Advertisement
ಕಳೆದ ಬಾರಿ ನವೆಂಬರ್‌ನಲ್ಲೇ ಬಿರುಬೇಸಿಗೆ ಕಾಣಿಸಿಕೊಂಡು ಉದ್ಯಾನದೊಳಗಿನ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ, ಗಿಡ-ಮರಗಳು ಒಣಗಿ ಆತಂಕ ಹುಟ್ಟಿಸಿದ್ದ ನಾಗರಹೊಳೆ ಉದ್ಯಾನದಲ್ಲಿ ಉತ್ತಮ ಮಳೆಯೊಂದಿಗೆ ಈ ಬಾರಿ ನವೆಂಬರ್‌ನಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಮಳೆ ನೀರು, 14ಕ್ಕೂ ಹೆಚ್ಚು ಸೋಲಾರ್ ಪಂಪ್‌ಸೆಟ್‌ಗಳಿಂದ ನಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿರುವುದರಿಂದ ಹಸಿರು ಉಳಿದುಕೊಂಡಿರುವುದರಿಂದ ಅರಣ್ಯಕ್ಕೆ ವರದಾನವಾಗಿದ್ದರೂ ಬೇಸಿಗೆಯಲ್ಲಿ ಬೆಂಕಿ ಅವಘಡ ತಡೆಯಲು ಸಿದ್ಧವಾಗಿದೆ.
Related Articles
Advertisement
ವಾಚ್ ಟವರ್- ಕ್ಯಾಮರಾ ಕಣ್ಗಾವಲು: ಉದ್ಯಾನದ ಹಲವೆಡೆ ಇರುವ ದೊಡ್ಡದಾದ 15 ವಾಚ್ ಟವರ್ ಮೂಲಕ ಹಾಗೂ ಉದ್ಯಾನದಂಚಿನ ಪ್ರದೇಶದ ಅಲ್ಲಲ್ಲಿ ಮರದ ಮೇಲೆ ಅಟ್ಟಣೆ ನಿರ್ಮಿಸಲಾಗಿದ್ದು, ಸಿಬ್ಬಂದಿಗಳು ದಿನವಿಡಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಅರಣ್ಯದಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಒಳನುಸುಳುವವರ ಪತ್ತೆಗಾಗಿ ಅಲ್ಲಲ್ಲಿ ಕ್ಯಾಮರಾ ಅಳವಡಿಸಲಾಗಿದೆ.
ವಲಯಕ್ಕೊಂದು ಕ್ವಿಕ್ ಆ್ಯಕ್ಷನ್ ಫೋರ್: ಪ್ರತಿ ವಲಯಕ್ಕೆ ಒಂದರಂತೆ ಕ್ವಿಕ್ ಆ್ಯಕ್ಷನ್ ಫೋರ್ ನಿಯೋಜಿಸಿದ್ದು, ಇದರಲ್ಲಿ ಸಣ್ಣ ನೀರಿನ ಟ್ಯಾಂಕ್, ನೀರು ಸ್ಪ್ರೆ ಯಂತ್ರದೊಂದಿಗೆ ಬೆಂಕಿ ಬಿದ್ದವೇಳೆ ತಕ್ಷಣವೇ ಆರಿಸಲು ನೆರವಾಗಲು ವಾಹನಗಳಲ್ಲಿ ಟ್ಯಾಂಕ್ ಮೂಲಕ ನೀರು ಕೊಂಡೊಯ್ಯುವ ವಾಹನಗಳಲ್ಲಿ ಸಣ್ಣ ಸಬ್ ಮರ್ಸಿಬಲ್ ಪಂಪ್ ಅಳವಡಿಸಲಾಗಿದೆ. ಪ್ರತಿವಲಯಕ್ಕೆ ಒಂದು ಹೆಚ್ಚುವರಿ ಬಾಡಿಗೆ ವಾಹನ ನಿಯೋಜಿಸಲಾಗಿದ್ದು, ಸಿಬ್ಬಂದಿಗಳು ನಿರಂತರವಾಗಿ ರೌಂಡ್ಸ್ ಮಾಡುವ ಮೂಲಕ ಕಣ್ಗಾವಲು ಇಟ್ಟಿದ್ದಾರೆ.
ಬೀದಿ ನಾಟಕ: ನಾಗರಹೊಳೆ ಉದ್ಯಾದಂಚಿನ ಗ್ರಾಮಗಳಲ್ಲಿ ನುರಿತ ಕಲಾತಂಡಗಳಿಂದ ಅರಣ್ಯದ ಮಹತ್ವ, ಬೆಂಕಿ ಹಾಕಿದ್ದಲ್ಲಿ ಪರಿಸರದ ಮೇಲಾಗುವ ಪರಿಣಾಮ ಹಾಗೂ ಅರಣ್ಯ ನಮ್ಮದೆನ್ನುವ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕದ ಮೂಲಕ, ಜೊತೆಗೆ ಆಸಕ್ತ ಯುವಕರ ಬೆಂಕಿ ತಡೆಗಟ್ಟುವ ಪಡೆಯನ್ನು ಸಹ ರಚಿಸಲಾಗಿದೆ.
ಕಾಪ್ಟರ್‌ಗೆ ಬೇಡಿಕೆ: ನಾಗರಹೊಳೆ ಉದ್ಯಾನದೊಳಗೆ ಬೆಂಕಿ ಅವಘಡ ಸಂಭವಿಸಿದಲ್ಲಿ ತಕ್ಷಣಕ್ಕೆ ಕ್ರಮವಹಿಸಲು ಹುಣಸೂರು, ಎಚ್.ಡಿ.ಕೋಟೆ ಹಾಗೂ ವಿರಾಜಪೇಟೆ ವಿಭಾಗದಲ್ಲಿ ತಾತ್ಕಾಲಿಕವಾಗಿ ಮೂರು ಅಗ್ನಿಶಾಮಕ ಸಿಬ್ಬಂದಿಗಳನ್ನು ನಿಯೋಜಿಸಲು ಇಲಾಖೆಗೆ ಪತ್ರಬರೆಯಲಾಗಿದ್ದರೆ, ಅಗತ್ಯ ಬಿದ್ದಲ್ಲಿ ಬೆಂಕಿ ನಂದಿಸಲು ವಾಯು ಸೇನೆಯಿಂದ ಹೆಲಿಕಾಪ್ಟರ್ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆಧುನಿಕ ಉಪಕರಣ ಸಂಗ್ರಹ: ಇತ್ತೀಚೆಗೆ ಅಗ್ನಿಶಾಮಕ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಆಧುನಿಕ ಬೆಂಕಿ ನಿರೋಧಕ ಪರಿಕರಗಳನ್ನು ಖರೀದಿಸಲಾಗಿದೆ. ಈ ಬಾರಿ ಸೊಪ್ಪಿನಿಂದ ಬೆಂಕಿ ನಂದಿಸುವ ಬದಲು ಬೆಂಕಿ ಹೊತ್ತುಕೊಳ್ಳದ ಕ್ಯಾನ್‌ವಾಸ್‌ನ ಬಡಿಗೆ ಬಳಕೆ ಮಾಡಲಾಗುತ್ತಿದೆ. ಫೈರ್ ಪ್ರೂಫ್ ಗಂ ಬೂಟ್, ಮಾಸ್ಕ್ ಹೆಲ್ಮೆಟ್, ಬೆಂಕಿ ನಿರೋಧಕ ಬಟ್ಟೆ, ಫೈರ್‌ಹುಕ್, ಬೀಟರ್, ಕಟ್ಟರ್ ಸೇರಿದಂತೆ ಅಗತ್ಯ ಪರಿಕರಗಳನ್ನು ಸಂಗ್ರಹಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕುಮಾರ್ “ಉದಯವಾಣಿಗೆ’ ಮಾಹಿತಿ ನೀಡಿದರು.
ಕಾಡಂಚಿನ ಜನರು ಸಹಕಾರ ನೀಡಿ,ಸಿ.ಎಫ್: ತಾನಾಗಿಯೇ ಕಾಡಿಗೆ ಬೆಂಕಿ ಬೀಳುವುದಿಲ್ಲ, ಬೆಂಕಿ ಹಚ್ಚಿ ಅರಣ್ಯ ನಾಶ ಮಾಡುವ ಕಿಡಿಗೇಡಿಗಳ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಕಾಡಂಚಿನ ಗ್ರಾಮಸ್ಥರು ಮಾಹಿತಿ ನೀಡಿ, ಕಾಡಿಗೆ ಬೆಂಕಿ ಬೀಳುವುದನ್ನು ತಡೆಯುವುದರಲ್ಲಿ ಸಾರ್ವಜನಿಕರ ಜವಾಬ್ದಾರಿಯು ಇದೆ. ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆವಹಿಸಿದೆ. ಆದರೂ ಅರಣ್ಯದಂಚಿನ ಗ್ರಾಮಸ್ಥರ ಸಹಕಾರ ಅತ್ಯಗತ್ಯ.-ಮಣಿಕಂಠನ್, ಕ್ಷೇತ್ರ ನಿರ್ದೇಶಕರು, ಹುಲಿಯೋಜನೆ. ನಾಗರಹೊಳೆ * ಸಂಪತ್‌ಕುಮಾರ್