Advertisement

ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಯುಕೆಜಿ ಪ್ರಾರಂಭಿಸಲು ಒತ್ತಾಯ

01:15 PM Dec 06, 2019 | Suhan S |

ದೇವನಹಳ್ಳಿ : ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭ ಮತ್ತಿತರ ಬೇಡಿಕೆಗೆಗೆ ಆಗ್ರಹಿಸಿ ಜಿಲ್ಲಾ ಮತ್ತು ತಾಲೂಕು ಅಂಗನವಾಡಿ ನೌಕರರ ಸಂಘ (ಸಿಐಟಿಯು) ವತಿಯಿಂದ ನಗರದ ಹೊಸ ಬಸ್‌ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ವತಿಯಿಂದ ಪಾದಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.

Advertisement

ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ನಾಗರತ್ನ ಮಾತನಾಡಿ, ಇಂದು ಪ್ರತಿಯೊಬ್ಬ ಮನುಷ್ಯನಿಗೂಆರ್ಥಿಕ ನೀತಿಗಳು ಕಾಡುತ್ತಿದೆ. ಬರುವ ಆದಾಯ ಕಡಿಮೇ ಆಗುತ್ತಿದೆ. ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಅಧಿಕಾರಕ್ಕೆ ಬರುವ ಸರ್ಕಾರದ ನೀತಿಯಿಂದಾಗಿ ಉಚಿತವಾಗಿ ಸಿಗಬೇಕಾದ ಶಿಕ್ಷಣ,ಆರೋಗ್ಯ ಮತ್ತು ಆಹಾರ ಖಾಸಗಿಯಿಂದಾಗಿ ದುಬಾರಿ ಆಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ ಕೆಜಿ ಮತ್ತು ಯುಕೆಜಿ ಅನ್ನು ಪ್ರಾರಂಭಿಸಲು ಒತ್ತಾಯಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ.10 ರಂದು ತುಮಕೂರಿನಿಂದ ಬೆಂಗಳೂರಿನ ವರೆಗೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈಗ ಶಿಕ್ಷಣ ಇಲಾಖೆಯಲ್ಲಿ ಮೇ.17 ರಂದು ತಂದಿರುವ ಸುತ್ತೋಲೆಯನ್ನು ರದ್ದು ಪಡಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ ಕೆಜಿ ಮತ್ತು ಯುಕೆಜಿ ಅನ್ನು ಪ್ರಾರಂಭಿಸಬೇಕು. ತಾಲೂಕು ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಪುಷ್ಪವತಮ್ಮ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಮಗ್ರ ಶಿಶು ಅಭಿವೃದ್ದಿ ಯೋಜನೆಗೆ ಮಾತ್ರ ಬಳಸಿ ಹೆಚ್ಚುವರಿ ಕೆಲಸಗಳಾದ ಸ್ತ್ರೀ ಶಕ್ತಿ, ಭಾಗ್ಯ ಲಕ್ಷ್ಮೀ, ಮಾತೃಪೂರ್ಣ , ಬಿಎಲ್‌ ಒ ಸರ್ವೇ, ಮಾತೃ ವಂದನಾ, ಮಾತೃ ಶ್ರೀ, ಮೊದಲಾದ ಕೆಲಸಗಳಿಂದ ಬಿಡುಗಡೆಗೊಳಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು ಎಂದರು.

ಜಿಲ್ಲಾ ಅಧ್ಯಕ್ಷೆ ಲಿಲಾವತಿ, ಚಿಕ್ಕ ಬಳ್ಳಾಪುರ ಜಿಲ್ಲಾಧ್ಯಕ್ಷೆ ಲಕ್ಷ್ಮೀ ದೇವಿ, ತಾಲೂಕು ಕಾರ್ಯದರ್ಶಿ ಸೀತಾಲಕ್ಷ್ಮೀ ಖಜಾಂಚಿ ಅನುಸೂಯಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next