Advertisement

ಮೈದಾನದ ಹೆಸರು ಬದಲಿಸಲು ಒತ್ತಾಯ

12:07 PM Oct 31, 2017 | |

ಬೆಂಗಳೂರು: ನಗರದ ಸೆಂಟ್ರಲ್‌ ಕಾಲೇಜು ಮೈದಾನಕ್ಕೆ “ಕರ್ನಾಟಕ ಏಕೀಕರಣ ಮೈದಾನ’ ಎಂದು ಮರು ನಾಮಕರಣ ಮಾಡುವಂತೆ ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಒತ್ತಾಯಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಏಕೀಕರಣವಾಗಿ 61 ವರ್ಷಗಳು ಕಳೆದಿವೆ.

Advertisement

ಆದರೆ, ಏಕೀಕರಣದ ನಡೆದ ನಗರದ ಸೆಂಟ್ರಲ್‌ ಕಾಲೇಜು ಮೈದಾನ ಅಭಿವೃದ್ಧಿ ಕಂಡಿಲ್ಲ. ಇಂಥ ಸ್ಥಳವನ್ನು ಅಭಿವೃದ್ಧಿಪಡಿಸಿ, ಕರ್ನಾಟಕ ಏಕೀಕರಣ ಮೈದಾನವೆಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಏಕೀಕರಣ ಸ್ಥಳದ ಬಗ್ಗೆ ಅರಿವಿಲ್ಲದ ಮಂತ್ರಿಗಳು, ಶಾಸಕರು, ಮೈದಾನದ ಭೂಮಿಯ ಖಾಸಗೀಕರಣಕ್ಕೆ ಪಿತೂರಿ ನಡೆಸಿದ್ದು, ಅದಕ್ಕೆ ಅವಕಾಶ ನೀಡುವುದಿಲ್ಲ.

ಇದು ಕನ್ನಡಿಗರ ಶಕ್ತಿ ಕೇಂದ್ರವಾಗಬೇಕು. ಬೆಂಗಳೂರು  ವಿವಿ ಆಡಳಿತದಿಂದ ಬೇರೆಯವರಿಗೆ ವರ್ಗಾಯಿಸಬಾರದು. ಮೈದಾನ ಅಭಿವೃದ್ಧಿಯಾಗಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ್‌ ಮಾಡಲಾಗುವುದು ಎಂದು ಎಚ್ಚರಿಸಿದರು.

ಅಂದಿನ ಏಕೀಕರಣವನ್ನು ಉದ್ಘಾಟಿಸಿದ ಮಹನೀಯರಾದ ಮೈಸೂರು ಅರಸ ಜಯಚಾಮರಾಜ ಒಡೆಯರ್‌, ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ, ಕೆಂಗಲ್‌ ಹನುಮಂತಯ್ಯ, ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರಪ್ರಸಾದ್‌ ಪ್ರತಿಮೆಗಳನ್ನು ಮೈದಾನದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next