Advertisement

ಆನೆ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ 

01:35 PM Apr 24, 2018 | |

ಸುಳ್ಯ : ಮೇದಿನಡ್ಕ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಆಲೆಟ್ಟಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಹಿಂಡಾನೆ ಗುಂಪನ್ನು ಮರಳಿ ಕಾಡಿಗೆ ಅಟ್ಟಲು 15 ದಿನಗಳಿಂದ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

Advertisement

ಸುಳ್ಯ ನಗರ ಸಮೀಪದ ಭಸ್ಮಡ್ಕ, ತುದಿಯಡ್ಕ, ಆಲೆಟ್ಟಿ ಗ್ರಾಮದ ವಿವಿಧ ಭಾಗಗಳಲ್ಲಿ ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ಹಾನಿ ಉಂಟು ಮಾಡಿತ್ತು. ಎಂಟು ಆನೆಗಳ ಹಿಂಡು ಪಯಸ್ವಿನಿ ನದಿ ಕಿನಾರೆ ಆಸುಪಾಸಿನ ಕೃಷಿ ತೋಟದಲ್ಲಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿತ್ತು.

ನಿರಂತರ ಕಾರ್ಯಾಚರಣೆ ಬಳಿಕ ಆನೆಗಳನ್ನು ಹಾಸ್ಪಾರೆ ಅರಣ್ಯಕ್ಕೆ ಅಟ್ಟಲು ಸಾಧ್ಯವಾಗಿದೆ. ಮುಂದೆ ಅಲ್ಲಿಂದ ಕೇರಳ ಭಾಗದ ಅರಣ್ಯಕ್ಕೆ ದಾಟಿಸುವ ಪ್ರಯತ್ನ ನಡೆಯಲಿದೆ. ಸುಳ್ಯ, ಸುಬ್ರಹ್ಮಣ್ಯ, ಪಂಜ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ 25 ಸಿಬಂದಿಯ ಐದು ತಂಡ ರಚಿಸಿ, ಆನೆಗಳನ್ನು ಅಟ್ಟುವ ಪ್ರಯತ್ನ ನಡೆಸಲಾಗಿತ್ತು. ನಾಗರಹೊಳೆಯಿಂದ ಆಗಮಿಸಿದ ಐವರು ಸಿಬಂದಿ, ಸ್ಥಳೀಯರು ಪಾಲ್ಗೊಂಡಿದ್ದರು. 

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಚ್‌. ಜಗನ್ನಾಥ್‌ ಅವರ ಮಾರ್ಗದರ್ಶನದಲ್ಲಿ ಸುಳ್ಯ, ಪಂಜ, ಸುಬ್ರಹ್ಮಣ್ಯ, ವಲಯ ಅರಣ್ಯಾಧಿಕಾರಿಗಳಾದ ಎನ್‌. ಮಂಜುನಾಥ್‌, ಪ್ರವೀಣ್‌ ಶೆಟ್ಟಿ, ತ್ಯಾಗರಾಜ್‌ ನೇತೃತ್ವದಲ್ಲಿ ತಂಡ ಪಾಲ್ಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next