Advertisement
ಬಸ್ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಅಳುತ್ತಿರುವ ಮಗುವನ್ನು ಗಮನಿಸಿದ ಸಿಬಂದಿ ಮಗುವನ್ನು ಪಿಂಕ್ ಪೊಲೀಸರಿಗೆ ಹಸ್ತಾಂತರಿಸಿದರು. ಮಗುವಿನ ಕೈಯಲ್ಲಿದ್ದ ಶಾಲಾ ಬ್ಯಾಗ್‌ನಲ್ಲಿದ್ದ ಡೈರಿಯಲ್ಲಿ ಇದ್ದ ಫೋನ್ ಸಂಖ್ಯೆಗೆ ಕರೆ ಮಾಡಿದಾಗ ಯಾರೂ ಸ್ವೀಕರಿಸಲಿಲ್ಲ. ಬಳಿಕ ಪೊಲೀಸರು ಮಗುವನ್ನು ಶಾಲೆಗೆ ಕರೆದುಕೊಂಡು ಹೋದರು. ಶಾಲೆಯವರ ಮುಖಾಂತರ ಸಂಬಂಧಿಕರನ್ನು ಕರೆಸಿ ಮಗುವನ್ನು ಹಸ್ತಾಂತರಿಸಲಾಯಿತು.
ವಿದ್ಯಾನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರನ್ನು ನೋಡಲೆಂದು ಅವರ ಸಂಬಂಧಿಕರು ಬಂದಿದ್ದು, ಬಸ್ ವಿದ್ಯಾನಗರ ತಲುಪುತ್ತಿದ್ದಂತೆ ಮಗುವನ್ನು ಮರೆತು ಇಳಿದಿದ್ದರು. ಪೊಲೀಸರು ಮಗುವನ್ನು ವಾರಸುದಾರರಿಗೆ ಒಪ್ಪಿಸಿದ ಬಳಿಕವಷ್ಟೇ ತಾಯಿಗೆ ತನ್ನೊಂದಿಗೆ ಮಗು ಕೂಡ ಬಂದಿತ್ತು ಎಂಬುದು ಜ್ಞಾಪಕವಾಯಿತು!