Advertisement

Belthangady: ಮನೆ ತೆರವಿಗೆ ಅರಣ್ಯ ಇಲಾಖೆ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ

10:39 AM Oct 09, 2023 | Team Udayavani |

ಬೆಳ್ತಂಗಡಿ: ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆ ತೆರವುಗೊಳಿಸದಂತೆ ಸಚಿವರು ಸೂಚಿಸಿದ್ದರೂ ಅರಣ್ಯಾಧಿಕರಿಗಳು ಬೆಳ್ಳಂಬೆಳಗ್ಗೆ ತೆರವಿಗೆ ಮುಂದಾದ ಘಟನೆ ಆ.9ರ ಸೋಮವಾರ ನಡೆದಿದೆ.

Advertisement

ಬೆಳ್ಳಂಬೆಳಗ್ಗೆ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ದೌಡಾಯಿಸಿದ್ದು, ಅವರೊಂದಿಗೆ ಜಿಲ್ಲೆಯ ಶಾಸಕರಾದ ರಾಜೇಶ್ ನಾಯಕ್, ಭರತ್ ಶೆಟ್ಟಿ, ಭಾಗೀರಥಿ ಮುಳ್ಯ, ಉಮಾನಾಥ್ ಕೋಟ್ಯಾನ್, ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಸಾಥ್ ನೀಡಿದರು.

ಸ್ಥಳದಲ್ಲಿ ನೂರಾರು ಪೊಲೀಸರು, ಸ್ಥಳೀಯರು, ಅರಣ್ಯ ಇಲಾಖೆ ಸಿಬಂದಿ ಜಮಾಯಿಸಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮನೆ ತೆರವಿಗೆ ಅರಣ್ಯ ಇಲಾಖೆ ಸಿಬಂದಿ ಮುಂದಾಗಿದ್ದಾರೆ. ಇದನ್ನು ತಡೆದ ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಅವರನ್ನು ಲೆಕ್ಕಿಸದೆ ಎಸಿಎಫ್ ಸುಬ್ಬಯ್ಯ ನಾಯ್ಕ್ ಹಾಗೂ ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ಜಯಪ್ರಕಾಶ್ ನಡುವೆ ತಳ್ಳಾಟ ನಡೆಸಿದ ಘಟನೆಯೂ ನಡೆಯಿತು.

ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು.

ಕಳೆದ ಅ.6 ರಂದು ಅರಣ್ಯ ಇಲಾಖೆ ನೂತನ ಮನೆ ನಿರ್ಮಾಣಕ್ಕೆ ಮುಂದಾದ ಕುಟುಂಬದ ಫೌಂಡೇಶನ್ ಕಿತ್ತೆಸೆದು ಅರಣ್ಯ ಇಲಾಖೆ ದರ್ಪ ತೋರಿತ್ತು. ಇದನ್ನು ಪ್ರಶ್ನಿಸಿದ ಶಾಸಕರ ವಿರುದ್ಧವೇ ಹಗೆ ಸಾಧನೆ ಮಾಡುತ್ತಿರುವ ಅರಣ್ಯ ಇಲಾಖೆ ಸಚಿವರ ಆದೇಶ ಇದೆ ಎಂದು ಸುಳ್ಳು ಹೇಳಿ ಇಂದು ತೆರವಿಗೆ ಮುಂದಾಗಿತ್ತು. ಇದಕ್ಕೂ ಮುನ್ನ ಮನೆ ಮಂದಿ ಹಾಗೂ ಸ್ಥಳೀಯರು ಸೇರಿ 10 ಮಂದಿ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

Advertisement

ಪ್ರಕರಣವು ರಾಜಕೀಯ ಬಣ್ಣ ಪಡೆಯುತ್ತಿದ್ದು, ಅರಣ್ಯಧಿಕಾರಿಗಳಿಗೆ ಮನೆ ತೆರವುಗೊಳಿಸುವಂತೆ ಒತ್ತಡವೂ ಹೇರುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು ಅರಣ್ಯಧಿಕಾರಿಗಳು ಬಡವರ ಮನೆ ತೆರವುಗೊಳಿಸಿಯೇ ಸಿದ್ಧ ಎಂದು ಹಟಕ್ಕೆ ಬಿದ್ದಿದೆ. ತೆರವುಗೊಳಿಸುವುದಾದರೆ ಅರಣ್ಯ ಮತ್ತು ಕಂದಾಯ ಜಂಟಿ ಸರ್ವೇ ನಡೆಸಿ ತೆರವುಗೊಳಿಸಿ ಎಂದು ಶಾಸಕರು ಆಗ್ರಹಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಕಳೆಂಜ ಗ್ರಾದಮದ ಅಮ್ಮಿ‌ಡ್ಕ ಕುದ್ದಮನೆ ಸೇಸ ಗೌಡ ಎಂಬವರ ಕುಟುಂಬ ಸುಮಾರು 150  ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಅ.6 ರಂದು ಅರಣ್ಯ ಇಲಾಖೆ ಕಿತ್ತೆದು ಬಡ ಕುಟುಂಬದ ಮುಂದೆ ದರ್ಪ ತೋರಿರುವ ಬಗ್ಗೆ ಮನೆ ಮಗ ನೊಂದು ಆತ್ಮಹತ್ಯೆಗೆ ಮುಂದಾಗಿದ್ದ. ಶಾಸಕರ ಮದ್ಯಸ್ಥಿಕೆಯಲ್ಲಿ ಸಚಿವ ಈಶ್ವರ ಖಂಡ್ರೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿತ್ತು. ಆದರೂ ಅರಣ್ಯ ಇಲಾಖೆ ಹಟಕ್ಕೆ ಬಿದ್ದಿದೆ.

ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ಉಪ್ಪಿನಂಗಡಿ ಅರಣ್ಯಧಿಕಾರಿ ಜಯಪ್ರಕಾಶ್, ಕಳೆಂಜ ಉಪ ವಲಯರಣ್ಯಾಧಿಕಾರಿ ಪ್ರಶಾಂತ್, ಎಸ್ಐ ಧರ್ಮಸ್ಥಳ ಸಮರ್ಥ್ ಸ್ಥಳದಲ್ಲಿದ್ದರು.

ಕೆ.ಎಸ್.ಆರ್.ಪಿ. ಮೂರು ತುಕುಡಿ  ವಿಶೇಷ ಪಡೆಯನ್ನು ನಿಯೋಜಿಸಲಾಗಿದೆ. ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next