Advertisement

India ಅಗ್ರ 50 ಶ್ರೀಮಂತರ ಫೋರ್ಬ್ಸ್ ಪಟ್ಟಿ: ಜೋಯ್‌ ಆಲುಕ್ಕಾಸ್‌ ಸ್ಥಾನವರ್ಧನೆ

11:26 PM Oct 14, 2023 | Team Udayavani |

ಮಂಗಳೂರು: ಜೋಯ್‌ ಆಲುಕ್ಕಾಸ್‌ ಕಂಪೆನಿಯ ಅಧ್ಯಕ್ಷ ಜೋಯ್‌ ಆಲುಕ್ಕಾಸ್‌ ಅವರು 2023ನೇ ಸಾಲಿನ ಭಾರತದ 100 ಶ್ರೀಮಂತರಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ವರ್ಧಿಸಿಕೊಂಡು 50ನೇ ಸ್ಥಾನಕ್ಕೇರಿದ್ದಾರೆ.

Advertisement

ಜುವೆಲರಿ ಕ್ಷೇತ್ರದಿಂದ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಗಳಿಸಿರುವ ಭಾರತದ ಏಕಮಾತ್ರ ಜುವೆಲ್ಲರ್‌ ಜೋಯ್‌ ಆಲುಕ್ಕಾಸ್‌ ಆಗಿದ್ದಾರೆ.
ಜೋಯ್‌ ಅವರು ಭಾರತೀಯ ಆಭರಣ ವಲಯದಲ್ಲಿ ಕ್ರಾಂತಿ ಯುಂಟಾಗುವಂತೆ ತಮ್ಮ ಸಂಸ್ಥೆ ಯನ್ನು ಮುನ್ನಡೆಸಿದರು. ಬಹುಮಹಡಿ ರಿಟೇಲ್‌ ಅಂಗಡಿಗಳು, ಸಂಘಟಿತ ಚಿಲ್ಲರೆ ಕಾರ್ಯಚಟುವಟಿಕೆಗಳು ಮತ್ತು ಬೃಹತ್‌ ಮಾದರಿಯ ಸ್ಟೋರ್‌ಗಳಂತಹ ಅವರ ಪ್ರಮುಖ ಕ್ರಾಂತಿಕಾರಿ ಪರಿಕಲ್ಪನೆಗಳು ಭಾರತೀಯ ಆಭರಣ ವಲಯದ ವ್ಯವಹಾರ ನಕಾಶೆಯನ್ನು ಜಾಗತಿಕ ವಲಯದಲ್ಲಿ ಪಸರಿಸುವಂತೆ ಪರಿವರ್ತನೆ ಗೊಳಿಸಿದೆ. ಕೌಟುಂಬಿಕವಾಗಿ ನಡೆಸುತ್ತಿದ್ದ ಅಂಗಡಿಗಳು ಬದಲಾವಣೆಗೊಂಡು ಪ್ರಧಾನ ಅಂಗಡಿಗಳಾಗಿ ಪರಿವರ್ತನೆ ಗೊಂಡಿವೆ.

ಚೆನ್ನೈಯಲ್ಲಿ ವಿಶ್ವದ ಬೃಹತ್‌ ಮಳಿಗೆ ತೆರೆಯಲು, ಪ್ರಚಾರದಲ್ಲಿ ರಾಲ್ಸ್‌ ರಾಯ್ಸ ಕಾರುಗಳ ಕೊಡುಗೆಯಾಗಿ ನೀಡಿಕೆ ಮತ್ತು ಯುಕೆ, ಯುಎಸ್‌ಎ ಹಾಗೂ ಪೂರ್ವದ ದೂರ ಪ್ರದೇಶಗಳಂತಹ ಭಾಗಗಳಲ್ಲಿ ಹೊಸ ಮಾರುಕಟ್ಟೆಗಳಿಗೆ ಪ್ರವೇಶಿಸುವುದು ಇತ್ಯಾದಿ ಪ್ರಮುಖ ಪ್ರಯತ್ನಗಳನ್ನು ಫೋಬ್ಸ್ìನಲ್ಲಿ ಹೇಳಲಾಗಿದೆ.

ಅವರು ಫೋರ್ಬ್ಸ್ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಕಳೆದ ವರ್ಷದ ತಮ್ಮ 69ನೇ ಸ್ಥಾನದಿಂದ ಸುಧಾರಣೆಗೊಂಡು ಈ ವರ್ಷ 50ನೇ ಸ್ಥಾನಕ್ಕೆ ಏರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next