Advertisement
2019ರಲ್ಲಿ ನಿಡಸೇಸಿ ಕೆರೆ ಸಾರ್ವಜನಿಕರ ಸಹಯೋಗದಲ್ಲಿ ಪುನಶ್ಚೇತನದ ಬಳಿಕ ಕೆರೆ ಪ್ರದೇಶದಲ್ಲಿ ನೀರು ನಿಂತಿದ್ದು, ಹಕ್ಕಿಗಳು ಬರುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕಿಗಳು ಬಂದಿರುವುದು ಪಕ್ಷಿ ಛಾಯಾಗ್ರಾಹಕರ ಉತ್ಸಾಹ ಇಮ್ಮಡಿಸಿಎ. ಕಳೆದ ವರ್ಷದಲ್ಲಿ ಬೆರಳೆಣಿಕೆ ಪ್ರಮಾಣದಲ್ಲಿದ್ದ ಬಂದಿದ್ದ ಕೊಕ್ಕರೆ ಪ್ರಬೇಧ ಮುಂಗೋಲಿಯ ವಲಸೆ ಹಕ್ಕಿ ಕಾರ್ಕೋಂಚ್ (ಡೆಮೋಯಿಸೆಲ್ ಕ್ರೇನ್) ಸದ್ಯ 300ಕ್ಕೂ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ. ಈ ಕುರಿತು ಮಾಹಿತಿ ನೀಡಿದ ಪಕ್ಷಿ ಛಾಯಾಗ್ರಾಹಕ, ಕೊಪ್ಪಳ ಜಿಪಂ ಸಿಎಒ ಅಮೀನ್ ಅತ್ತಾರ ಅವರು, ಈಚೆಗೆ ಇಳಿ ಹೊತ್ತಿನಲ್ಲಿ ನಿಡಶೇಸಿ ಕೆರೆ ಪ್ರದೇಶದಲ್ಲಿ ನೂರಕ್ಕೂ ಅಧಿಕ ಕಾರ್ಕೋಂಚ್ ಹಕ್ಕಿಗಳ ಸಮೂಹ ಕಂಡು ಬಂದಿದೆ.
Related Articles
Advertisement