Advertisement

ಅರಣ್ಯ ಬೆಳೆಸಲು ಬೀಜದುಂಡೆ ಪ್ರಯೋಗಕ್ಕೆ ಅರಣ್ಯ ಇಲಾಖೆ ಸಜ್ಜು

04:47 PM May 09, 2017 | Team Udayavani |

ಆಳಂದ: ಗಿಡ ನೆಡಲು ತೆಗ್ಗು ತೋಡುವ ಕೆಲಸ ಇಲ್ಲ. ಸಸ್ಯ ಬೆಳೆಸಿ  ವರ್ಷಗಟ್ಟಲೇ ಸಂರಕ್ಷಣೆ ಮಾಡಿ ಅವುಗಳನ್ನು ಬೇರೊಂದು ಸ್ಥಳಕ್ಕೆ ಹೊತ್ತು ತರುವ ತೊಂದರೆಯೂ ಇಲ್ಲ. ಆದರೆ ಇದಕ್ಕೆಲ್ಲ ಭಿನ್ನವಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡ ಬೆಳೆಸುವ ಮೂಲಕ ಬಯಲು ಭೂಮಿಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಸಲು ನಾಗರಿಕರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳ ತೊಡಗಿದೆ. 

Advertisement

ಬೀಜದುಂಡೆ (ಸೀಡ್‌ಬಾಲ್‌) ಮೂಲಕ ಗಿಡ ಬೆಳೆಸಲು ರಾಜ್ಯದ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುವಂತೆ ತಾಲೂಕಿನ ಅರಣ್ಯ ಇಲಾಖೆಗೆ ಸೂಚಿಸಿದೆ. ಇದೇನು ಹೊಸದು ಎಂದುಕೊಂಡರೆ ಹೌದು ಎನ್ನುತ್ತಾರೆ ಸಾಮಾಜಿಕ ವಲಯ ಅರಣ್ಯಾಧಿಧಿಕಾರಿಗಳು. 

ಏನಿದು ಬೀಜದುಂಡೆ: ಫಲವತ್ತಾದ ಮತ್ತು ಗುಣಮಟ್ಟಾದ ಮಣ್ಣು ಮಿಶ್ರಣ ಮಾಡಿ ನೀರು ಬೆರೆಸಿ ಕೆಸರಿನಿಂದ ಉಂಡೆ ಸಿದ್ಧಪಡಿಸುವುದು. ಅಲ್ಲದೆ, ಬೇಕಾದ ಗಿಡಗಳ ಬೀಜವನ್ನು ಉಂಡೆಯೊಂದಕ್ಕೆ ಹಾಕಿ ಮಳೆಗಾಲ ಪ್ರಾರಂಭವಾದ ಬಳಿಕ ಭೂಮಿಯಲ್ಲಿ ಇಟ್ಟರೆ ಮೊಳಕೆಯೊಡೆದು ಬೇರು ಬಿಡುತ್ತದೆ. 

ತೇವಾಂಶ ಒಳಗೊಂಡ ಉಂಡೆಯನ್ನು ಭೂಮಿಯಲ್ಲಿ ಇಟ್ಟಾಗ ಮಳೆ ಏರುಪೇರಾದರೂ ಕೆಲ ದಿನಗಳ ವರೆಗೆ ತಡೆದುಕೊಳ್ಳುತ್ತದೆ. ಅಲ್ಲದೆ, ಸಂಪೂರ್ಣ ಮಳೆಗಾಲ ಇದ್ದರೆ ಇನ್ನಷ್ಟು ಯಶಸ್ವಿಯಾಗುವುದರಲ್ಲಿ ಸಂದೇಹವೇ ಇಲ್ಲ. 

ಖರ್ಚು ಕಡಿಮೆ: ಮೊದಲೇ ಸಿದ್ಧತೆ ಮಾಡಿಕೊಂಡು ಆಯ್ಕೆಯಾದ ಜಾಗದಲ್ಲಿ ನಾಗರಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಏಕಕಾಲಕ್ಕೆ ಲಕ್ಷಾಂತರ ಬೀಜ ದುಂಡೆಗಳನ್ನು ಒಂದೇ ದಿನದಲ್ಲಿ ಭೂಮಿಗೆ ಇಡಬಹುದಾಗಿದೆ. ಇದರಿಂದ ಪ್ರತಿ ವರ್ಷ ತೆಗ್ಗು ತೋಡಲು ಮತ್ತು ಸಸಿ ಬೆಳೆಸಲು ಅರಣ್ಯ ಇಲಾಖೆಗೆ ಖರ್ಚಾಗುತ್ತಿದ್ದ ಲಕ್ಷಾಂತರ ರೂ. ಬೀಜದುಂಡೆ ನಾಟಿಯಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ.

Advertisement

ಈ ಹಿಂದೆ ಪ್ರಾಣಿ ಪಕ್ಷಿಗಳು ವಿವಿಧ ಹಣ್ಣುಗಳನ್ನು ತಿಂದು ಬೇರೆ ಬೇರೆ ಪ್ರದೇಶದಲ್ಲಿ ಹಾಕಿದ ಬೀಜಗಳೇ ಹೆಮ್ಮರವಾಗಿ ಬೆಳೆದಿವೆ. ಆದರೆ ನಗರೀಕರಣ ಬೆಳೆದಂತೆ ಹಿಂದಿನ ಗಿಡ, ಮರಗಳು ಈಗ ಕಡಿಮೆಯಾಗುತ್ತಿವೆ. ಪ್ರಾಣಿ, ಪಕ್ಷಿಗಳ ಮೂಲಕ ಸೃಷ್ಟಿಯಾದ ಅರಣ್ಯ ಪ್ರದೇಶವನ್ನು ನಿರ್ಮಿಸಲು ಮಾನವರಿಗೆ ಇಂದಿಗೂ ಸಾಧ್ಯವಾಗುತ್ತಿಲ್ಲ. ಅಲ್ಲದೇ ಅದನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಆದರು ಸಹ ರಾಜ್ಯದ ಅರಣ್ಯ ಇಲಾಖೆ ಬೀಜದುಂಡೆ ಮೂಲಕ ಮತ್ತೂಂದು ಕ್ರಾಂತಿಗೆ ಮುನ್ನುಡಿ ಹಾಕಿಕೊಂಡಿದೆ.  

* ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next