Advertisement

ದಾಂಡೇಲಿ ನಗರ ಸಭೆಗೂ ಗೌರವ ಕೊಡದ ಅರಣ್ಯ ಇಲಾಖೆ

02:31 PM Dec 14, 2021 | Team Udayavani |

ದಾಂಡೇಲಿ: ಅರಣ್ಯ ಇಲಾಖೆಯ ಬಹುತೇಕ ಹೆಚ್ಚಿನ ಕಾರ್ಯಕ್ರಮಗಳಿಗೆ ನಗರ ಸಭೆಯ ಸಹಕಾರ ಬೇಕೆ ಬೇಕು. ದಾಂಡೇಲಿ ನಗರಕ್ಕೆ ನಗರ ಸಭೆಯೆ ಪ್ರಧಾನವಾಗಿರುವಾಗ ನಗರ ಸಭೆಗೆ ವಿಶೇಷವಾದ ಗೌರವವಿದೆ. ಆದರೆ ಅರಣ್ಯ ಇಲಾಖೆ ಮಾತ್ರ ನಗರ ಸಭೆಗೆ ಕಿಂಚಿತ್ತು ಗೌರವ ನೀಡದೇ ಮತ್ತು ನಗರ ಸಭೆಗೆ ಹಾಗೂ ತನಗೆ ಸಂಬಂಧವೆ ಇಲ್ಲ ಎಂಬಂತೆ ವರ್ತಿಸತೊಡಗಿದೆ.

Advertisement

ಕಾರಣವಿಷ್ಟೆ ಹಳೆದಾಂಡೇಲಿಯ ಸ್ವಾಮಿಲ್ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ ತಡೆಗೋಡೆಯನ್ನು ತೆರವುಗೊಳಿಸುವಂತೆ ನಗರ ಸಭೆಯವರು ಎರಡು ಬಾರಿ ಲಿಖಿತ ಪತ್ರ ನೀಡಿದರೂ ಆ ಪತ್ರಕ್ಕೆ ಸೌಜನ್ಯಕ್ಕಾದರೂ ಮರು ಪತ್ರನೂ ಬರೆಯದೇ ಉದ್ದಟತನ ತೋರಿಸಿರುವುದು ಸ್ಪಷ್ಟವಾಗತೊಡಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೇಲಾಧಿಕಾರಿಗಳ ಆದೇಶ ಪಾಲಿಸುವುದು, ಹಾಗೂ ತಮ್ಮ ಕೆಲಸ ಆದ್ರೆ ಆಯ್ತು, ಸಾರ್ವಜನಿಕರಿಗೆ ಏನೂ ಬೇಕಾದ್ರೂ ಆಗ್ಲಿ ಎಂಬ ಧೋರಣೆಯಲ್ಲಿರುವುದು ಕಂಡು ಬರುತ್ತಿದೆ. ಎಲ್ಲಿಯವರೆಗೆ ತಡೆಗೋಡೆ ತೊಂದರೆಯಾಗಬಹುದೆಂದರೇ ಅರಣ್ಯ ಇಲಾಖೆಯವರೆ ಕಟ್ಟಿರುವ ಹಾರ್ನಬಿಲ್ ಸಭಾಭವನ ಅರ್ಥತ್ ಕಲ್ಯಾಣ ಮಂಟಪಕ್ಕೂ ಹೋಗಲು ದೇಶಪಾಂಡೆ ನಗರ ಹಾಗೂ ಆ ಕಡೆಯ ಹಳೆದಾಂಡೇಲಿ ಜನರಿಗೆ ಕಷ್ಟವಾಗತೊಡಗಿದೆ.

ಅರಣ್ಯ ಇಲಾಖೆಯವರ ಉದ್ದಟತನಕ್ಕೆ ಹಳೆದಾಂಡೇಲಿಯ ನಾಗರೀಕರು ಒಂದಾಗಿ ಹೋರಾಟದ ಹಾದಿ ಹಿಡಿಯಲಿದ್ದು, ತಡೆಗೋಡೆ ಹಾಕಿದವರಿಂದಲೆ ತೆಗೆಸುವ ಮಟ್ಟಿಗೆ ಜನ ಆಕ್ರೋಶಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next