ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜಿರಿಯಾ ಮೂಲದ ಮೋಸ್ಟ್ ವಾಂಟೆಡ್ ಪೆಡ್ಲರ್‌ನನ್ನು ವಿವಿ ಪುರಂ ಪೊಲೀ ಸರು ಗ್ರಾಹಕರ ಸೋಗಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜಿರಿಯಾ ಮೂಲದ ಜಾನ್ ಇಗ್ವಾ ಯತ್ (28) ಬಂಧಿತ. ಆತನಿಂದ 2 ಕೋಟಿ ರೂ. ಮೌಲ್ಯದ 1 ಕೆ.ಜಿ. 200 ಗ್ರಾಂ ಎಂಡಿ ಎಂಎ ಮತ್ತು 1 ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿಯ ಜುಲೈ 22ರಂದು ಠಾಣೆ ವ್ಯಾಪ್ತಿ ಯ ಎಂಡಿಎಂಎ ಮಾರಾಟಕ್ಕೆ ಬಂದಾಗ ದಾಳಿ ನಡೆಸಿ ಬಂಧಿಸಲಾಗಿದೆ. ಜಾನ್ ಸ್ನೇಹಿತ ನಾಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಐದು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾ ಪಡೆದು ಬೆಂಗಳೂರಿಗೆ ಬಂದಿರುವ ಆರೋಪಿ, ಮಾದಕ ವಸ್ತು ಮಾರಾಟ ದಂಧೆ ಯಲ್ಲಿ ತೊಡಗಿದ್ದ. ಹೀಗಾಗಿ ಈ ಹಿಂದೆ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು 2-3 ಬಾರಿ ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿ ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದಾನೆ. ಆರ್. ಟಿ.ನಗರದಲ್ಲಿ ಬಾಡಿಗೆ ಮನೆಯಲ್ಲಿ ಸ್ನೇಹಿತನ ಜತೆ ವಾಸವಾಗಿದ್ದ ಆರೋಪಿ, ಗೋವಾ ಮತ್ತು ಮಹಾರಾಷ್ಟ್ರದಿಂದ ಕಡಿಮೆ ಮೊತ್ತಕ್ಕೆ ಪರಿಶುದ್ಧ ಕಚ್ಚಾ ವಸ್ತುಗಳನ್ನು ತರಿಸಿ ಎಂಡಿ ಎಂಎ ತಯಾರು ಮಾಡಿ, ಪಾರ್ಟಿ ಹಾಗೂ ಇತರೆ ಮೋಜು-ಮಸ್ತಿಯ ಕೂಟಗಳಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು, ಟೆಕಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಬಂಧಿತ ಜಾನ್ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಈ ಹಿಂದೆಯೇ ಪೊಲೀಸರು ಜಪ್ತಿ ಮಾಡಿದ್ದು, ಅಕ್ರಮವಾಗಿ ವಾಸವಾಗಿ ರುವುದು ಪತ್ತೆಯಾಗಿದೆ. ಹೀಗಾಗಿ ಆರೋಪಿ ಯ ವಿರುದ್ಧ ಎನ್‌ಡಿಪಿಎಸ್ ಹಾಗೂ ವಿದೇಶಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೌಚಾಲಯದೊಳಗೆ ಡ್ರಗ್ಸ್ ಎಸೆದು ಫ್ಲಶ್ ಮಾಡಿದ! : ಆರೋಪಿಯ ಜಾಲ ಭೇದಿಸಿದ್ದ ಪಿಐ ಮಿರ್ಜಾ ಅಲಿ ರಜಾ ಮತ್ತು ತಂಡ ಗ್ರಾಹಕರ ಸೋಗಿನಲ್ಲಿ ಆರೋಪಿಗೆ ಕರೆ ಮಾಡಿ ಠಾಣೆ ವ್ಯಾಪ್ತಿಗೆ ಕರೆಸಿಕೊಂಡಿದ್ದಾರೆ. ಬಳಿಕ ಮಾದಕ ವಸ್ತು ಪಡೆಯುವಾಗ ಸುತ್ತುವರಿದೂ ಆರೋಪಿಯನ್ನು ಬಂಧಿಸಲಾಗಿದೆ. ಬಳಿಕ ಈತ ವಾಸವಾಗಿದ್ದ ಆರ್.ಟಿ.ನಗರದ ಮನೆಗೆ ಶೋಧಿಸಲು ಕರೆದೊಯ್ಯಲಾಗಿತ್ತು. ಆದರೆ, ಮನೆಯಲ್ಲಿದ್ದ ಮತ್ತೂಬ್ಬ ನೈಜಿರಿಯಾ ಪ್ರಜೆ, ಪೊಲೀಸರನ್ನು ಕಂಡು ಮನೆಯ ಗ್ಯಾಸ್ ಸಿಲಿಂಡರ್ ಹಾಗೂ ಇತರೆಡೆ ಇಟ್ಟಿದ್ದ ಮಾದಕ ವಸ್ತುಗಳನ್ನು ಕಿಟಕಿ ಮತ್ತು ಶೌಚಾಲಯದಲ್ಲಿ ಎಸೆದು ಫ್ಲಶ್ ಮಾಡಿದ್ದಾನೆ. ಬಳಿಕ ಶೌಚಾಲಯದ ಕಿಟಕಿಯಿಂದ ಜಿಗಿದು ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.