Advertisement

ಕೋವಿಡ್‌ನಿಂದ ಕುಸಿದ ವಾಯುಸಾರಿಗೆ; ಆದಾಯದಲ್ಲಿ 85.7% ನಷ್ಟ

02:07 AM Sep 20, 2020 | mahesh |

ಮಣಿಪಾಲ: ಕೋವಿಡ್‌ 19 ಅನ್ನು ತಡೆಯಲು ಆರಂಭಿಸಿದ ಲಾಕ್‌ಡೌನ್‌ನಿಂದಾಗಿ ದೇಶದ ಹಲವು ಉತ್ಪಾದನಾ ವಲಯಗಳು ಸಂಪಾದನೆಯಲ್ಲಿ ಕಡಿಮೆ ಸಾಮರ್ಥ್ಯವನ್ನು ಹೊಂದಿತ್ತು. ಇದರಲ್ಲಿ ವಾಯು ಸಾರಿಗೆಯೂ ಸೇರಿದ್ದು ಕೋವಿಡ್‌ನಿಂದಾಗಿ ಭಾರೀ ನಷ್ಟದ ಹಾದಿಯನ್ನು ತುಳಿದಿವೆ. 2020-21ರ ಆರ್ಥಿಕ ವರ್ಷದ ಪ್ರಥಮ ತ್ತೈಮಾಸಿಕ ಅವಧಿಯಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳ ಆದಾಯದಲ್ಲಿ ಶೇ. 85.7ರಷ್ಟು ಕುಸಿತ ಕಂಡು ಬಂದಿದೆ.

Advertisement

2019ರ ಎಪ್ರಿಲ್‌-ಜೂನ್‌ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳು 25,517 ಕೋಟಿ ರೂ. ಆದಾಯ ಗಳಿಸಿತ್ತು. ಆದರೆ 2020ರ ಎಪ್ರಿಲ್‌ನಿಂದ ಜೂನ್‌ ವರೆಗಿನ ಅವಧಿಯಲ್ಲಿ 3,651 ಕೋಟಿ ರೂ. ಆದಾಯ ಹೊಂದಲು ಮಾತ್ರ ಶಕ್ತವಾಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 85.7ರಷ್ಟು ಆದಾಯ ಕಡಿಮೆ.

ಮಾರ್ಚ್‌ 31ಕ್ಕೆ 97,760ರಷ್ಟು ಉದ್ಯೋಗಿಗಳು ನಿಲ್ದಾಣಗಳಲ್ಲಿ ಇದ್ದರೆ ಇದರ ಪ್ರಮಾಣ ಜುಲೈ 31ಕ್ಕೆ 64,514ಕ್ಕೆ ಇಳಿಕೆಯಾಗಿದೆ. ಇದಕ್ಕೆ ವಾಯು ಸಾರಿಗೆಯನ್ನು ಮಾರ್ಚ್‌ ತೃತೀಯ ವಾರದಿಂದ ಮೇ ಅಂತ್ಯದ ವರೆಗೆ ಸ್ಥಗಿತಗೊಳಿಸಿರುವುದು ಕಾರಣವಾಗಿದೆ.

5.85 ಕೋಟಿಯಿಂದ 1.2 ಕೋಟಿಗೆ !
2019-20ರ ಅವಧಿಯಲ್ಲಿ ದೇಶದಲ್ಲಿ ವಾಯು ಸಂಚಾರ ಪ್ರಮಾಣ 5.85 ಕೋಟಿಯಷ್ಟಿದ್ದರೆ 2020ರ ಎಪ್ರಿಲ್‌-ಜೂನ್‌ ಅವಧಿಗೆ ಅದರ ಪ್ರಮಾಣ 1.2 ಕೋಟಿಗೆ ಇಳಿಕೆಯಾಗಿದೆ.

ಏರ್‌ ಇಂಡಿಯಾ ಆದಾಯ ಏನಾಯಿತು?
ಏರ್‌ ಇಂಡಿಯಾದ ಆದಾಯವು 2020ರ ಎಪ್ರಿಲ್‌-ಜೂನ್‌ ಅವಧಿಯಲ್ಲಿ 1,531 ಕೋಟಿಗೆ ಸೀಮಿತವಾಗಿದೆ. 2019ರ ಅವಧಿಯಲ್ಲಿ ಇದು 7,066 ಕೋಟಿ. ರೂ. ಆಗಿತ್ತು.

Advertisement

ಉದ್ಯೋಗಗಳ ಸಂಖ್ಯೆಯಲ್ಲೂ ಕುಸಿತ
ಲಾಕ್‌ಡೌನ್‌ ಕಾರಣದಿಂದ ನಿರುದ್ಯೋಗಿಗಳ ಪ್ರಮಾಣವೂ ಏರಿಕೆಯಾಗಿದೆ. ಇದರಲ್ಲಿ ವಾಯು ಸಾರಿಗೆಯ ಪಾತ್ರ
ಶೇ. 7.07ರಷ್ಟಿದೆ. ಈ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ಶೇ. 74,887ರಷ್ಟು ಉದ್ಯೋಗಿಗಳು ವಾಯು ಸಾರಿಗೆಯಲ್ಲಿದ್ದರೆ ಜುಲೈ 31ಕ್ಕೆ ಇದು 69,589ಕ್ಕೆ ಕುಸಿದಿದೆ.

ನಿರ್ವಾಹಕರ ಆದಾಯ ಕಡಿಮೆ
ವಿಮಾನ ನಿಲ್ದಾಣದ ನಿರ್ವಾಹಕರ ಆದಾಯದಲ್ಲೂ ಇಳಿಕೆಯಾಗಿದ್ದು 2019ರ ಎಪ್ರಿಲ್‌-ಜೂನ್‌ ಅವಧಿಯಲ್ಲಿ 5,745 ಕೋಟಿ ರೂ. ಇದ್ದ ಆದಾಯ 2020ರ ಎಪ್ರಿಲ್‌-ಜೂನ್‌ ನಲ್ಲಿ 894 ಕೊಟಿ ರೂ.ಗೆ ಇಳಿದಿದೆ.

ಅಂತಾರಾಷ್ಟ್ರೀಯ ಏರ್‌
ಟ್ರಾಫಿಕ್‌ ಪ್ರಮಾಣ 93.45 ಲಕ್ಷದಿಂದ 11.55ಕ್ಕೆ ಇಳಿಕೆಯಾಗಿದೆ. ದೇಶಿಯ ಏರ್‌ ಟ್ರಾಫಿಕ್‌ 5.85 ಕೋಟಿಯಿಂದ 1.2 ಕೋಟಿಗೆ ಇಳಿಕೆಯಾಗಿದೆ. ಆದರೆ ಜುಲೈ ಬಳಿಕ ಪ್ಯಾಸೆಂಜರ್‌ ವಿಮಾನಗಳು “ವಂದೇ ಭಾರತ್‌ ಮಿಷನ್‌’ ಯೋಜನೆಯಡಿ ಜುಲೈ ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next