Advertisement

ಕಲಾದಗಿ ಪಿಡಿಒ ವರ್ಗಾವಣೆಗೆ ಆಗ್ರಹಿಸಿ ಸಿಇಒಗೆ ಮನವಿ

12:05 PM Nov 12, 2019 | Team Udayavani |

ಕಲಾದಗಿ: ಇಲ್ಲಿನ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆಗೆ ಆಗ್ರಹಿಸಿ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹಾಗೂ ತಾಪಂ ಇಒ ಅವರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಪಿಡಿಒ ದಾಕ್ಷಾಯಣಿ ಹಿರೇಮಠ, ಸದಸ್ಯರ ಸಲಹೆ ಸೂಚನೆ ಪಡೆಯದೇ ತಮ್ಮ ಮನಸ್ಸಿಗೆ ಬಂದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಬೇಸತ್ತಿದ್ದೇವೆ. ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ. ಪ್ರವಾಹದಿಂದ ಗ್ರಾಮದಲ್ಲಿ ರಾಢಿ ನೀರು ಆವರಿಸಿತ್ತು.

ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಲು 14ನೇ ಹಣಕಾಸು ಯೋಜನೆಯಲ್ಲಿ 10 ಲಕ್ಷ ರೂ ಕಾಯ್ದಿರಿಸಿದೆ. ಈ ಹಣವನ್ನು ಖರ್ಚು ಮಾಡುವಲ್ಲಿ ವಿಫಲರಾಗಿದ್ದಾರೆ. ಸಮಯ ಪ್ರಜ್ಞೆ ಇಲ್ಲದ ಪಿಡಿಒ ನಮಗೆ ಬೇಡ, ಇವರನ್ನು ಬೇರೆಡೆ ವರ್ಗಾವಣೆ ಮಾಡಿ ಆದೇಶಿಸಿ, ದೊಡ್ಡದಾದ ಗ್ರಾಪಂನ್ನು ಸಮರ್ಥವಾಗಿ ನಿರ್ವಹಿಸುವ ಅನುಭವುಳ್ಳ ಸಮರ್ಥ ಪಿಡಿಒ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಜಿಪಂ ಸದಸ್ಯೆ ಶೋಭಾ ವೆಂಕಣ್ಣ ಬಿರಾದಾರ ಪಾಟೀಲ, ಗ್ರಾಪಂ ಅಧ್ಯಕ್ಷೆ ತಾರಾಮತಿ ಪಾಟೀಲ, ಉಪಾಧ್ಯಕ್ಷ ನೂರಸಾಬ ಮುಜಾವರ, ಸದಸ್ಯ ಫಕೀರಪ್ಪ ಮಾದರ, ಅಂಜಲಿ ಬಾನು, ಸೈಪುದ್ದೀನ ಗುಳ್ಳಾರ, ಅಮೀನಸಾಬ ಬೀಳಗಿ, ಮೈಹಬೂಬ ಬನ್ನೂರ, ಶಾಂತವ್ವ ಜಲಗೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next