Advertisement

ನೇಕಾರರಿಗೆ ಮಂಜೂರಾದ ಮನೆ ನೋಂದಾಯಿಸಲು ಒತ್ತಾಯ

04:23 PM Feb 28, 2017 | |

ಆಳಂದ: ಪಟ್ಟಣದ ನೇಕಾರರ ಉಪಕೇಂದ್ರ‌ ವ್ಯಾಪ್ತಿಯಲ್ಲಿ ಮಂಜೂರಾದ ಮನೆಗಳನ್ನು ನೇಕಾರರ ಹೆಸರಿಗೆ ಅಧಿಧಿಕೃತವಾಗಿ ನೋಂದಾಯಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಕೆೃಮಗ್ಗ ಅಭಿವೃದ್ಧಿ ನಿಮಗದ ನೇಕಾರ ಸಂಘ ತಹಶೀಲ್ದಾರಗೆ ಮನವಿ ಸಲ್ಲಿಸಿತು. 

Advertisement

ಪಟ್ಟಣದಲ್ಲಿ ಸೋಮವಾರ ಸಂಘದ ಅಧ್ಯಕ್ಷ, ಪುರಸಭೆ ಸದಸ್ಯ ಅಬ್ದುಲ್‌ ವಹೀದ್‌ ಜರ್ದಿ ನೇತೃತ್ವದಲ್ಲಿ ನೇಕಾರ ಬಾಂಧವರು ತಹಶೀಲ್ದಾರ ಸವರಾಜ ಎಂ. ಬೆಣ್ಣೆಶಿರೂರ ಅವರು ಮೂಲಕ ಹುಬ್ಬಳಿಯಲ್ಲಿರುವ ಪ್ರಧಾನ ಕಚೇರಿ ಕರ್ನಾಟಕ ಕೆೃಮಗ್ಗ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. 

35 ವರ್ಷಗಳ ಹಿಂದೆ ನೇಕಾರರಿಗೆ ಮನೆ ನೀಡಲಾಗಿದೆ. ಆದರೆ ಇಷ್ಟು ವರ್ಷಗಳಾದರು ಮನೆಗಳನ್ನು ಸಂಬಂಧಿಧಿತ ನೇಕಾರರ ಹೆಸರಿಗೆ ಪುರಸಭೆಯಲ್ಲಿ ನೋಂದಾಯಿಸದೆ ದಿನದೂಡಲಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಧಿಕಾರಿಗಳಿಗೆ ಮತ್ತು ನಿಗಮದ ಅಧ್ಯಕ್ಷರಿಗೆ ಮನವಿ ಮಾಡಿದರು ಸಹ ಯಾವುದೇ ಕ್ರಮ ಕೆೃಗೊಂಡಿಲ್ಲ ಎಂದು ಮುಖಂಡರು ಆರೋಪಿಸಿದರು. 

ಕಳೆದ ಜೂನ್‌ ತಿಂಗಳಲ್ಲಿ ಮನೆಗಳನ್ನು ಸಂಬಂಧಿಧಿತರಿಗೆ ನೋಂದಣಿ ಮಾಡಿಕೊಡಿವಂತೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜನವರಿ 16ರಂದು ಪಟ್ಟಣಕ್ಕೆ ಭೇಟಿ ನೀಡಿದ್ದ ನಿಗಮದ ಅಧ್ಯಕ್ಷ ರವಿಂದ್ರ ಕಲಬುರಗಿ ಅವರಿಗೆ ನೇಕಾರರ ಎಲ್ಲ ಸಮಸ್ಯೆ ಮನವರಿಕೆ ಮಾಡಿಕೊಡಲಾಗಿದೆ.

10ರಿಂದ15 ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೌಖೀಕವಾಗಿ ಹೇಳಿದ್ದರು. ಆದರೆ ಇದುವರೆಗೂ ಸ್ಪಂದಿಸಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ನೇಕಾರರ  ಮನೆಗಳನ್ನು ನೇಕಾರರ ಹೆಸರಿಗೆ ನೋಂದಾಯಿಸಿ ಕೊಡದೆ ಹೋದಲ್ಲಿ ಶೀಘ್ರವೇ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. 

Advertisement

ನೇಕಾರ ಹಿರಿಯ ಮುಖಂಡ ಸಿದ್ದಾರೂಢ ಚ. ಸನಗುಂದಿ, ಸಿದ್ದಾರೂಢ ಬುಳ್ಳಾ, ಅಬ್ದುಲ್‌ಸಾಬ ಅಂಬುಲ ಕಿಚಡೆ, ನಾಗೇಂದ್ರಪ್ಪ ಹೊಸಮನಿ, ಕಸ್ತೂರಬಾಯಿ ಜಾಲಾದಿ, ಚೋಟಿಮಾಬಿ ಜರ್ದಿ ಮತ್ತು ಅಯೂಬ್‌ ಅಲಿ ಜಾಮದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next