ಕೈಗೊಳ್ಳದೆ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ನೆಕ್ಕಿಲಾಡಿಯ ನಾಗರಿಕ ಅಭಿವೃದ್ಧಿಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಹೃದಯ ಭಾಗದಲ್ಲಿರುವ ಸಂತೆಕಟ್ಟೆಯ ಬಳಿಯೇ ತ್ಯಾಜ್ಯವನ್ನು ಮನಬಂದಂತೆ ಎಸೆಯಲಾಗುತ್ತಿದ್ದು, ರೋಗ ರುಜಿನಗಳು ಪಸರಿಸಲು ಕಾರಣವಾಗುತ್ತಿದೆ.
Advertisement
ಪರಿಸರದ ಕೆಲವರು ಡೆಂಗ್ಯೂ ಪೀಡಿತರಾಗಿ ಸಂಕಷ್ಟಕ್ಕೆ ತುತ್ತಾಗುತ್ತಿದ್ದರೂ ಸಮಸ್ಯೆಯ ಗಂಭೀರತೆಯನ್ನು ಅರ್ಥೈಸಿಕೊಳ್ಳದ ಪಂಚಾಯತ್ ಆಡಳಿತವು ಮೌನವಾಗಿದೆ ಎಂದು ಆರೋಪಿಸಿರುವ ಸಮಿತಿಯ ಮುಂದಾಳು ಯೂನಿಕ್ ಅಬ್ದುಲ್ ರಹಿಮಾನ್, ನಾಗರಿಕರ ಆರೋಗ್ಯ ರಕ್ಷಿಸಬೇಕಾದ ಸ್ಥಳೀಯಾಡಳಿತ ಕರ್ತವ್ಯ ಲೋಪ ಎಸಗುತ್ತಿದ್ದು, ಈ ಬಗ್ಗೆ ಇಲಾಖಾಧಿಕಾರಿಗಳು ಕೂಡಲೇ ಗಮನ ಹರಿಸಿ ಅಗತ್ಯ ಕ್ರಮ ಜರಗಿಸಬೇಕೆಂದು ಅಗ್ರಹಿಸಿದ್ದಾರೆ.