Advertisement

ರಣಜಿ ಕ್ರಿಕೆಟಿಗರಿಗೆ ಬಿಸಿಸಿಐ ಪಂದ್ಯ ಶುಲ್ಕ ನೀಡಿಲ್ಲ ?

08:15 AM Mar 07, 2018 | Team Udayavani |

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಹ ಬಿಸಿಸಿಐ ಕಳೆದ 2 ವರ್ಷಗಳಿಂದ ರಣಜಿ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕ ನೀಡದೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಈ ಕುರಿತಂತೆ ಸ್ಫೋಟಕ ವರದಿಯೊಂದನ್ನು ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿದೆ.

Advertisement

ಪಂದ್ಯದ ಶುಲ್ಕ ಬಾಕಿ ಉಳಿ ದಿರುವುದೇಕೆ?: ಲೋಧಾ ಶಿಫಾ ರಸನ್ನು ಇನ್ನೂ ಎಲ್ಲ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳು ಅಳವಡಿಸಿಕೊಂಡಿಲ್ಲ. ಈ ಕಾರಣದಿಂದ ಸರ್ವೋಚ್ಚ ನ್ಯಾಯಾ ಲಯ ನಿಯೋಜಿತ ಬಿಸಿಸಿಐ ಕಟು ನಿರ್ಧಾರ ತೆಗೆದುಕೊಂಡಿದೆ. ಶಿಫಾರಸು ಜಾರಿಗೆ ತರದ ಕ್ರಿಕೆಟ್‌ ಸಂಸ್ಥೆಗಳ ಆಟಗಾರರಿಗೆ ಪಂದ್ಯ ಶುಲ್ಕವನ್ನು ತಡೆಹಿಡಿದಿದೆ. ಇದು ನೇರವಾಗಿ ಕ್ರಿಕೆಟ್‌ ಸಂಸ್ಥೆಗಳ ಮೇಲೆ ಒತ್ತಡ ಬೀರಿ ಶಿಫಾರಸು ಜಾರಿ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ ಎನ್ನು ವುದು ಲೆಕ್ಕಾಚಾರ. ಈ ಬಗ್ಗೆ ಸ್ವತಃ ಆಡಳಿತಾಧಿಕಾರಿಗಳು ಹಿಂದೆಯೇ ಸೂಚನೆ ನೀಡಿದ್ದರು.

ಬಿಸಿಸಿಐ ತನ್ನ ಒಟ್ಟು ಆದಾಯದಲ್ಲಿ ಶೇ.10.6ರಷ್ಟು ಹಣವನ್ನು ದೇಶೀಯ ಕ್ರಿಕೆಟ್‌ ಆಟಗಾರರ ಪಂದ್ಯದ ಶುಲ್ಕಕ್ಕಾಗಿಯೇ ಮೀಸಲಿಟ್ಟಿದೆ. ಒಂದು ಋತುವಿನ ಎಲ್ಲ ರಣಜಿ ಪಂದ್ಯಗಳಲ್ಲಿ ಆಡಿದರೆ ಆಟಗಾರನೊಬ್ಬ 15 ಲಕ್ಷ ರೂ. ಪಡೆಯುತ್ತಾನೆ. ಈ ಮೊತ್ತವನ್ನು ಹೆಚ್ಚಿಸಬೇಕೆಂದು ಶಿಫಾರಸಾಗಿದ್ದು, ಅದು ಜಾರಿಯಾದ ಬಗ್ಗೆ ಮಾಹಿತಿ ಲಭಿಸಿಲ್ಲ. ಬಿಸಿಸಿಐ ಒಟ್ಟಾರೆ ತನ್ನ ಆದಾಯದಲ್ಲಿ ಶೇ.26ರಷ್ಟು ಹಣವನ್ನು ಆಟಗಾರರಿಗೆ ಸಂಭಾವನೆಯಾಗಿಯೇ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next