Advertisement

ವಿದ್ಯಾರ್ಥಿಗಳ ವನದರ್ಶನಕ್ಕೆ ಚಾಲನೆ

12:47 PM Nov 24, 2019 | Suhan S |

ಮುಂಡರಗಿ: ಪಟ್ಟಣದ ಕಪ್ಪತ್ತಹಿಲ್ಸ್‌ ಅರಣ್ಯ ಇಲಾಖೆ ಕಾರ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕಪ್ಪತ್ತಹಿಲ್ಸ್‌ ಅರಣ್ಯ ವಲಯ ಸಂಯಕ್ತಾಶ್ರಯದಲ್ಲಿ ನಡೆದ ಚಿಣ್ಣರ ವನದರ್ಶನ ಕಾರ್ಯಕ್ರಮಕ್ಕೆ ಕರಬಸಪ್ಪ ಹಂಚಿನಾಳ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕರಬಸಪ್ಪ ಹಂಚಿನಾಳ, ಶಾಲೆ ಮಕ್ಕಳಿಗೆ ಅರಣ್ಯ ಕುರಿತು ತಿಳಿವಳಿಕೆ ಮೂಡಿಸುವ ಚಿಣ್ಣರ ವನದರ್ಶನ ಕಾರ್ಯಕ್ರಮ ಉತ್ತಮವಾಗಿದೆ. ಇಂತಹ ಕಾರ್ಯಕ್ರಮ ಮೂಲಕ ಮಕ್ಕಳು ಅರಣ್ಯ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿದೆ. ಭವಿಷ್ಯದ ದಿನಗಳಲ್ಲಿ ಮಕ್ಕಳು ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗಲಿದೆ ಎಂದರು. ಕಪ್ಪತ್ತಹಿಲ್ಸ್‌ ವಲಯ ಅರಣ್ಯಾಧಿ ಕಾರಿ ಶಿವರಾತ್ರೇಶ್ವರಸ್ವಾಮಿ ಎಚ್‌.ಎಂ, ಬಿಇಒ ಎಸ್‌.ಎನ್‌. ಹಳ್ಳಿಗುಡಿ, ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ, ಆರ್‌.ಎಲ್‌. ಬದಾಮಿ, ಸಿ.ಎಸ್‌. ಅರಸನಾಳ, ನಿಂಗೂ ಸೊಲಗಿ, ಸಿ.ಆರ್‌. ಚೌಧರಿ, ಎಸ್‌.ಎಸ್‌. ಮುಂಡರಗಿ, ಕಾಶಿನಾಥ ಶಿರಬಡಗಿ, ಮಹೇಶ, ಫಕಿರೇಶ ರ್ಯಾವಣಕಿ, ಕುಮಾರ್‌ ಎಸ್‌., ಎಚ್‌. ಎಸ್‌. ಪೂಜಾರ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next