Advertisement

ಹಳೆ ಪಠ್ಯ-ಪುಸ್ತ ಕ ಮುಂದುವರಿಸಲು ಒತ್ತಾಯ

04:54 PM Jun 25, 2022 | Team Udayavani |

ರಾಯಚೂರು: ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕೃತಗೊಂಡ ಪಠ್ಯ- ಪುಸ್ತಕಗಳನ್ನು ರದ್ದುಪಡಿಸಿ, ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಪರಿಷ್ಕೃತ ಹಿಂದಿನ ಪಠ್ಯಪುಸ್ತಕಗಳನ್ನೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸರ್ಕಾರ ಯಾವುದೇ ಆದೇಶವಿಲ್ಲದೇ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯದ ಅನುಭವ ಹೊಂದಿರದ ಹಾಗೂ ಶಿಕ್ಷಣ ತಜ್ಞವಲ್ಲದ ರೋಹಿತ್‌ ಚಕ್ರತೀರ್ಥ ಅವರ ನೇತೃತ್ವದಲ್ಲಿ ಪಠ್ಯ ಪರಿಷ್ಕರಿಸಿರುವುದು ಖಂಡನೀಯ ಎಂದು ದೂರಿದರು.

5ರಿಂದ 10ನೇ ತರಗತಿಯ ಶಾಲಾ ಪಠ್ಯ-ಪುಸ್ತಕಗಳಲ್ಲಿ ಬಸವಣ್ಣ, ಅಂಬೇಡ್ಕರ್‌, ಅಕ್ಕಮಹಾದೇವಿ, ಅಲ್ಲಮಪ್ರಭು, ನಾರಾಯಣಗುರು, ಭಗತ್‌ಸಿಂಗ್‌, ಟಿಪ್ಪು ಸುಲ್ತಾನ್‌, ಕುವೆಂಪು ಸೇರಿದಂತೆ ಅನೇಕ ಸಾಧಕರಿಗೆ, ಮಹನೀಯರಿಗೆ ಅವಮಾನ ಮಾಡಲಾಗಿದೆ. ನೈಜ ಇತಿಹಾಸವನ್ನು ತಿರಚಲಾಗಿದೆ ಎಂದು ಆರೋಪಿಸಿದರು. ರಾಜ್ಯದ ಬಿಜೆಪಿ ಸರ್ಕಾರವು ಮನವಾದಿ ಪಠ್ಯ ಪುಸ್ತಕಗಳನ್ನಾಗಿ ಮಾರ್ಪಡಿಸಲಾಗಿದೆ. ರಾಜ್ಯ ಸರ್ಕಾರ ಜನವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಚರ್ಚೆಯನ್ನು ಮಾಡದೆ ಏಕಪಕ್ಷೀಯವಾಗಿ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಮುಖಂಡರಾದ ಕೆ.ಜಿ ವೀರೇಶ, ಡಿ.ಎಸ್‌ ಶರಣಬಸವ, ಎಚ್‌.ಪದ್ಮಾ, ವರಲಕ್ಷ್ಮೀ, ತಾಯಮ್ಮ, ಮಹಾಲಕ್ಷ್ಮೀ, ರಂಗಪ್ಪ ಯಾಪಲದಿನ್ನಿ, ಕರಿಯಪ್ಪ ಅಚ್ಚೊಳ್ಳಿ, ಜಿಲಾನಿಪಾಷಾ, ಪ್ರವೀಣ್‌ ರೆಡ್ಡಿ, ಗುಂಜಹಳ್ಳಿ ಶರಣಪ್ಪ, ಮರಿಲಿಂಗಪ್ಪ, ಭಾಸ್ಕರ್‌, ಅಕ್ಕ ಮಹಾದೇವಿ, ಕಲ್ಯಾಣಮ್ಮ, ಶಕುಂತಲಾ, ಗೋಕರಮ್ಮ, ಲಕ್ಷ್ಮೀ, ನಾಗಮ್ಮ, ಶ್ರೀನಿವಾಸ ಕಲವಲದೊಡ್ಡಿ, ಮಾರೆಪ್ಪ ವಕೀಲರು, ಮಲ್ಲಿಗೆ, ಕುಮಾರ ಸಮತಳ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next