Advertisement

ಬೆಂಗಳೂರು ನಾಗರತ್ನಮ್ಮ ನಾಟಕ

08:23 PM Dec 20, 2019 | Lakshmi GovindaRaj |

ಭಾರತೀಯ ಸಂಗೀತದ ಇತಿಹಾಸದಲ್ಲಿ ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮನವರ ಹೆಸರು ಚಿರಸ್ಥಾಯಿ. ಸಂಗೀತ – ನೃತ್ಯಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ. ದೇವದಾಸಿ ಮನೆತನದಲ್ಲಿ ಹುಟ್ಟಿದ ಅವರು, ಅಂದಿನ ಕಾಲಘಟ್ಟದಲ್ಲಿ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸಿ, ಸಾಧನೆ ಮಾಡಿರು ವುದು ಸಣ್ಣ ಸಾಹಸವಲ್ಲ. ಸವಾಲನ್ನು ಅದ್ಭುತವಾಗಿ ನಿರ್ವಹಿಸಿದ ದಿಟ್ಟ ಮನದ ಈ ಹೋರಾಟಗಾರ್ತಿಯ ಜೀವನಚರಿತ್ರೆ ದಾಖಲಾರ್ಹ.

Advertisement

ಈ ದಿಸೆಯಲ್ಲಿ, ಸಂಗೀತ ವಿದುಷಿ ಡಾ.ಪುಸ್ತಕಂ ರಮಾ ಅವರು ನಾಗರತ್ನಮ್ಮನವರ ಸ್ಮರಣೀಯ ಕೊಡುಗೆಯನ್ನು ನಾಟಕವನ್ನಾಗಿಸಿದ್ದಾರೆ. “ಬೆಂಗಳೂರು ನಾಗರತ್ನಮ್ಮ’ ಎಂಬ ಈ ಸಂಗೀತ ನಾಟಕವನ್ನು, ಸಂಗೀತ ಸಂಭ್ರಮ ಮತ್ತು ಬೆನಕ ತಂಡವು ಪ್ರಸ್ತುತ ಪಡಿಸಲಿವೆ. ಪರಿಕಲ್ಪನೆ-ವಿನ್ಯಾಸ ಮತ್ತು ನಿರ್ದೇಶನ ಟಿ.ಎಸ್‌.ನಾಗಾಭರಣ ಅವರದ್ದು. ಪಿ.ರಮಾ, ಸಂಗೀತ ನೀಡಿದ್ದರೆ, ಪುಲಿಕೇಶಿ ಕಸ್ತೂರಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೂಲಕಥೆ, ವಿ. ಶ್ರೀರಾಮ್‌ ಮತ್ತು ಮಲೆಯೂರು ಗುರುಸ್ವಾಮಿ ಅವರದ್ದು.

ಎಲ್ಲಿ?: ಚೌಡಯ್ಯ ಸ್ಮಾರಕ ಭವನ
ಯಾವಾಗ?: ಡಿ.27, ಶುಕ್ರವಾರ ಸಂಜೆ 7

Advertisement

Udayavani is now on Telegram. Click here to join our channel and stay updated with the latest news.

Next