Advertisement
ಗುಜರಾತ್, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಒಂದೇ ಅವಧಿಯಲ್ಲಿ ಮೀನುಗಾರಿಕೆ ನಿಷೇಧವಿದೆ. ಆದರೆ ಈ ಸಮಯದಲ್ಲಿ ಒಡಿಶಾ, ಆಂಧ್ರ, ತಮಿಳುನಾಡು ವ್ಯಾಪ್ತಿಯಲ್ಲಿ ನಿಷೇಧವಿರುವುದಿಲ್ಲ. ಕರ್ನಾಟಕ ವ್ಯಾಪ್ತಿಯಲ್ಲಿ ಮೀನುಗಾರಿಕೆ ಆರಂಭದ ಸಮಯದಲ್ಲಿ ಅಲ್ಲಿ ನಿಷೇಧವಿರುತ್ತದೆ.
ಪ್ರತಿಯೊಂದು ತಳಿಯ ಮೀನಿಗೂ ಕಳೆದ ಎರಡು ತಿಂಗಳನ್ನು ಹೋಲಿಸಿ ದರೆ ದರ ವಿಪರೀತ ಹೆಚ್ಚಳವಾಗಿದೆ. ಸಣ್ಣ ಗಾತ್ರದ ಬಂಗುಡೆ 25 ಕೆಜಿಯ (1ಕೆ.ಜಿ. ತೂಕದಲ್ಲಿ 16 -18 ಮೀನು) ಒಂದು ಬಾಕ್ಸ್‌ಗೆ 4,000 ರೂಪಾಯಿಗೆ ಮಾರಾಟವಾಗುತ್ತದೆ. ಬೂತಾಯಿ 5,500-6,000 ರೂ ಇದ್ದು, 1 ಕೆ.ಜಿ.ಯಲ್ಲಿಲ್ಲಿ 20 -22 ಮೀನುಗಳು ಇರುತ್ತವೆ. ತಾಜಾ ಬೊಳಂಜೀರ್ ಇದ್ದರೆ ಕೆ.ಜಿ.ಗೆ 150-160 ರೂ.ಗೆ ಮಾರಾಟವಾಗುತ್ತಿದೆ.
Related Articles
-ದಿನೇಶ್ ಜಿ. ಸುವರ್ಣ, ಮೀನು ವ್ಯಾಪಾರಸ್ಥರು, ಮಲ್ಪೆ
Advertisement
ಮಲ್ಪೆ ಫಿಶ್‌ಟ್ರೇಡ್ ಸೆಂಟರಿನಲ್ಲಿ ವಹಿವಾಟುಈ ಹಿಂದಿನ ವರ್ಷದವರೆಗೆ ಮಳೆಗಾಲದಲ್ಲಿ ಬಂದರಿನ ಒಳಗೆಯೇ ಹೊರರಾಜ್ಯದ ಮೀನುಗಾರಿಕೆ ಚಟುವಟಿಕೆಗಳು ನಡೆಯುತ್ತಿದ್ದವು. ಈ ಬಾರಿ ಬಂದರಿನ ಹೊರಗೆ ಮೀನುಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿ ಮಲ್ಪೆ ಫಿಶ್‌ಟ್ರೇಡ್ ಸೆಂಟರ್ ತೆರೆಯಲಾಗಿದ್ದು, ಹೊರರಾಜ್ಯದ ಮೀನುಗಳನ್ನು ಇಲ್ಲೇ ರಖಂ ಆಗಿ ವಿಲೇವಾರಿ ಮಾಡಲಾಗುತ್ತದೆ.
-ವಿನಯ ಕರ್ಕೇರ, ಕಾರ್ಯದರ್ಶಿ, ಮೀನು ವ್ಯಾಪಾರಸ್ಥರ ಸಂಘ, ಮಲ್ಪೆ