Advertisement

1,106 ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ

12:22 AM Nov 16, 2019 | mahesh |

ಬಂಟ್ವಾಳ: ಬಿ.ಸಿ. ರೋಡ್‌-ಪುಂಜಾಲಕಟ್ಟೆ ನಡುವಣ 19.85 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭರದಿಂದ ಸಾಗಿದೆ. ಅದಕ್ಕಾಗಿ 1,106 ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿಸಿದ್ದು, ಹೆದ್ದಾರಿ ಇಲಾಖೆ ಸರಕಾರಕ್ಕೆ 1.25 ಕೋ.ರೂ. ಪಾವತಿಸಿ ತೆರವು ಆರಂಭಿಸಿದೆ. ಯಾವುದೇ ಹೆದ್ದಾರಿ-ರಸ್ತೆ ಅಭಿವೃದ್ಧಿ ವೇಳೆ ಮರಗಳನ್ನು ತೆರವುಗೊಳಿಸ ಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಅಗತ್ಯ. ರಸ್ತೆ ಕಾಮಗಾರಿ ನಿರ್ವಹಿಸುವ ಇಲಾಖೆಯು ಸರಕಾರಕ್ಕೆ ಸಂಬಂಧಿಸಿದ ಮೊತ್ತ ಪಾವತಿಸಿದ ಬಳಿಕ ಅರಣ್ಯ ಇಲಾಖೆ ಅನುಮತಿ ನೀಡುತ್ತದೆ. ತೆರವನ್ನು ಕಾಮಗಾರಿ ನಿರ್ವಹಿಸುವ ಇಲಾ ಖೆಯೇ ಮಾಡಬೇಕು.

Advertisement

ಮರಗಳ ಮೌಲ್ಯಮಾಪನ
ಮಣಿಹಳ್ಳದಿಂದ ವಗ್ಗದವರೆಗೆ ಹಲವು ಬೃಹತ್‌ ಮರಗಳಿವೆ. 50ಕ್ಕಿಂತ ಹೆಚ್ಚಿನ ಮರಗಳನ್ನು ತೆರವುಗೊಳಿಸು ವಾಗ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಪಬ್ಲಿಕ್‌ ಹಿಯರಿಂಗ್‌ ನಡೆಯಬೇಕಿದ್ದು, ಬಂಟ್ವಾಳದಲ್ಲಿ ಅದನ್ನು ನಡೆಸಲಾಗಿದೆ. ಕಾಮಗಾರಿ ಆರಂಭಕ್ಕೂ ಮೊದಲು ಮರಗಳ ಸರ್ವೇ ನಡೆಯ ಬೇಕಾಗುತ್ತದೆ. ಸುತ್ತಳತೆ,ನಾಟಿ ಭಾಗ, ಕಟ್ಟಿಗೆ ಭಾಗವನ್ನು ಅಳತೆ ಮಾಡಿ ಮೌಲ್ಯ ನಿಗದಿಪಡಿಸಲಾಗು ತ್ತದೆ. ಈ ಎಲ್ಲ ಪ್ರಕ್ರಿಯೆಗಳ ಬಳಿಕ ಉಪಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಮರಗಳ ತೆರವಿಗೆ ಅನುಮತಿ ನೀಡಿದ್ದರು.

1.25 ಕೋ.ರೂ. ಪಾವತಿ
ಬಿ.ಸಿ. ರೋಡ್‌-ಪುಂಜಾಲಕಟ್ಟೆ ನಡುವೆ ಪ್ರಾರಂಭದಲ್ಲಿ 1,136 ಮರಗಳನ್ನು ಗುರುತಿಸಿದ್ದು, ಅವುಗಳಲ್ಲಿ ಪ್ರಸ್ತುತ ಸರಕಾರ ಮತ್ತು ಹೆದ್ದಾರಿ ವ್ಯಾಪ್ತಿ (ಆರ್‌ಒಡಬು )ಗೆ ಬರುವ 1,106 ಮರಗಳ ತೆರವಿಗೆ ಅನುಮತಿ ಲಭಿಸಿದೆ. ಮರಗಳ ಮೌಲ್ಯ ಸೇರಿದಂತೆ ಎಲ್ಲ ಶುಲ್ಕಗಳು ಸೇರಿ ಒಟ್ಟು 1,25,88,840 ರೂ.ಗಳನ್ನು ಹೆದ್ದಾರಿ ಇಲಾಖೆಯು ಸರಕಾರಕ್ಕೆ ಪಾವತಿಸಿದೆ. ಒಂದು ಮರ ತೆರವುಗೊಳಿಸಿದರೆ 10 ಗಿಡಗಳನ್ನು ನೆಡಬೇಕು ಎಂಬುದು ನಿಯಮ. ಅಥವಾ 1 ಗಿಡಕ್ಕೆ 300 ರೂ.ಗಳಂತೆ 1,106 ಮರಗಳಿಗೆ ಪರ್ಯಾಯ 11,060 ಗಿಡಗಳನ್ನು ನೆಡಲು ಅರಣ್ಯ ಇಲಾಖೆಗೆ 33,18,000 ರೂ. ಪಾವತಿಸಬೇಕಾಗುತ್ತದೆ. ಬಳಿಕ ನಿಯಮದಂತೆ ಕಿ.ಮೀ.ಗೆ 3 ಲಕ್ಷ ರೂ. ಪಾವತಿಸಬೇಕಿದ್ದು, ಅದರಂತೆ 52,80,000 ರೂ. ನಿಗದಿಪಡಿಸಲಾಗಿದೆ. ಒಟ್ಟು 85,98,000 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ಪ್ರಸ್ತುತ 1,106 ಮರಗಳ ಮೌಲ್ಯವನ್ನು 30,24,816 ರೂ. ಎಂದು ನಿಗದಿಪಡಿಸಲಾಗಿದ್ದು ಅದಕ್ಕೆ
ಅರಣ್ಯ ಅಭಿವೃದ್ಧಿ ಶುಲ್ಕ ಪಾವತಿಸಬೇಕು. ಅದಕ್ಕಾಗಿ 3,62,978 ರೂ. ನಿಗದಿಯಾಗಿದೆ. ಜಿಎಸ್‌ಟಿ 5,05,708 ರೂ. ಮತ್ತು ಆದಾಯ ತೆರಿಗೆ 97,338 ರೂ. ನಿಗದಿಪಡಿಸಲಾಗಿದೆ.
ಇವೆಲ್ಲ ಸೇರಿ 1,25,88,840 ರೂ.ಗಳನ್ನು ಇಲಾಖೆ ಪಾವತಿಸಿದೆ. ಈ ಮೊತ್ತ ಪಾವತಿ
ಸಿದ ಬಳಿಕ ಮರಗಳನ್ನು ಕಡಿದು ಮಾರಾಟದ ಜವಾಬ್ದಾರಿ ರಾ.ಹೆ. ಇಲಾಖೆ ನಿರ್ವಹಿಸ ಬೇಕಿದ್ದು, ಸಾಗಾಟಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುತ್ತದೆ.

1,106 ಮರಗಳ ತೆರವಿಗೆ ಡಿಎಫ್‌ಒ ಅನುಮತಿ ನೀಡಿದ್ದು, ನಿಯಮದ ಪ್ರಕಾರ ಹೆದ್ದಾರಿ ಇಲಾಖೆ ಶುಲ್ಕ ಪಾವತಿಸಿದೆ. ಅನುಮತಿಗೆ ಮುಂಚೆ ಇಲಾಖೆಯು ಸಾರ್ವಜನಿಕರ ಆಕ್ಷೇಪಣೆಗೂ ಅವಕಾಶ ನೀಡಿತ್ತು. ಮುಂದೆ ತೆರವುಗೊಂಡ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಡಬೇಕಿದೆ. – ಬಿ. ಸುರೇಶ್‌, ಬಂಟ್ವಾಳ ವಲಯ ಅರಣ್ಯಾಧಿಕಾರಿ

Advertisement

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next