Advertisement

ಪರಿಸರದ ಮೇಲಿನ ಹಾನಿ ತಡೆಯುವ ಉದ್ದೇಶ

03:35 AM Feb 16, 2017 | Team Udayavani |

ಕಾಪು: ಪರಿಸರ ಸಂರಕ್ಷಣೆ ಉದ್ದೇಶ ಇಟ್ಟುಕೊಂಡು ಉಡುಪಿ ಆಗ್ಯಾನಿಕ್‌ ಕ್ಲಬ್‌ ಮತ್ತು ಜೇಸಿಐ ಉಡುಪಿ ಸಿಲ್ವರ್‌ ಸ್ಟಾರ್‌ ಘಟಕ ಜಂಟಿಯಾಗಿ ಹಮ್ಮಿಕೊಂಡಿರುವ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಕ್‌ ಪೆನ್‌ ವಿತರಿಸುವ ಕಾರ್ಯಕ್ರಮಕ್ಕೆ ಫೆ. 14ರಂದು ಕಟಪಾಡಿ ಕೆ.ವಿ.ಎಸ್‌.ಎಂ. ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.

Advertisement

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ, ಮನುಷ್ಯ ತಾನಾಗಿಯೇ ಭೂಗರ್ಭದ ಮೇಲೆ ನಡೆಸುತ್ತಿರುವ ದೌರ್ಜನ್ಯದಿಂದ ಸ್ವತಃ ಭೂದೇವಿಯ ಶಾಪಕ್ಕೊಳ ಗಾಗುಧಿತ್ತಿದ್ದಾನೆ. ನಮ್ಮಿಂದ ಹಾಳಾ ಗುತ್ತಿರುವ ಪರಿಸರವನ್ನು ನಾವೇ ರಕ್ಷಿಸುವುದು ಅತ್ಯಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ನಡೆಸುತ್ತಿರುವ ಇಂಕ್‌ ಪೆನ್‌ ವಿತಧಿರಣಾ ಕಾರ್ಯಕ್ರಮ ಸ್ತುತ್ಯರ್ಹ ಎಂದರು. ಜೇಸಿಐ ಉಡುಪಿ ಸಿಲ್ವರ್‌ಸ್ಟಾರ್‌ನ ಅಧ್ಯಕ್ಷೆ ಜ್ಯೋತಿ ರಮಾನಾಥ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ವಲಯ ಉಪಾಧ್ಯಕ್ಷೆ ಸೌಮ್ಯಾ ರಾಕೇಶ್‌, ಕೆ.ವಿ.ಎಸ್‌.ಎಂ. ಕಾಲೇಜಿನ ಪ್ರಾಂಶುಪಾಲೆ ಸತ್ಯರಂಜನಿ, ಎಸ್‌ವಿಎಸ್‌ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ದೇವೇಂದ್ರ ನಾಯಕ್‌ ಮುಖ್ಯ ಅತಿಥಿಗಳಾಗಿದ್ದರು. ಎಸ್‌.ವಿ.ಎಸ್‌. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ/ಉಡುಪಿ ಆಗ್ಯಾìನಿಕ್‌ ಕ್ಲಬ್‌ನ ಸದಸ್ಯ ಕೆ. ಮಹೇಶ್‌ ಶೆಣೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಎಸ್‌.ವಿ.ಎಸ್‌. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೇಮಾ ನಾಯಕ್‌ ವಂದಿಸಿದರು. ಉಪನ್ಯಾಸಕಿ ಸುಮನಾ ಭಕ್ತ ಕಾರ್ಯಕ್ರಮ ನಿರೂಪಿಸಿದರು.

ಪ್ರತೀ ತಿಂಗಳು 1ರಿಂದ 2 ಲಕ್ಷ ಪೆನ್‌ ತ್ಯಾಜ್ಯ
ಪ್ರಸ್ತಾವನೆಗೈದ ಎಸ್‌.ವಿ.ಎಸ್‌. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ/ಉಡುಪಿ ಆಗ್ಯಾìನಿಕ್‌ ಕ್ಲಬ್‌ನ ಸದಸ್ಯ ಕೆ. ಮಹೇಶ್‌ ಶೆಣೈ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಉಪಯೋಗಿಸಿದ ಕನಿಷ್ಠ 1ರಿಂದ 2 ಲಕ್ಷ ಪೆನ್‌ಗಳು ತಿಂಗಳಿಗೆ ಪರಿಸರದ ಒಡಲು ಸೇರುತ್ತಿವೆ. ನಾವು ಪ್ಲಾಸ್ಟಿಕ್‌ನಿಂದಲೇ ಪರಿಸರ ಹಾಳಾಗುತ್ತಿದೆ ಎನ್ನುತ್ತಿದ್ದೇವೆ. ಆದರೆ ಮರು ಉಪಯೋಗಿಸಲಾಗದ ಪೆನ್‌ಗಳು ಪರಿಸರ ಸೇರುವುದರಿಂದ ಪರಿಸರದ ಮೇಲೆ ಭಾರೀ ಹಾನಿಯಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಶಾಯಿ ಪೆನ್‌ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಇಂಕ್‌ ಪೆನ್‌ ವಿತರಣಾ ಅಭಿಯಾನ ಪ್ರಾರಂಭಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next