಗಳ ಹಿಂದೆ ಅಗ್ನಿ ಆಕಸ್ಮಿಕದಿಂದಾಗಿ ಒಂಬತ್ತು ಮಂದಿ ಮೃತಪಟ್ಟಿದ್ದ ನಗರದ ದೊಮ್ಮಲೂರು ಬಳಿಯ ಕಾರ್ಲ್ಟನ್‌ ಟವರ್ಸ್‌ ಇದೀಗ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಳಕೆಗೆ ಸಜ್ಜಾಗಿದೆ. 2010ರ ಫೆ.23ರಂದು ಅಗ್ನಿ ಅವಘಡ ಸಂಭವಿಸಿದ ನಂತರ ಬಂದ್‌ ಆಗಿದ್ದ ಕಟ್ಟಡ ಏಳು ವರ್ಷದ ನಂತರ ಪುನರಾರಂಭವಾಗುತ್ತಿದೆ.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಲ್ಟನ್‌ ಟವರ್ಸ್‌ ಓನರ್ಸ್‌ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ಗಿರಿರಾಜ್‌ ಸದಾಶಿವ, ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಈ ಕಾಲ್‌ಟರ್ನ್ ಟವರ್ಸ್‌ನಲ್ಲಿ ವಾಣಿಜ್ಯ ವಲಯದಲ್ಲಿ ಜಾಗತಿಕ ಮಟ್ಟದ ಸೌಲಭ್ಯಗಳನ್ನು ನೀಡಲಿದ್ದೇವೆ. ಜು.1ರಂದು ಬಿಬಿಎಂಪಿ ವಾಸಯೋಗ್ಯ ಮಾನ್ಯತೆ ಪತ್ರ ನೀಡಿದೆ. ಕಾಲ್‌ಟರ್ನ್ ಟವರ್ಸ್‌ ಎಲ್ಲ ಸುರಕ್ಷತೆಯ ನಿಯಮಗಳನ್ನು ಅನುಸರಿಸಿದ್ದು, ವಾಸಯೋಗ್ಯಕ್ಕೆ ಸಿದ್ಧವಾಗಿದೆ. ಪ್ರಸ್ತುತ 160 ಘಟಕಗಳು ಬಹುತೇಕ ಬಳಕೆಯಾಗುತ್ತಿವೆ ಎಂದು ಹೇಳಿದರು.  

ಕಟ್ಟಡಕ್ಕೆ ಪಲಾಯನ ಮಾರ್ಗಗಳು ಮತ್ತು ಅಗ್ನಿ ನಿರೋಧಕ ಬೋರ್ಡ್‌ಗಳನ್ನು ಹೊಸದಾಗಿ ಬದಲಾಯಿಸಲಾಗಿದೆ. ಹಳೆಯ ಜನರೇಟರ್‌ಗಳ ಬದಲು ಹೊಸ 3 ಶಕ್ತಿಯುತ ಮತ್ತು ಸುರಕ್ಷಿತ 1500 ಕೆವಿಎ ಸಾಮರ್ಥ್ಯದ ಜನರೇಟರ್‌ಗಳನ್ನು ಬದಲಾಯಿಸಲಾಗಿದ್ದು, ಇವುಗಳು ಕಟ್ಟಡಕ್ಕೆ ಶೇ.100ರಷ್ಟು ಬ್ಯಾಕಪ್‌ ನೀಡುತ್ತವೆ. ಫೈರ್‌ ಹೈಡ್ರೆಂಟ್‌, ಪಿಎ ಸಿಸ್ಟಂ, ಸೈನೇಜ್‌, ಅಗತ್ಯಕ್ಕೆ ತಕ್ಕಂತೆ ಗೌ‌ಂಡಿಂಗ್‌ ಸ್ವಿಚ್‌ ನೀಡಲಾಗಿದೆ.

ಬೆಂಕಿ ಅನಾಹುತದ ತುರ್ತು ಸಂದರ್ಭದಲ್ಲಿ ರಾಷ್ಟ್ರೀಯ ಕಟ್ಟಡ ನಿಯಮಾವಳಿ 30 ಮೀಟರ್‌ಗಳಲ್ಲಿ ಮೆಟ್ಟಿಲು ಲಭ್ಯವಾಗುವಂತೆ ಇದ್ದರೂ ಕೇವಲ 18 ಮೀಟರ್‌ಗಳಿಗೆ ಮೆಟ್ಟಿಲು ದೊರೆಯುವಂತೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next