Advertisement

ಶಾಲೆಗಳ ಪುನಶ್ಚೇತನಕ್ಕೆ ಸಹಕಾರ ಅಗತ್ಯ

12:55 PM Jul 02, 2018 | |

ಚಿಕ್ಕಬಳ್ಳಾಪುರ: ಗ್ರಾಮೀಣ ಪ್ರದೇಶದಲ್ಲಿ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಿತ ದೃಷ್ಟಿಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವ ಬಹಳ ಮುಖ್ಯವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಕರಷ್ಟೆ ಶಾಲಾ ವಾತಾವರಣವು ಕೂಡ ಹೆಚ್ಚು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ
ವಿಷಯ ಪರಿವೀಕ್ಷಕಿ ನಾಗರತ್ನಮ್ಮ ತಿಳಿಸಿದರು.

Advertisement

ತಾಲೂಕಿನ ಪೋಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಿಟ್ರಿಕ್ಸ್‌ ಪ್ರೈ ಲಿಮಿಟೆಡ್‌ ಹಾಗೂ ಗ್ರಾಮಾಂತರ ಟ್ರಸ್ಟ್‌ನಿಂದ ಆಯೋಜಿಸಿದ್ದ ಶಾಲೆಯಲ್ಲಿ ಆಕರ್ಷಕ ವಾತಾವರಣ ನಿರ್ಮಾಣ ಚಟುವಟಿಕೆಗೆ ಚಾಲನೆ
ನೀಡಿದ ಅವರು ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯಿಂದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯ ಹಿಂದೆಗಿಂತೂ ಈಗ ಹೆಚ್ಚಾಗಿದೆ. ಬಡ ಮಕ್ಕಳು ಓದುವ ಸರ್ಕಾರಿ ಶಾಲೆಗಳ ಉನ್ನತ್ತೀಕರಣಕ್ಕೆ ಸರ್ಕಾರ ನೆರವಿಗೆ ಎದುರು ನೋಡದೇ ಸಮುದಾಯವು ಕೂಡ ಹೆಚ್ಚು ಆಸಕ್ತಿ ಬೆಳೆಸಿಕೊಂಡು ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಅಗತ್ಯ.

ಆದ್ದರಿಂದ ಸಮಾಜದಲ್ಲಿನ ಸ್ವಯಂಸೇವಾ ಸಂಸ್ಥೆಗಳು, ದಾನಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯವ ಮೂಲಕ ಶಾಲೆಗಳ ಅಭಿವೃದ್ಧಿಯ ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕಿದೆ. ಸರ್ಕಾರ ಕೂಡ ಶಾಲೆಗಳ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ನೆರವು ನೀಡುತ್ತಿದೆ. ಪೋಷಕರು ಬರೀ ಆಂಗ್ಲದ ವ್ಯಾಮೋಹಕ್ಕೆ ಸಿಲುಕಿ, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿರುವುದರ ಬದಲು ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದರು.

ಸಿಟ್ರಿಕ್ಸ್‌ ಪ್ರೈ ಲಿಮಿಟೆಡ್‌ ಸಂಸ್ಥೆ ಅಧ್ಯಕ್ಷೆ ಉಷಾಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿ, ನಲಿಯಲು ಪೂರಕ ವಾತಾವರಣ ನಿರ್ಮಿಸಬೇಕೆಂಬ ದೃಷ್ಟಿಯಿಂದ ಸಿಟ್ರಿಕ್ಸ್‌ ಪ್ರೈ ಲಿಮಿಟೆಡ್‌ ಸಂಸ್ಥೆ
ಶಾಲೆಗಳಲ್ಲಿ ಆಕರ್ಷಕ ವಾತಾವರಣ ನಿರ್ಮಿಸಿ, ಶಾಲೆಗೆ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ಸಂಸ್ಥೆಯು ವತಿಯಿಂದ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಆವರಣದಲ್ಲಿ ಹೂವು ತೋಟ ಬೆಳೆಸಲು ವಿವಿಧ ಅಲಂಕಾರಿಕ ಹಾಗೂ ತರಕಾರಿ ಗಿಡಗಳನ್ನು ನೆಡಲಾಗಿದ್ದು, ವಿದ್ಯಾರ್ಥಿಗಳ ಕಲಿಕೆ ಮೇಲೆ ಹೆಚ್ಚು ಪ್ರಭಾವ ಬೀರುವ ನಿಟ್ಟಿನಲ್ಲಿ ಶಾಲಾ ಕಾಂಪೌಂಡ್‌, ಗೋಡೆಗಳ ಮೇಲೆ ಒಳ್ಳೆಯ ಸಂದೇಶಾತ್ಮಕ ಸ್ತಬ್ದ ಚಿತ್ರಗಳನ್ನು ಬಿಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೋಶೆಟ್ಟಿಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಂಗಾಧರಪ್ಪ, ಕಾರ್ಯದರ್ಶಿ ಆನಂದ್‌, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನರಸಿಂಹಯ್ಯ, ಶಾಲೆಯ ಮುಖ್ಯಶಿಕ್ಷಕ ಆರ್‌. ಎಲ್‌.ರಾಮಣ್ಣ, ಸಹ ಶಿಕ್ಷಕ ಮಹೇಶ್ವರಪ್ಪ, ಸಿಟ್ರಿಕ್ಸ್‌ ಪ್ರೈ ಲಿಮಿಡೆಟ್‌ ಸಂಸ್ಥೆ ಉಪಾಧ್ಯಕ್ಷ ಅಭಿಷೇಕ್‌, ದಲಿತ ಸಂಘರ್ಷ ಸಮಿತಿ ಮುಖಂಡರಾದ ಬಿ.ವಿ.ಆನಂದ್‌, ಮನೋಹರ್‌ ಸೇರಿದಂತೆ ಶಾಲಾ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.

Advertisement

ಮಕ್ಕಳಿಗೆ ಉಚಿತ ಕಲಿಕೋಪಕರಣ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಕೂಡ ಬಹಳ ಮುಖ್ಯ ಈ ದಿಸೆಯಲ್ಲಿ ಸಿಟ್ರಿಕ್ಸ್‌ ಪ್ರೈ ಲಿಮಿಡೆಟ್‌ ಸಂಸ್ಥೆಯು ಮಕ್ಕಳಿಗೆ ಪಠ್ಯದ ಜತೆಗೆ
ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಕಲಿಕೆ ಉಪಕರಣಗಳನ್ನು ಉಚಿತವಾಗಿ ವಿತರಣೆಗೂ ಸಹ ಸಂಸ್ಥೆ ವಿಶೇಷ ಕಾರ್ಯ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸುತ್ತಿದೆ. ಶಾಲಾ ಆವರಣದಲ್ಲಿ ಆಕರ್ಷಕ ವಾತಾವರಣ ನಿರ್ಮಿಸುವ ಜತೆಗೆ ಮಕ್ಕಳಲ್ಲಿ ಪರಿಸರ, ಸ್ವತ್ಛತೆ, ನೈರ್ಮಲ್ಯ, ಜಲ ಸಂರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದು ಸಿಟ್ರಿಕ್ಸ್‌ ಪ್ರೈ ಲಿಮಿಟೆಡ್‌ ಸಂಸ್ಥೆ ಅಧ್ಯಕ್ಷೆ ಉಷಾಶೆಟ್ಟಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next