Advertisement

Maharashtra ವಿಕಾಸ ಅಘಾಡಿಯಲ್ಲಿ ಸಿಎಂ ಹುದ್ದೆಗಾಗಿ ಜಟಾಪಟಿ?

01:28 AM Aug 17, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆಗುವುದಕ್ಕೆ ಮೊದಲೇ ಮಹಾ ವಿಕಾಸ ಅಘಾಡಿ ಮೈತ್ರಿಕೂಟ (ಎಂವಿಎ)ದಲ್ಲಿ ಸಿಎಂ ಹುದ್ದೆಗೆ ಗುದ್ದಾಟ ನಡೆದಿದೆ. ಚುನಾವಣೆ ಮೊದಲು ಮೈತ್ರಿಕೂಟದ ಸಿಎಂ ಅಭ್ಯರ್ಥಿ ಯಾರು ಎಂದು ತೀರ್ಮಾನ ಆಗಲಿ ಎಂದು ಮಾಜಿ ಸಿಎಂ ಉದ್ಧವ್‌ ಠಾಕ್ರೆ ಆಗ್ರಹಿಸಿದ್ದಾರೆ.

Advertisement

ಜತೆಗೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ(ಶರದ್‌) ಘೋಷಿಸಿದ ಯಾವುದೇ ಅಭ್ಯರ್ಥಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಮಹಾ ವಿಕಾಸ್‌ ಅಘಾಡಿ ಕಾರ್ಯಕರ್ತರನ್ನುದ್ದೇಶಿ ಮಾತನಾಡಿ, ಎನ್‌ಸಿಪಿ, ಕಾಂಗ್ರೆಸ್‌ ಬಿಜೆಪಿ ನೇತೃತ್ವದ ಮೈತ್ರಿ ಸರಕಾರವನ್ನು ಪದಚ್ಯುತಿಗೊಳಿಸಲು ಗಮನ ಹರಿಸಬೇಕು ಎಂದಿದ್ದಾರೆ. ನವೆಂಬರ್‌ನಲ್ಲಿ ವಿಧಾನ ಸಭೆ ಚುನಾವಣೆ ನಡೆಯಬಹುದು.

ವಕ್ಫ್ ಆಸ್ತಿ ಮುಟ್ಟಲು ಯಾರಿಗೂ ಬಿಡುವುದಿಲ್ಲ
ವಕ್ಫ್, ದೇವಸ್ಥಾನ ಸೇರಿ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಆಸ್ತಿಯನ್ನು ಸರಕಾರ ವಶಪಡಿಸಿಕೊಳ್ಳಲು ಅವಕಾಶ ನೀಡಲ್ಲ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿ, ಇದು ನಮ್ಮ ಪಕ್ಷದ ವಾಗ್ಧಾನ. ಈ ನಿಟ್ಟಿನಲ್ಲಿ ಜನರು ಆತಂಕಕ್ಕೆ ಒಳಗಾಗುವುದು ಬೇಡ ಎಂದಿ ದ್ದಾರೆ. ಲೋಕಸಭೆಯಲ್ಲಿ ಬಹುಮತ ಇಲ್ಲದ್ದಕ್ಕೆ ತಿದ್ದುಪಡಿ ಕಾಯ್ದೆಯನ್ನು ಬಜೆಟ್‌ ಅಧಿವೇಶನದಲ್ಲಿ ಅಂಗೀಕರಿಸಲು ಸಾಧ್ಯವಾಗಿರಲಿಲ್ಲ ಎಂದು ಕೇಂದ್ರವನ್ನು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next