Advertisement

ಶೂನ್ಯ ಶೈಕ್ಷಣಿಕ ವರ್ಷ ಘೋಷಣೆಗೆ ಒತ್ತಾಯ

07:57 PM Dec 26, 2020 | Adarsha |

ಚಿತ್ರದುರ್ಗ: ಕೋವಿಡ್ ಮಹಾಮಾರಿ ಕಾರಣಕ್ಕೆ ಈ ವರ್ಷ ಭಾರೀ ತೊಂದರೆಯಾಗಿದ್ದು, ಹಲವು ದೇಶಗಳುಆರ್ಥಿಕವಾಗಿ ದಿವಾಳಿಯಾಗುತ್ತಿವೆ. ಇದರೊಟ್ಟಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಕೂಡ ಮುಗಿದು ಹೋಗುತ್ತಿರುವುದರಿಂದ ಪ್ರಸಕ್ತ ವರ್ಷವನ್ನು ಶೂನ್ಯ ಶೈಕ್ಷಣಿಕ ವರ್ಷ ಎಂದು ಘೋಷಣೆ ಮಾಡಬೇಕು ಎಂದು ಹಾಲುಮತ ಮಹಾಸಭಾ ಅಧ್ಯಕ್ಷ ಬಿ.ಟಿ. ಜಗದೀಶ್‌ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Advertisement

ಕಳೆದ ಫೆಬ್ರವರಿಯಿಂದ ಕೋವಿಡ್‌ ಆರ್ಭಟ ಶುರುವಾಗಿದೆ. ಅದನ್ನು ಮಣಿಸಲು ದೇಶಕ್ಕೆ ದೇಶವೇ ಲಾಕ್‌ಡೌನ್‌, ಸೀಲ್‌ಡೌನ್‌ ಮಾಡಿಕೊಂಡು ಎಲ್ಲವೂ ಸ್ಥಬ್ದವಾಗಿತ್ತು. ದೇಶದ ಶಿಕ್ಷಣ ವ್ಯವಸ್ಥೆ ಕೂಡಾ ಅಧೋಗತಿ ತಲುಪಿದೆ. ದಿನ ಕಳೆದಂತೆ ಸೋಂಕಿನ ಪ್ರಮಾಣ ಕ್ರಮೇಣ ತಗ್ಗುತ್ತಿತ್ತು.

ಇನ್ನಾದರೂ ಶಾಲೆಗಳು ಆರಂಭವಾಗಬಹುದು ಎಂಬ ನಿರೀಕ್ಷೆ ಇತ್ತು. ಇನ್ನೇನು 2021 ಜನವರಿ 1 ರಿಂದ ಮಕ್ಕಳು ಶಾಲೆಗೆ ಹೋಗಲು ಶಿಕ್ಷಣ ಇಲಾಖೆ ಕೂಡಾ ತಯಾರಿ ಮಾಡಿಕೊಂಡಿತ್ತು. ಆದರೆ ಏಕಾಏಕಿ ಕೋವಿಡ್ ರೂಪಾಂತರಗೊಂಡಿರುವ ವೈರಸ್‌ ದಾಳಿ ಮಾಡುತ್ತಿರುವುದರಿಂದ ಪೋಷಕರಲ್ಲಿ ಮತ್ತೆ ಆತಂಕ ಆರಂಭವಾಗಿದೆ. ಈವರೆಗೆ ನಡೆಸಿದ ಆನ್‌ಲೈನ್‌ ಪಾಠಗಳಿಂದ ಏನೇನೂ ಪ್ರಯೋಜನವಾಗಿಲ್ಲ.

ಇದನ್ನೂ ಓದಿ:ಕಾಪು ಗ್ರಾ.ಪಂ ಚುನಾವಣೆ: ಅಂತಿಮ ಹಂತದ ಸಿದ್ಧತೆ, ಕೋವಿಡ್ ಸೋಂಕಿತರಿಗೂ ಮತದಾನಕ್ಕೆ ಅವಕಾಶ

ಇದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿದೆ. ಫೋನ್‌, ಕಂಪ್ಯುಟರ್‌, ಟ್ಯಾಬ್‌ ಮುಂದೆ ಮಕ್ಕಳು ಗಂಟೆಗಟ್ಟಲೆ ಕುಳಿತ ಕಾರಣಕ್ಕೆ ಕಣ್ಣು ಸೇರಿದಂತೆ ಹಲವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸರ್ಕಾರ 2020 ಅನ್ನು ಶೂಯ ಶೆ„ಕ್ಷಣಿಕ ವರ್ಷ ಎಂದು  ಘೋಷಣೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next