Advertisement

ಸರಕಾರ ಬಡ ಅರಣ್ಯ ಅತಿಕ್ರಮಣದಾರರ ಮೇಲೆ ಗದಾ ಪ್ರಹಾರ ಮಾಡಬಾರದು: ನ್ಯಾ. ನಾಗಮೋಹನದಾಸ್

05:54 PM Jun 04, 2022 | Team Udayavani |

ಶಿರಸಿ:  ಸರಕಾರವು ಬಡ ಅರಣ್ಯ ಅತಿಕ್ರಮಣದಾರರ ಮೇಲೆ ಗದಾ ಪ್ರಹಾರ ಮಾಡಬಾರದು. ಇದನ್ನು  ಯಾವ‌ ಧರ್ಮ, ಕಾನೂನು‌  ಕೂಡ ಒಪ್ಪುವದಿಲ್ಲ ಎಂದು‌ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಪ್ರತಿಪಾದಿಸಿದರು.

Advertisement

ಶನಿವಾರ ಅವರು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಅರಣ್ಯ ಭೂಮಿ ಹಕ್ಕು ಸುಪ್ರೀಂ ಕೋರ್ಟ್ ವಿಚಾರಣೆ ರಾಜ್ಯ ಮಟ್ಟದ ಚಿಂತನ ಕೂಟ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.

ಭೂ ಪ್ರಶ್ನೆ ಎಲ್ಲಿಯವರೆಗೆ ನಿಲ್ಲುವುದಿಲ್ಲವೋ ಅಲ್ಲಿಯ ವರೆಗೆ ಯುದ್ದಗಳೂ ನಿಲ್ಲಿವುದಿಲ್ಲ. ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲಿಯವರೆಗೆ ಅರಣ್ಯ ಭೂಮಿ ಹಕ್ಕು ಸಮಸ್ಯೆ  ಅಲ್ಲಿಯ ವರೆಗೆ ಹೋರಾಟ ಸಹ ನಿಲ್ಲುವುದಿಲ್ಲ ಎಂದರು.

ಅರಣ್ಯ ವಾಸಿಗಳು ತಮ್ಮ ಜೊತೆಗೆ ಅರಣ್ಯ ಸಂಪತ್ತನ್ನೂ ರಕ್ಷಿಸುತ್ತಿದ್ದಾರೆ. ಅರಣ್ಯ ಪ್ರದೇಶಗಳ ಕುಸಿತಕ್ಕೆ ಅರಣ್ಯ ವಾಸಿಗಳು ಕಾರಣರಲ್ಲ.ಅದಕ್ಕೆ ಮುಖ್ಯ ಕಾರಣ ಪ್ರವಾಹಗಳು,ಮೀತಿಮೀರಿದ ಪರಿಸರ ಮಾಲಿನ್ಯ ಕಾರಣವಾಗಿದೆ ಎಂದರು.

2006ರ ಕಾಯಿದೆಯನ್ನು ಹತ್ತು  ಸಲ ಓದಿದ್ದೇನೆ. ದಾಖಲೆ‌ ಕೊಡಬೇಕು ಎಂದೂ ಹೇಳಿಲ್ಲ. ಸಾಕ್ಷ್ಯ ಅವರೇ ಸಂಗ್ರಹಿಸಬೇಕು. ಕಾಯಿದೆ, ಸಂವಿಧಾನ ವಿರೋಧಿ ತೀರ್ಪು ನೀಡಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟನಿಂದ ಜಿಲ್ಲಾಧಿಕಾರಿ, ಎಸಿ ಆದೇಶಕ್ಕೆ ಸ್ಟೇ ನೀಡಲಾಗಿದೆ  ಎಂದರು.

Advertisement

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಮೇ 8ರಂದು ಹೊನ್ನಾವರ ದಲ್ಲಿ ನಡೆದ ಕಾರ್ಯಕ್ರಮ ಚಾರಿತ್ರಾತ್ಮಕ ಕಾರ್ಯಕ್ರಮ ವಾಗಿದೆ. ಅರಣ್ಯ ಭೂಮಿ ಹಕ್ಕುಗಾಗಿ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಪ್ರಜಾಪ್ರಭುತ್ವ ದ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾರೆ.

ಕಾನೂನಿನ ತಿಳುವಳಿಕೆ ಎಲ್ಲರಿಗೂ ಬರಬೇಕು:

ಸ್ವಾತಂತ್ರ್ಯ ಬಂದ ನಂತರ ಸಾಕ್ಷರತೆಯಲ್ಲಿ ಸಾಧನೆ ಮಾಡಿದ್ದೆವೆ. ದೊಡ್ಡ ಪ್ರಮಾಣದಲ್ಲಿ ಅಕ್ಷರಸ್ಥರಾದರೂ ಸಹ ಹಲವರಿಗೆ ಕಾನೂನಿನ ಅರಿವು ಕಡಿಮೆ ಇದೆ. ಕಾನೂನಿನ ಬಗ್ಗೆ ತಿಳುವಳಿಕೆ ಇಟ್ಟುಕೊಳ್ಳುವುದು. ಕಾನೂನಿನ ಸಾಕ್ಷರತೆ ಯಲ್ಲಿ ನಾವು ಸಾಧಿಸಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅರಣ್ಯ ಭೂಮಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 3ರಷ್ಟು ಜನರಿಗೆ ಮಾತ್ರ ಹಕ್ಕು ಪತ್ರ ವಿತರಣೆಯಾಗಿದೆ. ಈ ಕುರಿತು ಹಲವಾರು ವರ್ಷಗಳಿಂದ ಹೋರಾಟ ಮಾಡಿ ಸುಪ್ರಿಂ ಕೋರ್ಟ್ ಮಟ್ಟಿಲಿರಿದೆ.ಸುಫ್ರೀಂ ಕೋರ್ಟ್ ನಲ್ಲಿ ನಾವು ನೀಡಿದ ಅರ್ಜಿ ಸ್ವೀಕೃತ ವಾಗಿದೆ. ಹೆಚ್ ಎನ್ ನಾಗಮೋಹನದಾಸ್ ರವರು ನಮಗೆ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿ.ಎಂ.ಶೆಟ್ಟಿ, ಜ್ಯೋತಿ ಗೌಡ, ಸಿ.ಏಪ್.ಈರೇಶ ಇತರರು ಇದ್ದರು.

ಒಬ್ಬ ಮುಖಂಡನಿಗೆ ಸರಿ ದಾರಿ ಗೊತ್ತಿರಬೇಕು. ಅವನೂ ಬರಬೇಕು. ನಮ್ಮ‌ಅನೇಕ‌ ಮುಖಂಡರಿಗೆ ಸರಿದಾರಿಯೇ ಗೊತ್ತಿಲ್ಲ. ಸರಿದಾರಿ ಗೊತ್ತಿರುವವರು ರವೀಂದ್ರ. ಅತಿಕ್ರಮಣದಾರರು ಸಂಘಟಿತರಾಗಬೇಕು, ಐಕ್ಯತೆಯೊಂದಿಗೆ‌ ಕೆಲಸ‌ ಮಾಡಬೇಕು. -ನಾಗಮೋಹನದಾಸ್, ನಿವೃತ್ತ‌ ನ್ಯಾಯಮೂರ್ತಿ

ಸರಕಾರ ಅತಿಕ್ರಮಣದಲ್ಲಿ ಮನೆ ಕಟ್ಟಲು ನೆರವಾಗುತ್ತೇವೆ ಎನ್ನುತ್ತದೆ. ಆದರೆ ಸುಫ್ರೀಂ ಕೋರ್ಟ ಸರಕಾರದ ನೆರವು ಕೊಡಬಾರದು‌ ಎನ್ನುತ್ತದೆ. ನ್ಯಾಯಾಲಯಕ್ಕೆ ಸರಕಾರ ತನ್ನ ನಿಲುವು ನೀಡಬೇಕಿತ್ತು. ಏನಾದರೂ ಕೊಡೋದಿದ್ದರೆ ಭೂಮಿ ಪಟ್ಟಾ ಕೊಡಬೇಕು. – ರವೀಂದ್ರ ನಾಯ್ಕ, ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next