ಯಚೂರು: ಕಳೆದ ಕೆಲ ದಿನಗಳಿಂದ ನಗರದಲ್ಲಿ ಮೊಬೈಲ್ ಕಳವು ಹೆಚ್ಚಾಗುತ್ತಿದ್ದು, ಕದೀಮರು ದುಬಾರಿ ಫೋನ್‌ಗಳಿಗೆ ಗಾಳ ಹಾಕುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಅದರಲ್ಲೂ ನಗರದ ಡಿಸಿ ಗೃಹ ಕಚೇರಿ ಪಕ್ಕದಲ್ಲೇ ಈ ಘಟನೆಗಳು ನಡೆಯುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಡಿಸಿ ಗೃಹ ಕಚೇರಿ ಪಕ್ಕದಲ್ಲಿರುವ ಬಸ್ ನಿಲ್ದಾಣದಲ್ಲಿ ಕೆಲವರು ದುಬಾರಿ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿದ್ದಾರೆ. ಬಸ್ ಇಳಿಯುವಾಗಲೋ,ಆಟೋ ಹತ್ತುವಾಗಲೋ ಸಾರ್ವಜನಿಕರ ಕಣ್ತಪ್ಪಿಸಿ ಮೊಬೈಲ್ ಕಳವು ಮಾಡಲಾಗುತ್ತಿದೆ. ಆದರೆ, ಈ ಕಳ್ಳರು ಬಹಳ ಚಾಣಕ್ಯತನದಿಂದ ಕೆಲಸ ಮಾಡುತ್ತಿದ್ದು, ಒಂದೆರಡು ನಿಮಿಷಗಳಲ್ಲೇ ಕಣ್ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ನಗರದಲ್ಲಿ ಚಡ್ಡಿ ಗ್ಯಾಂಗ್ ಬೀಡು ಬಿಟ್ಟು ಸರಣಿ ಕಳ್ಳತನ ಮಾಡಿತ್ತು. ಪೊಲೀಸರಿಗೂ ಈ ಕಳ್ಳರ ಜಾಡು ಹಿಡಿಯುವುದು ಕಷ್ಟ ಸಾಧ್ಯವಾಗಿತ್ತು. ದೊಡ್ಡ-ದೊಡ್ಡಕೈಗಾರಿಕೆಗಳು,ಮನೆಗಳಿಗೆ ಕನ್ನ ಹಾಕಿ ಜನರ ನಿದ್ದೆಗೆಡಿಸಿತ್ತು.
ನಿತ್ಯ ಒಂದೊಂದು ಏರಿಯಾದಲ್ಲಿ ಕಳ್ಳತನ ಮಾಡಿ ದೊಡ್ಡ ಸುದ್ದಿ ಮಾಡಿತ್ತು. ಈಗ ಮೊಬೈಲ್ ಕಳ್ಳರ ಗ್ಯಾಂಗ್‌ಕೂಡ ಅದೇ ಹಾದಿಯಲ್ಲಿ ಸಾಗಿದೆಯಾ ಎಂಬುದು ಅನುಮಾನಕ್ಕೆಡೆ ಮಾಡಿದೆ.
ಸಿಸಿ ಕ್ಯಾಮರಾಗಳಿಲ್ಲ: ಬಸ್ ನಿಲ್ದಾಣದ ಆಸುಪಾಸು ಡಿಸಿ ಗೃಹ ಕಚೇರಿ ಬಿಟ್ಟರೆ ದೊಡ್ಡ ಮಳಿಗೆಗಳಾಗಲಿ,ಕಟ್ಟಡಗಳಾಗಲಿ ಇಲ್ಲ. ದೂರದಲ್ಲಿ ಆಸ ³ತ್ರೆ, ಪದವಿ ಕಾಲೇಜುಗಳಿವೆ. ಆಸು ಪಾಸು ಎಲ್ಲಿಯೂ ಸಿಸಿ ಕ್ಯಾಮರಾ ಕಣ್ಗಾವಲಿಲ್ಲ. ಇದರಿಂದ ಕದೀಮರು ಈ ಸ್ಥಳದಲ್ಲಿ ಹೆಚ್ಚಾಗಿ ಕೃತ್ಯ ಎಸಗುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈಗ ದುಬಾರಿ ಬೆಲೆಯ ಸ್ಮಾರ್ಟ್ ಫೋನ್‌ಗಳನ್ನು ಕಳೆದುಕೊಂಡವರು ಪಶ್ಚಿಮ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ. ಕದೀಮರು ಈವರೆಗೂ ಮೊಬೈಲ್ ಗಳನ್ನು ಆನ್ ಮಾಡಿಲ್ಲ. ಬಹುಶಃ ಸ್ಥಳೀಯರಾಗಿದ್ದಾರೆ. ಇಲ್ಲಿಗಾಗಲೇ ಪತ್ತೆ ಹಚ್ಚಬಹುದಿತ್ತು. ಇದು ಬೇರೆ ಕಡೆಯಿಂದ ಬಂದಿರುವ ತಂಡವಾಗಿರಬಹುದು ಎಂಬುದು ಪೊಲೀಸರ ಶಂಕೆಯಾಗಿದೆ.
ಬಸ್ ನಿಲ್ದಾಣದಲ್ಲೂ ಕೈ ಚಳಕ: ಇಲ್ಲಿ ಮಾತ್ರವಲ್ಲ ಬಸ್ ನಿಲ್ದಾಣದಲ್ಲೂಕೆಲವರು ಮೊಬೈಲ್ ಕಳೆದುಕೊಂಡಿದ್ದಾರೆ. ಪಾಕೆಟ್‌ನಲ್ಲಿ ಇಡುವಾಗ, ಮೇಲೆ ಜೇಬಿನಲ್ಲಿ ಇಟ್ಟಿರುವ ಮೊಬೈಲ್‌ಗಳನ್ನು ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲೇ ಕದಿಯಲಾಗುತ್ತಿದೆ. ಫೋನ್ ಕಳೆದಿರುವ ಬಗ್ಗೆ ಖಚಿತಗೊಳ್ಳುವುದರೊಳಗೆ ಸ್ಥಳ ಬದಲಾಯಿಸಿ ಹೋಗಿರುತ್ತಾರೆ. ಹಳ್ಳಿಗಾಡಿನಿಂದ ಬಂದವರಂತೆ ಆಸುಪಾಸು ಓಡಾಡುತ್ತಿದ್ದರು. ನನ್ನ ಮೊಬೈಲ್ ಕಳೆದಿದೆ ಎಂದು ತಿಳಿಯುವಷ್ಟರಲ್ಲಿ ಅಲ್ಲಿ ಅವರು ಕಾಣಿಸಲಿಲ್ಲ ಎನ್ನುತ್ತಾರೆ ಮೊಬೈಲ್ ಕಳೆದುಕೊಂಡ ವ್ಯಕ್ತಿ.
ಮೊಬೈಲ್ ಕಳ್ಳತನ ಮುಂಚೆಯಿಂದಲೂ ನಡೆಯುತ್ತಿವೆ. ಡಿಸಿ ಗೃಹಕಚೇರಿ ಪಕ್ಕದಲ್ಲೇ ಹೆಚ್ಚು ನಡೆದಿರುವ ಶಂಕೆ ಇರುವಕಾರಣಆ ಭಾಗದ ಆಸುಪಾಸು ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಇದಕ್ಕೆ ವಿಶೇಷ ತಂಡ ನಿಯೋಜಿಸಿ ಕೆಲಸ ಮಾಡಲಾಗುತ್ತಿದೆ. ಬಹುಶಃ ಈ ಕೃತ್ಯ ಎಸಗುತ್ತಿರುವುದು ಹೊಸ ತಂಡವಿರಬಹುದು ಎಂಬ ಶಂಕೆ ಇದೆ.
ಮಂಜುನಾಥ, ಪಿಎಸ್‌ಐ, ಪಶ್ಚಿಮ ಠಾಣೆ
ನಾನು ಆ.19ರಂದು ಡಿಸಿ ಗೃಹಕಚೇರಿ ಬಳಿ 40 ಸಾವಿರ ರೂ. ಮೊಬೈಲ್ ಕಳೆದುಕೊಂಡಿದ್ದೇನೆ. ಜೇಬಲಿದ್ದ ಮೊಬೈಲ್ ಕೆಲ ಹೊತ್ತಿನಲ್ಲಿ ಕಾಣಿಸಲಿಲ್ಲ. ಬುಧವಾರ ನನಗೆ ಗೊತ್ತಿರುವ ಸ್ನೇಹಿತರೊಬ್ಬರು ಅದೇ ಸ್ಥಳದಲ್ಲಿ ಬುಧವಾರ ಮೊಬೈಲ್‌ಕಳೆದುಕೊಂಡಿದ್ದಾರೆ. ಅದೇ ಸ್ಥಳದಲ್ಲಿಘಟನೆ ನಡೆದಿರುವುದು ಅನುಮಾನಕ್ಕೆಡೆ ಮಾಡಿದೆ. ಪೊಲೀಸರು ಈವರೆಗೂ ಮೊಬೈಲ್ ಸುಳಿವು ಸಿಕ್ಕಿಲ್ಲ ಎನ್ನುತ್ತಿದ್ದಾರೆ.
ಮೊಬೈಲ್ ಕಳೆದುಕೊಂಡ ವ್ಯಕ್ತಿ