ಮೂಡಿಗೆರೆ: ತಾಲೂಕಿನ ಗುತ್ತಿಹಳ್ಳಿ ಮೂಲರಳ್ಳಿ ಹೊಸಕೆರೆ ಭೆ„ರಾಪುರ ಭಾಗದಲ್ಲಿ ಪ್ರತಿದಿನ ಕಾಡಾನೆ ದಾಳಿ ಇಡುತ್ತಿದ್ದು
, ಇದರಿಂದ ಕಾμ ಬೆಳೆಗಾರರು ಕಂಗಾಲಾಗಿದ್ದಾರೆ. ಮೂಲರಳ್ಳಿ ಭಾಗದಲ್ಲಿ ಗದ್ದೆ ಕೃಷಿ ಮಾಡಿರುವ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ರಾತ್ರಿಯಿಡಿ ತಮ್ಮ ಜಮೀನಿನಲ್ಲಿ ಬೀಡುಬಿಟ್ಟು ಆನೆಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೊಮ್ಮೆ ಆನೆಗಳು ಪಟಾಕಿ ಸಿಡಿಸಿದ ಶಬ್ಧಕ್ಕೆ ರೊಚ್ಚಿಗೆದ್ದು ರೈತರ ಮೇಲೆಯೇ ದಾಳಿ ಮಾಡಿದ ಪ್ರಸಂಗಗಳೂ ನಡೆದಿವೆ. ಆದರೂ ರೈತರು ತಮ್ಮ ಬೆಳೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಆದರೆ ಇವರಿಗೆ ಅರಣ್ಯ ಇಲಾಖೆಯಿಂದ ಯಾವುದೇ ಸಹಕಾರ ದೊರೆಯುತ್ತಿಲ್ಲ, ಅರಣ್ಯ ಇಲಾಖೆಗೆ ದೂರು
ನೀಡಿದರೆ ಆನೆ ದಾಳಿ ಮಾಡಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬರುತ್ತಾರೆಯೇ ಹೊರತು ರಾತ್ರಿ
ಸಮಯದಲ್ಲಿ ದಾಳಿ ಮಾಡುವ ಆನೆಗಳನ್ನು ಕಾಡಿಗಟ್ಟುವ ಕೆಲಸ ಮಾಡುತ್ತಿಲ್ಲ.
ಆನೆ ಹಾವಳಿಯಿಂದ ಬೇಸತ್ತ ರೈತರು ಸುಮಾರು 70ಎಕರೆಗೂ ಹೆಚ್ಚಿನ ಗದ್ದೆಯನ್ನು ಕೃಷಿ ಮಾಡದೆ ಹಾಳು ಬಿಟ್ಟಿದ್ದಾರೆ, ಗದ್ದೆ ಕೃಷಿ ಮಾಡಿರುವ ಕೆಲವರು ತಮ್ಮ ಬೆಳೆ ಉಳಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳಿಂದ ಪ್ರತಿರಾತ್ರಿ ದಾಳಿಯಿಡುತ್ತಿರುವ ಮೂರು ಗಂಡಾನೆಗಳು ಕಾμ, ಬಾಳೆ, ಗದ್ದೆಗಳನ್ನು ನಾಶಪಡಿಸುತ್ತಿವೆ. ಗುರುವಾರ ರಾತ್ರಿ ಹರೀಶ್ ಎಂಬುವವರ ಬಾಳೆ ತೋಟ ಮತ್ತು ಗದ್ದೆಗಳನ್ನು ನಾಶಪಡಿಸಿರುವ ಆನೆಗಳು ಗುತ್ತಿ ಭಾಗದಲ್ಲೂ ದಾಂಧಲೆ ನಡೆಸಿವೆ. ಅರಣ್ಯ ಇಲಾಖೆಗೆ ತಿಳಿಸಿದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆನೆಗಳನ್ನು ಓಡಿಸಲು ಪಟಾಕಿ ಕೇಳಿದರೆ 10 ಪಟಾಕಿಗಳಿರುವ ಒಂದು ಪ್ಯಾಕ್ ಕೊಟ್ಟು ಸುಮ್ಮನಾಗುತ್ತಾರೆ. ನಾವೇ ದುಡ್ಡು ಕೊಟ್ಟು ಪಟಾಕಿ ತಂದು ಆನೆ ಓಡಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ರೈತರು.
ನಾವು ಮನೆ ಬಿಟ್ಟು ಗದ್ದೆಗಳಲ್ಲೇ ವಾಸ್ತವ್ಯ ಹೂಡಿ ಆನೆಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಮನೆ ಬಿಟ್ಟು ಆನೆ ಕಾಯಲು ಹೋದಾಗ ಮನೆಯವರೆಲ್ಲಾ ನಿದ್ರೆಗೆಟ್ಟು ನಮ್ಮನ್ನು ಎದುರುನೋಡುವ ಕೆಲಸ ಮಾಡುತ್ತಾರೆ. ರಾತ್ರಿ ಹೊತ್ತು ಬರುವ ಆನೆಗಳನ್ನು ಪಟಾಕಿ ಸಿಡಿಸಿ ಓಡಿಸಬಹುದು. ಆದರೆ ಬೆಳಗ್ಗಿನ ಜಾವ ದಾಳಿಯಿಡುವ ಆನೆಗಳಿಗೆ ಪಟಾಕಿ ಸಿಡಿಸಿದರೆ ಅವು ರೊಚ್ಚಿಗೆದ್ದು ನಮ್ಮ ಮೇಲೆಯೇ ದಾಳಿಯಿಡುತ್ತವೆ. ನಾವು ಜೀವ ಕೈಯ್ಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ
ಬಂದೊದಗಿದೆ. ದಯವಿಟ್ಟು ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಇತ್ತ ಗಮನ ಹರಿಸಿ ಆನೆಗಳನ್ನು ಸ್ಥಳಾಂತರ
ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮೂಲರಹಳ್ಳಿಯ ಹರೀಶ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಎಸಿಎಫ್ ಮುದ್ದಣ್ಣ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ನಾವು ಆನೆಯ ಹಾವಳಿಯಿರುವ ಗ್ರಾಮಗಳಲ್ಲಿ ಆನೆಗಳನ್ನು ಓಡಿಸಲು ಪಟಾಕಿ ಕೊಟ್ಟರುತ್ತೇವೆ. ಅಲ್ಲದೆ ಆನೆಗಳನ್ನು ಸ್ಥಳಾಂತರ ಮಾಡಿದರೂ ಸಹಾ ಅದು ಪುನಹ: ಇಲ್ಲಿಗೇ ಬರುತ್ತವೆ. ಇದನ್ನು ಹಿಡಿದು ದೂರಕ್ಕೆ ಸಾಗಿಸಲು ಸರ್ಕಾರದ ಆದೇಶ, ಅನುಮತಿ ಬೇಕು. ಇದರ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಿದ್ದೇವೆ ಎಂದು ತಿಳಿಸಿದರು.