ಹುಬ್ಬಳ್ಳಿ: ಗ್ರೇಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಟ್ ಫೋರ್ಬ್ಸ್ ಇಂಡಿಯಾದ ಆಶ್ರಯದಲ್ಲಿ ದೇಶಾದ್ಯಂತ ವಾರ್ಷಿಕವಾಗಿ ಗ್ರೇಟ್ ಪೀಪಲ್ ಮ್ಯಾನೇಜರ್ ಅಧ್ಯಯನದಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವ್ಯವಸ್ಥಾಪಕ ಶ್ರೀಶೈಲ ಧನವಡೆ 100ರಲ್ಲಿ ಸ್ಥಾನ ಪಡೆದಿದ್ದಾರೆ.
ದೇಶದ ಅತ್ಯುನ್ನತ ಅನೇಕ ಕೈಗಾರಿಕಾ ವಲಯಗಳು, ಎನ್‌ಜಿಒ, ಸಾಮಾಜಿಕ ಜಾಲತಾಣ ಸಂಸ್ಥೆಗಳು, ಉತ್ಪಾದನಾ ಸಂಸ್ಥೆಗಳು, ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು. ಅಧ್ಯಯನದಲ್ಲಿ ಒಂದು ಸಂಸ್ಥೆಯಲ್ಲಿ ಅಥವಾ ಉನ್ನತ ಕಂಪನಿಗಳಲ್ಲಿ ವ್ಯವಸ್ಥಾಪಕರ ಜವಾಬ್ದಾರಿ ತುಂಬಾ ಮಹತ್ವದ್ದಾಗಿರುತ್ತದೆ. ಈ ಹಂತದಲ್ಲಿ ಅವರ ಕಾರ್ಯದಕ್ಷತೆ, ಜವಾಬ್ದಾರಿ ಹಂಚಿಕೆ, ಕಾರ್ಯ ವಿಂಗಡಣೆ, ವ್ಯವಹಾರ ವಹಿವಾಟು, ಸಹೋದ್ಯೋಗಿಗಳ ಜತೆ ಸಂಬಂಧ, ಉತ್ತಮ ಹೊಂದಾಣಿಕೆ, ಕ್ರಿಯಾತ್ಮಕ ಆಡಳಿತ ಮಹತ್ವದ ಪಾತ್ರ ವಹಿಸುತ್ತದೆ. ಹಾಗೆಯೇ ಅನೇಕ ಸವಾಲುಗಳನ್ನು ಕೂಡಾ ಎದುರಿಸಬೇಕಾಗುತ್ತದೆ. ಇವೆಲ್ಲ ಮಾಡಬೇಕಾದರೆ ವ್ಯವಸ್ಥಾಪಕರ ಪಾತ್ರ ನಿರ್ಣಾಯಕವಾಗಿರುತ್ತದೆ.
ಇದನ್ನೂ ಓದಿ:ಡೆಲ್ಲಿ ಅಂತಿಮ ಸ್ಕೋರ್ ಮೊದಲೇ ನಿಗದಿ?! ಐಪಿಎಲ್ ನಲ್ಲಿ ಮತ್ತೆ ಫಿಕ್ಸಿಂಗ್ ಶಂಕೆ!
ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಗ್ರೇಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಟ್ ಫೋರ್ಬ್ಸ್ ಇಂಡಿಯಾದ ಸಹಭಾಗಿತ್ವದಲ್ಲಿ ಗ್ರೇಟ್ ಪೀಪಲ್ ಮ್ಯಾನೇಜರ್ ಅಧ್ಯಯನ ನಡೆಸಿತ್ತು. ಈ ವರ್ಷ 24 ಕೈಗಾರಿಕಾ ವಲಯಗಳಿಂದ 1158 ಸಂಸ್ಥೆಗಳ 6344 ವ್ಯವಸ್ಥಾಪಕರ ಮೌಲ್ಯಮಾಪನ ಮಾಡಲಾಗಿದ್ದುಇದರಲ್ಲಿ ಅಗ್ರ 100 ಜನ ವ್ಯವಸ್ಥಾಪಕರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವ್ಯವಸ್ಥಾಪಕ ಶ್ರೀಶೈಲ ಧನವಡೆ ಕೂಡಾ ಭಾಗವಹಿಸಿ ಅಗ್ರ 100ರಲ್ಲಿ ಸ್ಥಾನ ಪಡೆದಿದ್ದಾರೆ.
ಶ್ರೀಶೈಲ ಧನವಡೆ ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದವರು. ಎಂಬಿಎ ಪದವೀಧರರಾಗಿದ್ದು, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದಲ್ಲಿ 12 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಗಸ್ತ್ಯ ಪ್ರತಿಷ್ಠಾನದ ಉತ್ತರ ಕರ್ನಾಟಕ ವಿಭಾಗದ ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸಿ, ವಿವಿಧ ಹುದ್ದೆಗಳನ್ನು ಅಲಂಕರಿಸಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಶೈಕ್ಷಣಿಕವಾಗಿ ಅನೂಕೂಲವಾಗುವ ಅನೇಕ ಹೊಸ ಯೋಜನೆಗಳನ್ನು ಪರಿಚಯಿಸಿದ್ದಾರೆ. ಪ್ರತಿಷ್ಠಾನದ ಕ್ವಾಲಿಟಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ಪ್ರಸ್ತುತ ಮಹಾರಾಷ್ಟ್ರ ಭಾಗದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.