Advertisement
ಪ್ರತಿಭಾವಂತರಿಗಂತೂ ವಿದೇಶಗಳಲ್ಲಿ ಕಲಿಯುವುದಕ್ಕೆ ಮಹತ್ತರವಾದಂತಹ ಅವಕಾಶವಿದೆ. ಅದರಲ್ಲಿಯೂ ಅಮೇರಿಕ, ಬ್ರಿಟನ್, ಜರ್ಮನಿ ಸೇರಿದಂತೆ ಇತರೇ ದೇಶಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬೇಡಿಕೆ ಇದೆ. ಭಾರತದಿಂದಲೂ ಕೂಡ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಿ ಕಲಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಮೂಲಭೂತ ಸೌಕರ್ಯ ಹೊಂದಿರುತ್ತದೆ ಎಂಬ ಉದ್ದೇಶದಿಂದ ವಿದೇಶಿ ಶಿಕ್ಷಣದತ್ತ ಆಸಕ್ತಿ ವಹಿಸುತ್ತಿದ್ದಾರೆ.
Related Articles
Advertisement
ಎಸ್‌ಐಟಿ ಪರೀಕ್ಷೆವಿದೇಶಗಳಲ್ಲಿ ಶಿಕ್ಷಣ ಪಡೆಯುವುದಕ್ಕೂ ಮುನ್ನ ಎಸ್‌ಐಟಿ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು ವಿದೇಶಗಳಲ್ಲಿರುವ ವಿವಿಧ ಸ್ನಾತಕೋತ್ತರ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೂ ನಡೆಸಲಾಗುತ್ತದೆ. ಈ ರೀತಿಯ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಅಲ್ಲದೆ, ವಿದ್ಯಾರ್ಥಿಯ ಬುದ್ಧಿಮತ್ತೆ ತಿಳಿಯಲು ಕೂಡ ಸಹಕಾರಿಯಾಗುತ್ತದೆ. ಎಸ್‌ಎಟಿ ಪರೀಕ್ಷೆಯನ್ನು ನಡೆಸಲು ಅಮೆರಿಕದ ಎಲ್ಲ ವಿ.ವಿ.ಗಳು ಈಗಾಗಲೇ ಒಪ್ಪಿಕೊಂಡಿವೆ. ಪ್ರಯೋಜನಗಳು
ವಿದೇಶಗಳಲ್ಲಿ ಕಲಿಯವುದು ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿ ಅನುಭವ. ವಿದೇಶಗಳಲ್ಲಿ ಕಲಿಯುವುದರಿಂದ ವಿದ್ಯಾರ್ಥಿಗಳು ಹೊಸ ಸ್ಥಳ, ಹೊಸ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ. ವಿದೇಶಿ ಕಲಿಕೆಯ ಪ್ರಯೋಜನಗಳು ಇಲ್ಲಿವೆ
1 ಜಗತ್ತನ್ನು ನೋಡುವಿರಿ
ವಿದೇಶಿ ಕಲಿಕೆಯಿಂದ ಜಗತ್ತನ್ನು ನೋಡಲು ಸಾಧ್ಯ.ಹೊಸ ದೃಷ್ಟಿಕೋನ, ಪದ್ಧತಿಗಳು ಮತ್ತು ಚಟುವಟಿಕೆಗಳೊಂದಿಗೆ ಹೊಚ್ಚ ಹೊಸ ದೇಶವನ್ನು ಅನ್ವೇಷಿಸಲು ಸಾಧ್ಯ.
2 ನೂತನ ಶಿಕ್ಷಣ ಶೈಲಿ
ವಿದೇಶಿ ಕಲಿಕೆಯ ಇನ್ನೊಂದು ಪ್ರಯೋಜನ ವಿಭಿನ್ನ ಶಿಕ್ಷಣ ಪದ್ಧತಿಯ ಅನುಭವವನ್ನು ಪಡೆಯುವುದು. ದೇಶದಲ್ಲಿರುವ ಶಿಕ್ಷಣ ಪದ್ದತಿಗೂ ವಿದೇಶದಲ್ಲಿರುವ ಶಿಕ್ಷಣ ಪದ್ಧತಿಗೂ ಸಾಕಷ್ಟು ವ್ಯತ್ಯಾಸಗಳಿವೆ.
3 ಹೊಸ ಸಂಸ್ಕೃತಿ ಪರಿಚಯ
ವಿದೇಶಿ ಕಲಿಕೆ ಮತ್ತೂಂದು ಅವಕಾಶ ವಿಭಿನ್ನ ಹಾಗೂ ಹೊಸ ಸಂಸ್ಕೃತಿಯ ಪರಿಚಯ ನಿಮ್ಮದಾಗುತ್ತದೆ. ಅಲ್ಲಿನ ಇತಿಹಾಸ, ಅಲ್ಲಿನ ಸಂಪ್ರದಾಯ ಮೊದಲಾದ ಹೊಸ ವಿಷಯಗಳನ್ನು ಕಲಿಯಲು ಸಾಧ್ಯ.
4 ಭಾಷಾ ಕೌಶಲ
ವಿದೇಶಿ ಕಲಿಕೆಯ ಪ್ರಮುಖ ಪ್ರಯೋಜನ ನಿಮ್ಮ ಭಾಷಾ ಕೌಶಲ ಹೆಚ್ಚಾಗುತ್ತದೆ. ವಿದೇಶಿ ಭಾಷೆಗಳನ್ನು ಕಲಿಯಲಾರಂಭಿಸುವಿರಿ. ಇದರಿಂದ ಭಾಷೆಯ ಮೇಲಿನ ಹಿಡಿತ ಸಾಧ್ಯ.
5 ವೃತ್ತಿ ಅವಕಾಶ
ವಿದೇಶದಲ್ಲಿ ಕಲಿತು ತವರಿಗೆ ನೀವು ಹೊಸ ಸಂಸ್ಕೃತಿ, ಭಾಷಾ ಕೌಶಲ, ಉತ್ತಮ ಶಿಕ್ಷಣ ಮತ್ತು ಹೊಸ ದೃಷ್ಟಿಕೋನದಿಂದ ಹಿಂದಿರುಗಿರುತ್ತೀರಿ. ಹೀಗಿ ಇಲ್ಲಿ ವೃತ್ತಿ ಅವಕಾಶಗಳು ಹೆಚ್ಚು.
ವಿದೇಶದಲ್ಲಿ ಕಲಿಯಬೇಕು ಎಂಬ ಆಸೆ ಇದ್ದರೆ ಕಲಿಕೆಯ ವಿಷಯ ಮತ್ತು ಕಾಲೇಜಿನ ಬಗ್ಗೆ ಮೊದಲೇ ಕೂಲಂಕುಷವಾಗಿ ತಿಳಿದುಕೊಳ್ಳುವುದು ಒಳಿತು. ವಿದೇಶದಲ್ಲಿ ಕಲಿಕೆಗೆಂದು ಕೋರ್ಸ್‌ಗಳಿಗೆ ಹಣ ನೀಡಿದ ಬಳಿಕ ಆ ಸಂಸ್ಥೆಗಳು ಹಿಂದಿರುಗಿಸುವುದು ಕಷ್ಟ. ಅದೇ ಕಾರಣಕ್ಕೆ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರಾಶಸ್ತ್ಯ ನೀಡವುದು ಉತ್ತಮ. ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾನಿಲಯಗಳ ಮಾಹಿತಿಯನ್ನು www.topuniversities.com/student-info ದಲ್ಲಿ ಪಡೆಯಬಹುದಾಗಿದೆ. •ನವೀನ್ ಭಟ್ ಇಳಂತಿಲ