Advertisement
ಸ್ವಾತಂತ್ರ್ಯಾ ನಂತರದ ಎಪ್ಪತ್ತು ವರ್ಷಗಳಲ್ಲಿ, ಭಾರತದ ಎಲ್ಲಾ ನದಿಗಳು, ಸರಾಸರಿ ಶೇ.40 ರಷ್ಟು ಕ್ಷೀಣಿಸಿವೆ. ಕೃಷ್ಣಾ ಮತ್ತು ನರ್ಮದಾಗಳಂತಹ ಅನೇಕ ನದಿಗಳು ಶೇ.60ರಷ್ಟು ಕ್ಷೀಣಿಸಿವೆ. ನೀರಿನ ಸಂಕಟ ಇಂದು ನಿನ್ನೆಯದಲ್ಲ.
Related Articles
ನದಿ, ಕೊಳ ಅಥವಾ ಸರೋವರಗಳೇ ನೀರಿನ ಮೂಲಗಳೆಂದು ಜನರು ತಿಳಿದಿದ್ದಾರೆ. ಉಷ್ಣ ವಲಯ ಪ್ರದೇಶದಲ್ಲಿ ಇವು ನೀರಿನ ಮೂಲಗಳಲ್ಲ, ನೀರಿನ ಗಮ್ಯಗಳಷ್ಟೇ. ನಮಗಿರುವುದು ಕೇವಲ ಒಂದೇ ಒಂದು ನೀರಿನ ಮೂಲ, ಅದು ಮಳೆ. ಮುಂಗಾರಿನ ಮಳೆಯು ಸುಮಾರು ನಲವತ್ತೆದರಿಂದ ಅರವತ್ತು ದಿನಗಳವರೆಗೆ ಅಗಾಧ ಪ್ರಮಾಣದ ನೀರನ್ನು ಸುರಿಸುತ್ತದೆ. ಈ ಅಪಾರ ಪ್ರಮಾಣದ ನೀರು ಹರಿದಾಗ, ಅದನ್ನು ಹಿಡಿದಿಡಲು ನಮ್ಮ ಮಣ್ಣಿನ ಸಾಮರ್ಥ್ಯ ಎಷ್ಟಿದೆ ಎಂಬುದರ ಆಧಾರದ ಮೇಲೆ ನದಿಗಳು ವರ್ಷದಲ್ಲಿ ಎಷ್ಟು ದಿನ ಹರಿಯುತ್ತವೆ ಎಂಬುದು ನಿರ್ಧರಿತವಾಗುತ್ತದೆ. ನಮ್ಮ ನದಿಗಳು ಯುರೋಪಿನ ಅಥವಾ ಉತ್ತರ ಅಮೆರಿಕದ ನದಿಗಳಂತೆ ಅಲ್ಲ. ಅಲ್ಲಿ ಹಿಮಗಡ್ಡೆಯಿಂದ ಬರುವ ನೀರು ಲಭ್ಯವಿದೆ. ಹಿಮವು ಸುಮಾರು ಎರಡು ತಿಂಗಳ ಕಾಲ ನೆಲದ ಮೇಲಿರುತ್ತದೆ, ನಿಧಾನವಾಗಿ ಕರಗುತ್ತದೆ ಮತ್ತು ಮಣ್ಣಿಗಿಳಿಯುತ್ತದೆ. ಭಾರತದಲ್ಲಿ ನೀರು ಮಳೆಯಿಂದ ಬರುತ್ತದೆ. ನಾವದನ್ನು ಹಿಡಿದಿಟ್ಟರೆ, ನದಿಯು 365 ದಿನಗಳ ಕಾಲ ಹರಿಯುತ್ತದೆ. ನಾವದನ್ನು ಹಿಡಿದಿಡದಿದ್ದರೆ, ಅದು ಮುಂದಿನ ಹದಿನೈದು ಇಪ್ಪತ್ತು ದಿನಗಳಲ್ಲಿ ಹರಿದುಹೋಗುತ್ತದೆ.
Advertisement
ಹಾಗಾಗಿ ನಮಗೆ ನೀರನ್ನು ಹಿಡಿದಿಡಲು ಅನುವು ಮಾಡಿಕೊಡುವುದು ಯಾವುದು? ನೀವು ನೀರನ್ನು ಅಣೆಕಟ್ಟು, ಚೆಕ್ ಡ್ಯಾಂ ಅಥವಾ ಬ್ಯಾರೇಜಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅವು ನೀರಿನ ಬಳಕೆಯಲ್ಲಿ ಪರಿಣಾಮಕಾರಿಯಾಗಿವೆ. ಆದರೆ, ಅವು ನೀರು ಪೂರೈಕೆಯನ್ನು ಉತ್ತಮಗೊಳಿಸಲಾರವು. ಸಸ್ಯಸಂಪತ್ತಿನಿಂದ ಮಾತ್ರ ನೀರನ್ನು ನೆಲದಲ್ಲಿ ಹಿಡಿದಿಡಲು ಸಾಧ್ಯ.
ಇದೇನೂ ರಾಕೆಟ್ ವಿಜ್ಞಾನವಲ್ಲ. ಈ ದೇಶದ ಹಸಿರು ಹೊದಿಕೆಯನ್ನು ಮತ್ತೆ ಹೆಚ್ಚಿಸಬೇಕು. ಅದು ಹೇಗೆ? ನಾವು ನೂರ ಮೂವತ್ತು ಕೋಟಿ ಜನರಿದ್ದೇವೆ. ಮತ್ತು 2030ರ ವೇಳೆಗೆ, ನಾವು ನೂರೈವತ್ತು ಕೋಟಿಯಷ್ಟಾಗುತ್ತೇವೆ. ಅತಿಯಾದ ಜನಸಂಖ್ಯೆಯ ಒತ್ತಡವಿರುವುದರಿಂದ ಕಾಡನ್ನು ಹೆಚ್ಚಿಸಲಾಗದು. ಹಾಗಿ ದ್ದ ರೆ ಅರಣ್ಯ ಕೃಷಿಯನ್ನು ಕೈಗೊಳ್ಳುವುದೊಂದೇ ನಮಗಿರುವ ಏಕೈಕ ದಾರಿ-ನಾವು ನಮ್ಮ ಜೀವನೋಪಾಯಕ್ಕಾಗಿ ಮರಗಳನ್ನು ಉಪಯೋಗಿಸಬೇಕು, ಮರಗಳನ್ನು ಆರ್ಥಿಕ ಕಾರಣಗಳಿಗಾಗಿ ಬೆಳೆಯಬೇಕು.
ನಮ್ಮ ದೇಶದಲ್ಲಿ ಶೇ.50ರಷ್ಟು ಭೂಮಿ ಕೃಷಿಗಾಗಿ ಬಳಕೆಯಾಗುತ್ತದೆ. ಕೊಯಮತ್ತೂರಿನಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುವಾ ಗ ಪ್ರತಿ ಐದು ನಿಮಿಷಗಳಿಗೊಮ್ಮೆ ಕಿಟಕಿಯಿಂದ ನೋಡಿದರೆ ಪಶ್ಚಿಮಘಟ್ಟಗಳನ್ನು ಹೊರತುಪಡಿಸಿದರೆ ನಿಮಗೆ ಕಾಣುವುದು ಬರೀ ಕಂದು ಬಣ್ಣದ ಮರುಭೂಮಿ. ಇದು ಕೇವಲ ವಿವೇಕರಹಿತ ಕೃಷಿಯಷ್ಟೆ.
ನಾವು ಅರಣ್ಯಕೃಷಿಗೆ ಮರಳಬೇಕು. ಇದೇನೂ ಹೊಸ ಉಪಾಯ ಅಥವಾ ಪರಿಕಲ್ಪನೆಯಲ್ಲ. ದಕ್ಷಿಣ ಭಾರತದಲ್ಲಿ ಯಾವುದೇ ಕೃಷಿ ಭೂಮಿಯಿರಲಿ, ಕೊನೆಯ ಪಕ್ಷ ಕೃಷಿ ಭೂಮಿಯ ಅಂಚಿನಲ್ಲಾದರೂ ಏನಿಲ್ಲವೆಂದರೂ ನಲವತೈದರಿಂದ ಐವತ್ತು ಮರಗಳಿರುತ್ತಿದ್ದವು. ಕರ್ನಾಟಕದಲ್ಲಿ ಜನರು ಮಗ ಅಥವಾ ಮಗಳು ಹುಟ್ಟಿದರೆ ಗಿಡ ನೆಡುವುದನ್ನು ನಾನು ಕಂಡಿದ್ದೇನೆ. ಅವರ ಮಗ/ಮಗಳು 18-20 ವರ್ಷ ವಯಸ್ಸಿಗೆ ಬಂದಾಗ ಈ ಮರವೂ ಸಹ ಪರಿಪೂರ್ಣವಾಗಿ ಬೆಳೆದಿರುತ್ತದೆ. ಅವರು ಈ ಮರವನ್ನು ಕಡಿದರೆ, ಅವಳ ಮದುವೆಯನ್ನು ಆರಾಮವಾಗಿ ಮಾಡಬಹುದು. ಅದು ಮಗನ ವಿದ್ಯಾಭ್ಯಾಸದ ಖರ್ಚಿಗೂ ಆಗುತ್ತದೆ. ಇದು ಗ್ರಾಮೀಣ ಪ್ರದೇಶಗಳ ಆರ್ಥಿಕತೆಯಾಗಿತ್ತು.
ಸುಮಾರು ನಲವತ್ತು ವರ್ಷಗಳ ಹಿಂದೆ, ಬೃಹತ್ ಪ್ರಮಾಣದ ರಾಸಾಯನಿಕ ಗೊಬ್ಬರದ ಬಳಕೆ ಪ್ರಾರಂಭವಾಯಿತು. ನಾನಾಗ ಕೃಷಿ ಮಾಡುತ್ತಿದ್ದೆ. ಗೊಬ್ಬರದ ಕಾರ್ಖಾನೆಗಳಿಂದ ಏಜೆಂಟರು ಬಂದು “”ನೀವು ಮರಗಳನ್ನು ತೆಗೆದುಹಾಕಬೇಕು. ಅವುಗಳಿಗೆ ಬಲವಾದ ಬೇರುಗಳಿರುವುದರಿಂದ, ನೀವು ಹಾಕಿದ ಗೊಬ್ಬರವನ್ನೆಲ್ಲಾ ಹೀರಿಕೊಂಡುಬಿಡುತ್ತವೆ. ಅದರಿಂದ ಗೊಬ್ಬರವು ನಿಮ್ಮ ಬೆಳೆಗಳಿಗೆ ಸಿಗುವುದಿಲ್ಲ” ಎಂದು ಪ್ರಚಾರ ಮಾಡುತ್ತಿದ್ದರು. ಹಾಗಾಗಿ ಕರ್ನಾಟಕದಲ್ಲಿ ಕೋಟ್ಯಂತರ ಮರಗಳನ್ನು ಕಡಿಯಲಾಯಿತು. ಕೇವಲ ಎರಡು ತಲೆಮಾರುಗಳಲ್ಲಿ ನಾವು ಎಂತಹ ಪರಿಸ್ಥಿತಿಯನ್ನು ತಲುಪಿದ್ದೇವೆಂದರೆ, ನಮ್ಮ ಅಂತರ್ಜಲ ಅಪಾರವಾಗಿ ಕ್ಷೀಣಿಸಿ ಬಿಟ್ಟಿದೆ, ನದಿಯ ನೀರು ಕಡಿಮೆಯಾಗುತ್ತಿದೆ, ಪ್ರತಿಯೊಂದು ನೀರಿನ ಮೂಲವೂ ಕ್ಷೀಣಿಸುತ್ತಿದೆ. ಕೇವಲ ಎರಡು ತಲೆಮಾರುಗಳಲ್ಲಿ ಭಾರತದ ಶೇಕಡಾ ಇಪ್ಪತ್ತೆ çದರಷ್ಟು ಭೂಮಿ ಮರುಭೂಮಿಯಾಗುವ ಹಂತದಲ್ಲಿದೆ.
ಸಹಜ ಕೃಷಿಯೊಂದೇ ಸುಸ್ಥಿರ ಮಾರ್ಗಆಧುನಿಕ ಕೃಷಿಯು ನೆಲದಲ್ಲಿರುವ ಜೀವರಾಶಿಗೆ ಏನಾಗುತ್ತದೆ ಎಂದು ನೋಡದೆ, ನೆಲದಿಂದ ಬಲವಂತವಾಗಿ ಬೆಳೆಯನ್ನು ಪಡೆಯಲು ಪ್ರಯತ್ನಿಸುತ್ತದೆ. ಮುಂದಿನ ಪೀಳಿಗೆಗಳು ಚೆನ್ನಾಗಿ ಬದುಕಬೇಕೆಂದರೆ ಸಹಜಕೃಷಿಯೊಂದೇ ಏಕೈಕ ಮಾರ್ಗವಾಗಿದೆ. ಮಣ್ಣು ಶ್ರೀಮಂತವಾಗಿ ಇರಬೇಕೆಂದರೆ ಪ್ರಾಣಿಗಳ ಮಲ-ಮೂತ್ರ ಮತ್ತು ಮರಗಿಡಗಳ ಎಲೆಗಳಿರಬೇಕು. ನಾವು ಸಹಜ ಕೃಷಿಗೆ ಹಿಂತಿರುಗದಿದ್ದರೆ ಮತ್ತು ಮಣ್ಣನ್ನು ಸಂರಕ್ಷಿಸದಿದ್ದರೆ, ನಮಗೆ ನಿಜವಾಗಿಯೂ ಭವಿಷ್ಯವಿಲ್ಲ. ರೈತರು ಅರಣ್ಯ ಕೃಷಿ ಮಾಡಲು ತೊಡಗಿದರೆ, ಅದು ಕೇವಲ ನದಿ ಮತ್ತು ಮಣ್ಣನ್ನು ಪುನಃಶ್ಚೇತನ ಮಾಡುವುದಷ್ಟೇ ಅಲ್ಲದೆ, ರೈತರ ಆದಾಯವನ್ನು ಮೂರರಿಂದ ಎಂಟುಪಟ್ಟು ವೃದ್ಧಿಸುತ್ತದೆ. ನಾನು ಈ ಉದ್ದೇಶದಿಂದಲೇ “”ಕಾವೇರಿ ಕೂಗು” ಯೋಜನೆಯನ್ನು ಪ್ರಾರಂಭಿಸಿದ್ದು. ನಾವು ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ನೆಡಲು ಪ್ರೋತ್ಸಾಹ ನೀಡುವ ರೈತರಿಗಾಗಿ ಎದುರುನೋಡುತ್ತಿದ್ದೇವೆ. ಕಾವೇರಿಯದು ಮೊದಲನೇ ಹೆಜ್ಜೆ ಅಷ್ಟೆ. ಕಾವೇರಿ ಜಲಾನಯನ ಪ್ರದೇಶದಲ್ಲಿ, ಹನ್ನೆರಡು ವರ್ಷಗಳಲ್ಲಿ ನಾವಿದನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾದರೆ, ಇದು ನಮ್ಮ ದೇಶಕ್ಕೆ ಮತ್ತು ಜಗತ್ತಿಗೆ ಒಂದು ವರದಾನವಾಗಲಿದೆ. ರೈತರು ಅರಣ್ಯಕೃಷಿಯತ್ತ ಮುಖ ಮಾಡಲು, ಆಗಬೇಕಾದ ಕೆಲಸವೆಂದರೆ ಬೃಹತ್ ಪ್ರಮಾಣದಲ್ಲಿ ಸಸಿಗಳ ಉತ್ಪಾದನೆ. ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ, ಒಂದು ಸಸಿಗೆ ಸುಮಾರು ನಲವತ್ತೆರಡು ರೂಪಾಯಿಗಳಷ್ಟು ಖರ್ಚಾಗುತ್ತದೆ. ಇದಕ್ಕೆ ನಾವು ಸಾರ್ವಜನಿಕರಿಂದ ನಿಧಿಯನ್ನು ಸಂಗ್ರಹಿಸುತ್ತಿದ್ದೇವೆ. ನೀರನ್ನು ಉಪಯೋಗಿಸುವ ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳಬೇಕು, ಏಕೆಂದರೆ ಇದು ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. “”ಕಾವೇರಿಯು ದಕ್ಷಿಣದಲ್ಲಿ ಹರಿಯುವ ನದಿ, ಹಾಗಾಗಿ ನಾವೇಕೆ ಇದರಲ್ಲಿ ಪಾಲ್ಗೊಳ್ಳಬೇಕು?” ಎಂದು ಯೋಚಿಸಬೇಡಿ ಎಂದು ನಾನು ದೇಶದ ಎಲ್ಲಾ ಜನರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇದು “ನೀರಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯ. ಸೂಕ್ತ ಪ್ರಯತ್ನದಿಂದ ಒಂದು ದೊಡ್ಡ ನದಿಯನ್ನು ಪುನರುಜ್ಜೀವಗೊಳಿಸಬಹುದು ಎಂಬ ಸಂಗತಿಯನ್ನು ದೇಶಕ್ಕೆ ಮತ್ತು ಪ್ರಪಂಚಕ್ಕೆ ಸ್ಪಷ್ಟವಾಗಿ ತೋರಿಸಿಕೊಡುವ ಕೆಲ ಸ. ಕಾವೇರಿಯನ್ನು ಪುನರುಜ್ಜೀವಗೊಳಿಸುವು ದೇ ನಾವು ಮುಂದಿನ ಪೀಳಿಗೆಗಳಿಗೆ ನೀಡುವ ಕೊಡುಗೆಯಾಗಿದೆ. ಸದ್ಗುರು ಅವರು ಯೋಗಿ, ಆಧ್ಯಾತ್ಮಿಕ ನಾಯಕ.
isha.sadhguru.org/in/kn ಏನಿದು ಕಾವೇರಿಯ ಕೂಗು
ನಮ್ಮ ದೇಶದ ಜೀವನಾಡಿಗಳಂತಿರುವ ನದಿಗಳನ್ನು ಹೇಗೆ ಪುನರುಜ್ಜೀವಗೊಳಿಸಬಹುದು ಎಂಬುದರ ಮಾನದಂಡವನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಕಾವೇರಿ ಕೂಗು ಅಭಿಯಾನವನ್ನು ಮೊದಲನೆಯ ಪ್ರಯತ್ನ ಎನ್ನಬಹುದು. ಇದರ ಅಂಗವಾಗಿ ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ನೆಡಲು ರೈತರಿಗೆ ಬೆಂಬಲ ನೀಡುವ ಮೂಲಕ ಕಾವೇರಿ ನದಿಯ ಪುನರುಜ್ಜೀವನಕ್ಕೆ ಚಾಲನೆ ನೀಡಲಾಗು ವುದು. ಇದೆಲ್ಲದರ ಫಲವಾಗಿ ಜಲಾನಯನ ಪ್ರದೇಶದಲ್ಲಿ ನೀರಿನ ಧಾರಣೆ ಅಧಿ ಕವಾಗುತ್ತದೆ ಹಾಗೂ 5 ರಿಂದ 7 ವರ್ಷ ಗಳಲ್ಲಿ ರೈತರ ಆದಾಯವನ್ನು 3 ರಿಂದ 8 ಪಟ್ಟು ಹೆಚ್ಚಿಸುತ್ತದೆ ಮತ್ತು 84 ದಶಲಕ್ಷ ಜನರ ಜೀವನವನ್ನು ಬದಲಿಸುತ್ತದೆ. ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ: Kannada.Cauvery Calling.org ಅಥವಾ 80009 80009 ಗೆ ಕರೆ ಮಾಡಿ. ಸದ್ಗುರು