Advertisement
ಪರಿಸರ ರಕ್ಷಣೆಗೆ ಬದ್ಧರಾಗಿರಜನೀಶ್ ಮಾತನಾಡಿ, ನಾವು ನಿತ್ಯ ಓಡಾಟ ನಡೆಸುವ ಪರಿಸರವನ್ನು ಸ್ವತ್ಛವಾಗಿಡುವುದರಿಂದ ಆರೋಗ್ಯ ಉತ್ತಮ ವಾಗಿರುವುದು ಮಾತ್ರವಲ್ಲದೆ, ಮಾನಸಿಕವಾಗಿಯೂ ನೆಮ್ಮದಿ ಪಡೆದುಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದಿರಬೇಕು. ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ನೀಡಿದ ಪರಿಸರವನ್ನು ಹಾಳುಮಾಡದೆ ರಕ್ಷಿಸುವುದೇ ನಮ್ಮ ಧರ್ಮ ಎಂದರು. ರಾಜಕೀಯ ಯಾವತ್ತೂ ಶಾಶ್ವತವಲ್ಲ. ಆದರೆ ನಾವು ಉಪಯೋಗಿಸುವ ಪರಿಸರ ನಮ್ಮ ಜೀವಿತಾವಧಿಯವರೆಗೆ ಇರುತ್ತದೆ. ಮಾತ್ರವಲ್ಲದೆ ಮುಂದಿನ ಪೀಳಿಗೆಗೂ ಮೌಲ್ಯಯುತವಾದುದು. ಅದರ ರಕ್ಷಣೆಗೆ ಬದ್ಧರಾಗಿ ಕೆಲಸ ಮಾಡೋಣ ಎಂದು ಹೇಳಿದರು.