Advertisement

ಬಂಟ್ವಾಳ; ಗೋಬರ್ ಗ್ಯಾಸ್ ಗುಂಡಿಗೆ ಬಿದ್ದ ಕಾಡುಕೋಣ

04:32 PM May 04, 2019 | Nagendra Trasi |

ಬಂಟ್ವಾಳ: ಕಾಡುಕೋಣವೊಂದು ಗೋಬರ್ ಗ್ಯಾಸ್ ನ ಗುಂಡಿಯೊಳಗೆ ಬಿದ್ದ ಘಟನೆ ಕಾಡಬೆಟ್ಟು ಗ್ರಾಮದ ಪೂರ್ಲೊಟ್ಟು ಎಂಬಲ್ಲಿ ನಡೆದಿದೆ. ಪೂರ್ಲೊಟ್ಟು ನಿವಾಸಿ ಎಲ್ಪ್ರೆಡ್ ಡಿಸೋಜ ಎಂಬವರ ಮನೆಯ ಗೋಬರ್ ಗ್ಯಾಸ್ ನ ಗುಂಡಿಗೆ ಕಾಡು ಕೋಣಬಿದ್ದಿದೆ.

Advertisement

ಗೋಬರ್ ಗ್ಯಾಸ್ ನ ಗುಂಡಿಯೊಳಗೆ ಬಿದ್ದಿರುವ ಕಾಡು ಕೋಣಕ್ಕೆ ಮತ್ತೆ ಮೇಲೆ ಬರಲು ಸಾಧ್ಯವಾಗದೆ ಸಿಕ್ಕಿಹಾಕಿಗೊಂಡಿದೆ. ಬೆಳಿಗ್ಗೆ ವೇಳೆ ಮನೆಯವರು ಗೋಬರ್ ಗ್ಯಾಸ್ ಗೆ ಗೊಬ್ಬರ ಹಾಕಲು ಬಂದ ವೇಳೆ ಈ ಘಟನೆ ಬೆಳಕಿಗೆ ಬಂದ ಬಳಿಕ ಅವರು ಬಂಟ್ವಾಳ ಅರಣ್ಯ ಇಲಾಖೆ ಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಬಂಟ್ವಾಳ ಉಪವಲಯ ಸಂರಕ್ಷಣಾಧಿಕಾರಿ ಸುರೇಶ್ ಸ್ಥಳಕ್ಕೆ ಬೇಟಿ ನೀಡಿ ಕಾಡು ಕೋಣವನ್ನು ಮೇಲಕ್ಕೆ ಎತ್ತುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಹೆದರಿಕೆಯಿಂದ ಜನರನ್ನು ನೋಡಿದಾಗ ದುರುಗಟ್ಟಿ ನೋಡುವ ಕಾಡುಕೋಣವನ್ನು ಮೇಲಕ್ಕೆ ಎತ್ತಲು ಜೆಸಿಬಿ ತರಲಾಗಿದೆ. ಗುಂಡಿಯ ಸುತ್ತಲೂ ಮಣ್ಣು ತೆಗೆದ ಬಳಿಕ ಜಾಗರೂಕತೆಯಿಂದ ಕಾಡು ಕೋಣವನ್ನು ಮೇಲೆ ತರಬೇಕಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ. ಕಾಡು ಕೋಣವನ್ನು ನೋಡಲು ಊರಿನ ಜನ ತಂಡತಂಡೋಪವಾಗಿ ಬರುತ್ತಾ ಇದ್ದಾರೆ.

ರಾತ್ರಿ ಹೊತ್ತಿನಲ್ಲಿ ಕಾಡಿನಿಂದ ಬಂದಿರುವ ಈ ಕಾಡುಕೋಣ ಯಾವುದೋ ಪ್ರಾಣಿಯನ್ನು ಅಟ್ಟಿಸಿಕೊಂಡು ಹೋಗುವ ವೇಳೆ ಗೋಬರ್ ಗ್ಯಾಸ್ ಗುಂಡಿ ಕಾಣದೆ ಬಿದ್ದಿರಬೇಕು ಎಂದು ಹೇಳಲಾಗುತ್ತದೆ. ಅರಣ್ಯ ಇಲಾಖೆಯ ಸಿಬ್ಬಂದಿ ಗಳಾದ ವಿನಯ್, ಬಾಸ್ಕರ್, ಸ್ಮಿತಾ, ಅನಿತಾ ಅನಿಲ್ ಹಾಗೂ ಪರಿಸರ ಸ್ನೇಹಿ ಕಿರಣ್ ಪಿಂಟೋ ಮತ್ತು ಗ್ರಾಮಸ್ಥರ ಸ್ಥಳ ದಲ್ಲಿದ್ದು ಕಾಡು ಕೋಣದ ರಕ್ಷಣೆಯಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next