Advertisement

ಗ್ರಾಮಕ್ಕೆ ಬಂದ ಕಾಡಾನೆಗಳು!

01:52 AM May 16, 2019 | Sriram |

ಮಡಿಕೇರಿ: ಕಾಡಿನಿಂದ ನಾಡಿಗೆ ಬಂದ ಕಾಡಾನೆ ಹಿಂಡನ್ನು ಅರಣ್ಯ ಇಲಾಖೆ ಸಿಬಂದಿ ಮರಳಿ ಕಾಡಿಗೆ ಅಟ್ಟಿದ್ದಾರೆ.

Advertisement

ಎರಡು ದಿನಗಳ ಹಿಂದೆ ದುಬಾರೆ ಮೀಸಲು ಅರಣ್ಯದಿಂದ ಕಾವೇರಿ ನದಿ ದಾಟಿ ಬಂದ 13ಕ್ಕೂ ಹೆಚ್ಚು ಕಾಡಾನೆಗಳು ಅಭ್ಯತ್‌ ಮಂಗಲ, ವಾಲೂ°ರು, ತ್ಯಾಗತ್ತೂರು, ಒಂಟಿ ಅಂಗಡಿ, ನೆಲ್ಲಿಹುದಿಕೇರಿ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡವು.

ಆನೆಗಳ ದಾಳಿಯಿಂದ ಕಾರ್ಮಿಕರು ಭಯಭೀತರಾದರು. ಹಗಲಿನಲ್ಲೂ ರಾಜಾರೋಷವಾಗಿ ರಸ್ತೆಗಳಲ್ಲೇ ನಡೆದಾಡಿದ ಆನೆಗಳನ್ನು ಕಂಡು ವಾಹನಗಳ ಸವಾರರೂ ಆತಂಕಕ್ಕೊಳಗಾಗಿದ್ದರು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬಂದಿ ಕಾರ್ಯಾಚರಣೆ ನಡೆಸಿ ಮತ್ತೆ ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆನೆಗಳಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಆರ್‌ಎಫ್ಒ ಅರುಣ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಲಾಸ್‌ ಗೌಡ, ಅರಣ್ಯ ರಕ್ಷಕ ಚರಣ್‌, ಸಿಬಂದಿಗಳಾದ ಧರ್ಮಪಾಲ್‌, ಜಗದೀಶ್‌, ಆಲ್ಬರ್ಟ್‌, ವಾಸುದೇವ, ಆರ್‌ಆರ್‌ಟಿ ತಂಡದ ಆಶಿಕ್‌, ಸುಬ್ರಹ್ಮಣ್ಯ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next