Advertisement
ಹೈಕೋರ್ಟ್ ಪಾಲಿಕೆಯಿಂದ ಜಾರಿಗೊಳಿಸಲು ಉದ್ದೇಶಿಸಿರುವ ಜಾಹೀರಾತು ನೀತಿಯನ್ನು ಆಗಸ್ಟ್ 31ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದೆ. ಆ ಹಿನ್ನೆಲೆಯಲ್ಲಿ ಜಾಹೀರಾತು ನೀತಿಗಳನ್ನು ರಚಿಸಲಾಗುತ್ತಿದ್ದು, ಈಗಾಗಲೇ ಕರಡು ಪ್ರತಿ ಸಿದ್ಧವಾಗಿದೆ. ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವ ಮೊದಲು ಪಾಲಿಕೆಯ ಕೌನ್ಸಿಲ್ ಸಭೆಯ ಮುಂಡಿಸಿ ಅನುಮೋದನೆ ಪಡೆಯಲಾಗುವುದು ಎಂದುಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ದೆಹಲಿ ಮಾದರಿ ನೀತಿಗೆ ಕೊಕ್: ಪಾಲಿಕೆಯ ವ್ಯಾಪ್ತಿಯಲ್ಲಿ ಈ ಮೊದಲು ದೆಹಲಿ ಮಾದರಿಯ ಜಾಹೀರಾತು ನೀತಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಸಿದ್ಧಪಡಿಸಲಾಗಿದ್ದ ಕರಡು ಪ್ರತಿ ನ್ಯಾಯಾಲಯಕ್ಕೆ ಸಲ್ಲಿಸಲು ಸಹ ಸಿದ್ಧತೆ ನಡೆದಿತ್ತು. ಆದರೆ, ದೆಹಲಿ ನೀತಿಯಲ್ಲಿನ ಕೆಲವೊಂದು ನಿಯಮಗಳು ಬೆಂಗಳೂರಿಗೆ ಅನ್ವಯವಾಗುವುದಿಲ್ಲ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ದೆಹಲಿ ಮಾದರಿಯನ್ನು ಕೈಬಿಡಲಾಗಿದ್ದು, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ದರ್ಜೆಯ ಜಾಹೀರಾತು ನೀತಿ ಜಾರಿಗೊಳಿಸಲು ಪಾಲಿಕೆ ಸಜ್ಜಾಗಿದೆ.
Related Articles
Advertisement
ಮಂದ ಬೆಳಕಿನಲ್ಲಿ ಜಾಹೀರಾತು ಪ್ರದರ್ಶನ ಜಾಹೀರಾತು ಫಲಕಗಳಿಂದ ಅಪಘಾತಗಳು ಹೆಚ್ಚುತ್ತಿವೆ ಎಂಬ ಕಾರಣದಿಂದ ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅದರಂತೆ ಜನರಿಗೆ ಅನುಕೂಲವಾಗುವ ಜಾಹೀರಾತುಗಳನ್ನು ಪ್ರಕಟಿಸಲು ನಿಗದಿತ ಸ್ಥಳ ಗುರುತಿಸಲಾಗುತ್ತದೆ. ಅದರಂತೆ ಮುಖ್ಯರಸ್ತೆ, ಹೊರ ಹಾಗೂ ಒಳವರ್ತುಲ ರಸ್ತೆಗಳಲ್ಲಿ ರಾತ್ರಿ 11 ಗಂಟೆ ನಂತರ 0.5 ಕ್ಯಾಡೆಲ್ ಬಲ್ಬ್ನ ಬೆಳಕಲ್ಲಿ ಜಾಹೀರಾತು ಪ್ರದರ್ಶಿಸಬೇಕು ಅಥವಾ ಜಾಹೀರಾತು ಫಲಕಕ್ಕೆ ಅಳವಡಿಸಲಾಗಿರುವ ವಿದ್ಯುತ್ ಕಡಿತಗೊಳಿಸುವ ಕುರಿತು ನಿಯಮ ರಚಿಸಲಾಗುತ್ತಿ¨
ಭಿತ್ತಿಪತ್ರ ಅಂಟಿಸಿದವರ ವಿರುದ್ಧ ಪ್ರಕರಣ ನಗರದಲ್ಲಿ ಅನಧಿಕೃತ ಜಾಹೀರಾತು ಫಲಕ ಅಳವಡಿಕೆ ಹಾಗೂ ಭಿತ್ತಿಪತ್ರ ಅಂಟಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ, ಬುಧವಾರ ಬಿಜೆಪಿ ಮುಖಂಡ ಚಿ.ನಾ.ರಾಮು ವಿರುದ್ಧ ದೂರು ದಾಖಲಿಸಿದೆ. ದಾಸರಹಳ್ಳಿ ವಲಯದಲ್ಲಿ ಇನ್ಫ್ರಾಕಾನ್ ಎಂಬ ಸಂಸ್ಥೆಯು ಅನಧಿಕೃತವಾಗಿ ಜಾಹೀರಾತು ಫಲಕ (ಸ್ಟ್ರಕ್ಚರ್) ಅಳವಡಿಸಿದ್ದು, ಫಲಕವನ್ನು ತೆರವುಗೊಳಿಸಿರುವ ಅಧಿಕಾರಿಗಳು ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿಯ ಗೋಡೆಗಳ ಮೇಲೆ “ನನ್ನ ಜನ ಅನಾಥ” ಎಂಬ ಪುಸ್ತಕ ಬಿಡುಗಡೆ ಸಮಾರಂಭದ ಭಿತ್ತಿಪತ್ರಗಳನ್ನು ಅಂಟಿಸಿದ ಕಾರಣಕ್ಕಾಗಿ ಬಿಜೆಪಿ ಮುಖಂಡ ಚಿ.ನಾ.ರಾಮು ವಿರುದ್ಧ ದೂರು ದಾಖಲಿಸಲಾಗಿದೆ.
ಎಲ್ಲಿಂದ ಎರವಲು?ಸಾವೊ ಪಾಲೊ (ಬ್ರೆಜಿಲ್), ಪ್ಯಾರಿಸ್ (ಫ್ರಾನ್ಸ್), ನ್ಯೂಯಾರ್ಕ್ (ಅಮೆರಿಕ), ಲಂಡನ್ (ಇಂಗ್ಲೆಂಡ್), ಸಿಂಗಾಪುರ, ಕೊಟೋ (ಜಪಾನ್), ನ್ಯೂ ಸೌತ್ ವೇಲ್ಸ್ (ಆಸ್ಟ್ರೇಲಿಯಾ) ಹಾಗೂ ದೆಹಲಿ, ಚೆನ್ನೈ ಹಾಗೂ ಮುಂಬೈ ನಗರಗಳಿಂದ ಜಾಹೀರಾತು ನಿಯಮಗಳನ್ನು ಎರವಲು ಪಡೆಯಲಾಗುತ್ತಿದೆ ಎಲ್ಲೆಲ್ಲಿ ನಿಷೇಧ
ರಾಷ್ಟ್ರೀಯ ಉದ್ಯಾನ, ಅರಣ್ಯ ಪ್ರದೇಶ, ನೀರಿನ ಮೂಲ, ಐತಿಹಾಸಿಕ ಸ್ಥಳ, ಸ್ಮಶಾನ, ಧಾರ್ಮಿಕ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ಇಲ್ಲ. ಜೋಡಿ ರಸ್ತೆ ಮಧ್ಯಭಾಗದಲ್ಲಿ, ಫುಟ್ ಪಾತ್, ರಸ್ತೆ ಜಂಕ್ಷನ್‌ಗಳ 75 ಮೀ. ವ್ಯಾಪ್ತಿಯಲ್ಲಿ ಹೋರ್ಡಿಂಗ್ಸ್ ಅಳವಡಿಕೆ ನಿಷೇಧ, ವಸತಿ ಪ್ರದೇಶಗಳಲ್ಲಿ ಫಲಕ ಅಳವಡಿಕೆಗೆ ಅವಕಾಶ ನೀಡದಿರಲು ನೀತಿಯಲ್ಲಿ ಉಲ್ಲೇಖೀಸಲಾಗಿದೆ. ಕಠಿಣ ಕ್ರಮಕ್ಕೆ ನಿಯಮ ಭಿತ್ತಿಪತ್ರಗಳಿಂದ ನಗರದ ಸೌಂದರ್ಯ ಹಾಳಾಗಿರುವ ಹಿನ್ನೆಲೆಯಲ್ಲಿ ಮರಗಳು, ಮೆಟ್ರೋ ಪಿಲ್ಲರ್, ವಿದ್ಯುತ್ ಕಂಬಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸುವುದನ್ನು ನಿಷೇಧಿಸಲಾಗಿದ್ದು, ನಿಯಮ ಉಲ್ಲಂ ಸುವವರ ಮೇಲೆ ಕಠಿಣ ಕ್ರಮಕೈಗೊಳ್ಳುವ ಕುರಿತು ನಿಯಮ ರೂಪಿಸಲಾಗುತ್ತಿದೆ. ವಿಶ್ವದ ಏಳು ಪ್ರಮುಖ ನಗರಗಳು ಹಾಗೂ ದೇಶ ಮೂರು ನಗರ ಗಳಲ್ಲಿನ ಜಾಹೀರಾತು ನೀತಿ ಅಧ್ಯಯನ ಮಾಡಿ ಹೊಸ ಜಾಹೀರಾತು ನೀತಿ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಸಭೆಯಲ್ಲಿ ನೀತಿ ಮಂಡಿಸಲಾಗುವುದು.
ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ