Advertisement

ಪಾಕ್‌ನಲ್ಲಿ ಪೊಲೀಸ್‌ ಹುದ್ದೆಗೆ ಹಿಂದೂ ಮಹಿಳೆ

12:36 AM Sep 05, 2019 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಹಿಂದೂ ಅಲ್ಪಸಂಖ್ಯಾತರಿಗೆ ಉದ್ಯೋಗ ದೊರಕಿಸಿಕೊಳ್ಳುವುದೇ ಅತ್ಯಂತ ಕಷ್ಟ. ಇಂಥದ್ದರಲ್ಲೇ ಇದೇ ಮೊದಲ ಬಾರಿಗೆ ಪುಷ್ಪಾ ಕೊಹ್ಲಿ ಎಂಬ ಮಹಿಳೆ ಸಿಂಧ್‌ ಪ್ರಾಂತ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪೊಲೀಸ್‌ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಈಕೆ ಅಸಿಸ್ಟಂಟ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದು, ಸೋಷಿಯಲ್‌ ಮೀಡಿಯಾಗಳಲ್ಲಿ ಮೆಚ್ಚುಗೆ ಪಡೆಯುತ್ತಿದ್ದಾರೆ.

Advertisement

ಕಳೆದ ಜನವರಿಯಲ್ಲಿ ಹಿಂದು ಸಮುದಾಯಕ್ಕೆ ಸೇರಿದ ಸುಮನ್‌ ಪವನ್‌ ಬೊದಾನಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಜಡ್ಜ್ ಆಗಿ ನೇಮಕವಾಗಿದ್ದರು. ಇವರೂ ಕೂಡ ಸಿಂಧ್‌ ಪ್ರಾಂತ್ಯದವರೇ ಆಗಿರುವುದು ಗಮನಾರ್ಹ ಅಂಶ. ಸಿಂಧ್‌ ಪ್ರಾಂತ್ಯದಲ್ಲಿ ಹಿಂದುಗಳ ಸಂಖ್ಯೆ ತುಸು ಹೆಚ್ಚಿದ್ದು ಇತರ ಪ್ರದೇಶಗಳೊಂದಿಗೆ ಸಾಂಸ್ಕೃತಿಕ ಹಾಗೂ ಭಾಷಾವಾರು ಪ್ರತ್ಯೇಕತೆಯನ್ನು ಹೊಂದಿದೆ. ಮೂಲಗಳ ಪ್ರಕಾರ ಒಟ್ಟು ಪಾಕಿಸ್ಥಾನದಲ್ಲಿ 90 ಲಕ್ಷ ಹಿಂದುಗಳು ವಾಸಿಸುತ್ತಿದ್ದಾರೆ.

ಸಿಕ್ಖ್ ಯುವತಿ ಪ್ರಕರಣ ಇತ್ಯರ್ಥ
ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದಲ್ಲಿ ಮುಸ್ಲಿಂ ಯುವಕ ಸಿಕ್ಖ್ ಯುವತಿಯನ್ನು ಬಲವಂತವಾಗಿ ಮತಾಂತರ ಮಾಡಿ ವಿವಾಹವಾದ ಪ್ರಕರಣ “ಇತ್ಯರ್ಥ’ಪಡಿಸಲಾಗಿದೆ. ಈ ಬಗ್ಗೆ ಅಲ್ಲಿನ ರಾಜ್ಯಪಾಲ ಚೌಧರಿ ಮೊಹಮ್ಮದ್‌ ಸರ್ವರ್‌ ಮಾಹಿತಿ ನೀಡಿದ್ದಾರೆ. ಎರಡೂ ಕುಟುಂಬಗಳನ್ನು ಕರೆಯಿಸಿ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ. 6 ಮಂದಿ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿತ್ತು ಮತ್ತು ಒಬ್ಬನನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next