ಯುಂತಾಗಿದೆ. ಇದಕ್ಕೆ ಸೋಮಲಾಪುರ ಗ್ರಾಮದಲ್ಲಿ ಚಿರತೆ ಮಗುವಿನ ಮೇಲೆ ದಾಳಿ ನಡೆಸಿಕೊಂದು ಹಾಕಿರುವ ಘಟನೆ ಕಣ್ಮುಂದೆ ಇದ್ದು, ಕೂಡಲೇ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗುರು ವಾರ ನಡೆದ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆ ಯಲ್ಲಿ ಸದಸ್ಯ ಸಿ.ಡಿ. ಮಹಾದೇವ ಆಗ್ರಹಿಸಿದರು.
Advertisement
ತಾಪಂ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಅಂಚಿನ ಗ್ರಾಮದೊಳಗೆ ವನ್ಯಪ್ರಾಣಿಗಳು ಒಳನುಸಳದಂತೆ ತಂತಿಬೇಲಿ ನಿರ್ಮಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅರಣ್ಯ ಇಲಾಖೆ, ಚಿರತೆ ಸೆರೆಗೆ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
Related Articles
Advertisement
ಚುನಾವಣೆ ಗುರುತಿನ ಚೀಟಿಗಾಗಿ ಅನೇಕ ಬಾರಿ ಅರ್ಜಿ ಸಲ್ಲಿಸಿದರೂ ಜನರಿಗೆ ಗುರುತಿನ ಚೀಟಿ ಸಿಗುತ್ತಿಲ್ಲ. ಚುನಾವಣೆಯಲ್ಲಿ ಗ್ರಾಮಸ್ಥರು ಮತದಾನ ದಿಂದ ದೂರ ಉಳಿಯುಂತಾಗುತ್ತದೆ ಕೂಡಲೇ ಗುರುತಿನ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಸದಸ್ಯೆ ನಾಗವೇಣಿ ಬಸವರಾಜ್ ಒತ್ತಾಯಿಸುತ್ತಿದಂತಯೇ ಕಂದಾಯ ಅಧಿಕಾರಿ ಮಂಜುನಾಥ್, ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷ ಬಿ.ಎಸ್.ಶಿವಮೂರ್ತಿ ಸೇರಿದಂತೆ ವಿವಿಧ ಇಲಾಖಾಧಿಕಾರಿ ಸಭೆಯಲ್ಲಿ ಹಾಜರಿದ್ದರು.
ಚಿರತೆ ಸೆರೆಗೆ ಮೂರು ಕಡೆ ಬೋನ್ ಅಳವಡಿಕೆ ಕಂಪ್ಲಿ: ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಚಿರತೆ ಮೂರು ವರ್ಷದ ಬಾಲಕನನ್ನು ಬಲಿ ಪಡೆದ ನಂತರ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಇದೀಗ ಗ್ರಾಮದ ಮೂರು ಕಡೆಗಳಲ್ಲಿ ಚಿರತೆ ಸೆರೆಗೆ ಬೋನ್‌ಗಳನ್ನು ಅಳವಡಿಸಿದೆ. ಜನವಸತಿಯಲ್ಲಿದ್ದ ಗಿಡಗಂಟೆ ತೆರವುಗೊಳಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರತರಾಗಿದ್ದಾರೆ. ಸ್ಥಳೀಯರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಈಗಾಗಲೇ ಚಿರತೆ ಸೆರೆಗಾಗಿ ಒಂದು ಬೋನ್ ಅಳವಡಿಸಿದ್ದರು. ಇದೀಗ ಇನ್ನೆರಡು ಬೋನ್ ಗ್ರಾಮಕ್ಕೆ ತಂದಿದ್ದು, ಚಿರತೆ ಸೆರೆಗೆ ಸೂಕ್ತ ಸ್ಥಳದಲ್ಲಿ ಅಳವಡಿಸಿದ್ದಾರೆ. ಜೊತೆಗೆ ಸ್ಥಳೀಯರು ಸಂಚರಿಸಲು ಖಾಸಗಿ ಜಮೀನಿನಲ್ಲಿನ ಮುಳ್ಳಿನ ಗಿಡ ಗಂಟೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವಲ್ಲಿ ನಿರತರಾಗಿದ್ದು, ಸಾರ್ವಜನಿಕರು ಸಂಚರಿಸಲು ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ.
ಜನವಸತಿಯ ಅಕ್ಕಪಕ್ಕ ಇರುವ ಗಿಡಗಂಟೆ ತೆರವುಗೊಳಿಸಿದರೆ ಚಿರತೆ ಈ ಮಾರ್ಗದಲ್ಲಿ ಸುಳಿಯುವುದಿಲ್ಲ. ಒಂದೆರಡು ದಿನಗಳಲ್ಲಿ ಚಿರತೆ ಸೆರೆ ಹಿಡಿದು ನಂತರ ಅರಣ್ಯ ಇಲಾಖೆ ಮತ್ತು ನರೇಗಾ ಯೋಜನೆಯಡಿ ಖಾಸಗಿ ಜಮೀನಿನಲ್ಲಿರುವ ಗಿಡಗಂಟೆ ತೆರವುಗೊಳಿಸಲಾಗುವುದು. ಗುಡ್ಡದಂಚಿನಲ್ಲಿ ಸೋಲಾರ ದೀಪ ಅಳವಡಿಸುವ ಜೊತೆಗೆ ಜಿಪಂ ಸಿಇಒ ಅವರೊಂದಿಗೆ ಚರ್ಚಿಸಿ ಸೋಲಾರ ತಂತಿ ಬೇಲಿ ಅಳವಡಿಸಲಾಗುವುದು ಎಂದು ಬಳ್ಳಾರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಪಿ.ರಮೇಶ್ ಕುಮಾರ್ ತಿಳಿಸಿದರು. ಈ ವೇಳೆ ಅರಣ್ಯ ಇಲಾಖೆಯ ದೇವರಾಜ್, ಸಿಬ್ಬಂದಿ ಸಾಮೀದ್, ಸಿದ್ದಪ್ಪ, ಕುಮಾರ್ ಇನ್ನಿತರರಿದ್ದರು.