Advertisement
ಮದುವೆ ಸಂಭ್ರಮದಲ್ಲಿದ್ದ ತಗ್ಗರ್ಸೆ ಗ್ರಾಮದ ಅರಳಿಕಟ್ಟೆಯ ಕುಶಲ ಶೆಟ್ಟಿ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ರಾಘವೇಂದ್ರ ಶೆಟ್ಟಿ ಹಾಗೂ ರಾಜೇಂದ್ರ ಶೆಟ್ಟಿ ಶಿಕ್ಷೆಗೊಳಗಾದವರು. ಮನೆಗೆ ಬೆಂಕಿ ಹಚ್ಚಿದ್ದಕ್ಕೆ 5 ವರ್ಷ ಕಠಿನ ಸಜೆ ಹಾಗೂ 50 ಸಾ.ರೂ. ದಂಡ, ಮನೆಗೆ ಅಕ್ರಮ ಪ್ರವೇಶ ಮಾಡಿದಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾ. ರೂ. ದಂಡ, ಸೊತ್ತು ನಾಶಕ್ಕೆ 1 ವರ್ಷ ಸಜೆ ಹಾಗೂ 10 ಸಾ. ರೂ. ದಂಡ ವಿಧಿಸಲಾಗಿದೆ. 3 ಶಿಕ್ಷೆಗಳನ್ನು ಏಕಕಾಲದಲ್ಲಿ ಅನು ಭವಿಸಬಹುದಾಗಿದ್ದು, ಒಟ್ಟು 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ದಂಡದಲ್ಲಿ 45 ಸಾ.ರೂ. ಅನ್ನು ಬೆಂಕಿ ಬಿದ್ದ ಮನೆಗೆ ಪರಿಹಾರವಾಗಿ ನೀಡಬೇಕಾಗಿದೆ ಎಂದು ತೀರ್ಪಿನಲ್ಲಿ ಪ್ರಕಟಿಸಿದೆ.
ಕುಶಲ ಶೆಟ್ಟಿ ಮನೆಯವರಿಗೆ ಹಾಗೂ ಅಪರಾಧಿಗಳಿಗೆ ಬಹಳ ವರ್ಷಗಳಿಂದ ಜಾಗದ ತಕರಾರು ನಡೆಯುತ್ತಿತ್ತು. 2015ರ ಎ.22ರಂದು ಕುಶಲ ಶೆಟ್ಟಿ ಅವರ ಮಗನ ಮದುವೆ ಹೆಮ್ಮಾಡಿಯ ಸಭಾ ಭವನ ವೊಂದರಲ್ಲಿ ನಡೆಯುತ್ತಿತ್ತು. ಇದೇ ಸಂದರ್ಭವನ್ನು ಬಳಸಿ ಕೊಂಡ ರಾಜು ಶೆಟ್ಟಿ ಹಾಗೂ ರಾಘವೇಂದ್ರ ಶೆಟ್ಟಿ ರಾಡ್‌ನಿಂದ ಮನೆಯ ಬೀಗ ಒಡೆದು ಒಳ ನುಗ್ಗಿ, ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಟೇಬಲ್, ಮಂಚವನ್ನೆಲ್ಲ ಹಾಲ್‌ಗೆ ತಂದು ರಾಶಿ ಹಾಕಿ ಅದಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಬಳಿಕ ಕಿಚ್ಚು ಇಡೀ ಮನೆಯನ್ನು ವ್ಯಾಪಿಸಿತ್ತು.