ಅರಂತೋಡು: ತೊಡಿಕಾನ ಸಮೀಪದ ಕೊಡಗು ಜಿಲ್ಲೆಗೆ ಸೇರಿದ ಪಾರೆಸ್ಟ್ ವಾಚರ್ ಆಕಸ್ಮಿಕವಾಗಿ ಹೊಳೆಗೆ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮೃತಪಟ್ಟ ಫಾರೆಸ್ಟ್ ವಾಚರ್ ಚಿನ್ನಪ್ಪ (58 ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮಳಲಿ ಮಸೀದಿಗೆ ಸಂಬಂಧಿಸಿದ ವ್ಯಾಜ್ಯ ವಿಚಾರಣೆಗೆ ಕೋರ್ಟ್ ಅಸ್ತು
ಕೊಡಗು ಅರಣ್ಯ ಇಲಾಖೆಯಿಂದ ಭೂಮಿಯ ಸರ್ವೆಗೆ ಹೋದ ಸಂದರ್ಭ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳು ಮೊಟ್ಟೆ ಎಂಬಲ್ಲಿ ಹೊಳೆ ಬದಿಯಲ್ಲಿ ನೀರು ಕುಡಿಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತ ದೇಹ ಹೊಳೆಯಲ್ಲಿದ್ದು ಪೊಲೀಸರು ಮತ್ತು ಮನೆಯವರು ಬಂದ ಬಳಿಕ ತೆಗೆಯಲಾಗುವುದೆಂದು ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯ ಬಳಿಕ ತಿಳಿದು ಬರಬೇಕಾಗಿದೆ