Advertisement

ಸುಸ್ಥಿರ ಸಮಾಜದ ನಿರ್ಮಾಣಕ್ಕೆ  ಮುಂದಾಗಿ: ನಾಯ್ಕ್

05:20 PM Aug 16, 2018 | Team Udayavani |

ಲಕ್ಷ್ಮೇಶ್ವರ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಮಹಾನ್‌ ನಾಯಕ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಯುವ ಸಮುದಾಯ ಮುಂದಾಗಬೇಕು ಎಂದು ತಹಶೀಲ್ದಾರ್‌ ಡಾ| ವೆಂಕಟೇಶ ನಾಯ್ಕ ಹೇಳಿದರು.

Advertisement

ತಾಲೂಕು ಆಡಳಿತದಿಂದ ಬುಧವಾರ ಪಟ್ಟಣದ ಉಮಾವಿದ್ಯಾಲಯ ಹೈಸ್ಕೂಲ್‌ ಮೈದಾನದಲ್ಲಿ ನೂತನ ತಾಲೂಕಿನ ಪ್ರಥಮ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.  ಸ್ವಾತಂತ್ರ್ಯ ದೊರೆತು 72 ವರ್ಷ ಗತಿಸಿದರೂ ದೇಶದಲ್ಲಿ ಬಡತನ, ಅನಕ್ಷರತೆ ನಿರುದ್ಯೋಗದಂತಹ ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ಶಿಕ್ಷಣವೇ ಇದಕ್ಕೆ ಪರಿಹಾರವಾಗಿದ್ದು ಸುಶಿಕ್ಷಿತ ಸಮುದಾಯ ಈ ನಿಟ್ಟಿನಲ್ಲಿ ಉತ್ತಮ ಪರಿಹಾರ ಕಂಡುಕೊಳ್ಳಬೇಕು. ಪೋಷಕರು ಮಕ್ಕಳಿಗೆ ತಪ್ಪದೇ ಶಿಕ್ಷಕಣ ಕೊಡಿಸಬೇಕು ಎಂದರು.

ಸ್ವಾತಂತ್ರೋತ್ಸವ ನಿಮಿತ್ತ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಥಸಂಚಲನ: ಎಎಸ್‌ಐ ಎನ್‌.ಎಂ. ನಿಂಗೋಜಿ ನೇತೃತ್ವದಲ್ಲಿ ಪೊಲೀಸ್‌ ಪಡೆ, ಎಂ.ಎ. ಕಾಲೇಜಿನ ಕುಮಾರಸ್ವಾಮಿ ಸ್ಥಾವರಮಠ ನೇತೃತ್ವದಲ್ಲಿ ಎನ್‌ಸಿಸಿ ಪಡೆ, ಸರ್ಕಾರಿ ಪ್ರೌಢಶಾಲೆಯ ಹನಮಂತ ಮುಳಗುಂದ, ಎಕ್ಸ್‌ಲಂಟ್‌ ಶಾಲೆಯ ಸುಕನ್ಯಾ ಮಾದರ, ಆಕ್ಸಫರ್ಡ್‌ ಶಾಲೆಯ ಪ್ರತೀಕ ಕನೋಜ್‌, ಉಮಾ ವಿದ್ಯಾಲಯದ ನಾಗಮ್ಮ ಗಡದವರ, ಎಸ್‌ಟಿಪಿಎಂಬಿಯ ಮನೋಜನೆಗಳೂರ, ಬಿಸಿಎನ್‌ ಶಾಲೆಯ ಕಾರ್ತಿಕ ಮಾಂಡ್ರೆ, ಚಂದನ ಶಾಲೆಯ ವಿದ್ಯಾಶ್ರೀ ಚೋಳಮ್ಮನವರ, ಸೆವೆಂಥ್‌ ಡೇ ಶಾಲೆಯ ರಾಜೇಸಾಬನಧಾಪ್‌, ದಿ.ಯುನಿಕ್‌ ಶಾಲೆಯ ಶ್ವೇತಾ ಬದಿ ನೇತೃತ್ವದ ತಂಡಗಳಿಂದ ಪಥಸಂಚನ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಪಟ್ಟಣದ ಫಿನಿಕ್ಸ್‌ ಶಾಲೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ಎಸ್‌ಟಿಪಿಎಂಬಿ ಇಂಗ್ಲಿಷ್‌ ಮಾಧ್ಯಮ ದ್ವಿತೀಯ ಸ್ಥಾನ ಪಡೆಯಿತು. ಬಿಸಿಎನ್‌ ಪ್ರೌಢಶಾಲೆ ವಿದ್ಯಾರ್ಥಿಗಳು, ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ಆಕ್ಸ್‌ಫ ರ್ಡ್‌ ಶಾಲೆಯ ಕಾರ್ಯಕ್ರಮ ಮೆಚ್ಚುಗೆ ಪಡೆದವು. ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿ ವಿದ್ಯಾರ್ತಿಗಳನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ಕುರಿತು ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಷಣ ಮಾಡಿದರು.

ಹಸಿರು ಕರ್ನಾಟಕ ಆಂದೋಲನ ಕಾರ್ಯಕ್ರಮಕ್ಕೆ ಪುರಸಭೆ ಮುಖ್ಯಾಧಿ ಕಾರಿ ರವೀಂದ್ರ ಬಾಗಲಕೋಟ ಚಾಲನೆ ನೀಡಿದರು. ವಕೀಲ ಬಿ.ಎಸ್‌. ಬಾಳೇಶ್ವರಮಠ, ಶಿಕ್ಷಕ ಈಶ್ವರ ಮೆಡ್ಲೆàರಿ, ಪಿಎಸ್‌ಐ ವಿಶ್ವನಾಥ ಚೌಗುಲೆ, ಪುರಸಭೆ ಅಧ್ಯಕ್ಷ ಎಂ.ಆರ್‌. ಪಾಟೀಲ ಹಾಗೂ ಸದಸ್ಯರು, ಸಿಪಿಐ ಬಾಲಚಂದ್ರ ಲಕ್ಕಂ, ಎಪಿಎಂಸಿ ಕಾರ್ಯದರ್ಶಿ ಎನ್‌.ಐ. ಲಕ್ಕುಂಡಿ, ಉಪನೋಂದಣಾಧಿಕಾರಿ ಶ್ರೀಕಾಂತಭಟ್‌, ದೈಹಿಕ ಶಿಕ್ಷಣಾಧಿಕಾರಿ ಜಿ.ಡಿ. ಕಲ್ಲಣ್ಣವರ, ಎನ್‌.ಎನ್‌. ಶಿಗ್ಲಿ, ಲೋಹಿತ್‌ ನೆಲವಿಗಿ, ಕಂದಾಯ ಎಸ್‌.ಎಸ್‌. ಪಾಟೀಲ ಇತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next