Advertisement
ತಮ್ಮ ತಾಯಿಯ ತಾಯಿಯಿಂದ (ಅಜ್ಜಿ) ಈ ಔಷಧ ಕ್ರಮ ಕಲಿತ ಅಣ್ಣಿ ಪೂಜಾರಿ (66) ಈ ತನಕ 5 ಸಾವಿರಕ್ಕೂ ಅಧಿಕ ಜನರಿಗೆ ಹುಚ್ಚು ನಾಯಿ ಕಡಿತಕ್ಕೆ ಔಷಧ ಕೊಟ್ಟಿದ್ದಾರೆ. ಮನುಷ್ಯರಿಗೆ ಮಾತ್ರವಲ್ಲದೆ, ಜಾನುವಾರು, ನಾಯಿ, ಕೋಳಿ, ಸಾಕು ಹಂದಿಗಳಿಗೂ ನಾಟಿ ಪದ್ಧತಿಯ ಔಷಧ ನೀಡಿ, ಗುಣಪಡಿಸಿದ್ದಾರೆ. ಅವರ ಈ ಸಾಧನೆಗೆ ಆಲಂಕಾರು ಸಿ.ಎ. ಬ್ಯಾಂಕ್, ಮೂರ್ತೆದಾರರ ಸೇವಾ ಸಹಕಾರಿ ಸಂಘ, ಬಿಲ್ಲವ ಸಂಘ ಮುಂತಾದವು ಅವರನ್ನು ಸಮ್ಮಾನಿಸಿ, ಗೌರವಿಸಿವೆ. ಹುಚ್ಚು ನಾಯಿ ಕಚ್ಚಿದ ಮೇಲೆ ಮನುಷ್ಯರಿಗಾದರೆ 42ನೇ ದಿನ, ಪ್ರಾಣಿಗಳಿಗೆ ಕೇವಲ 20 ದಿನಗಳಲ್ಲಿ ರೇಬಿಸ್ ರೋಗ ಶುರುವಾಗುತ್ತದೆ. ಉಲ್ಬಣಿಸಿದ ಮೇಲೆ ಯಾವ ಚಿಕಿತ್ಸೆಯೂ ಫಲ ನೀಡುವುದಿಲ್ಲ. ಆಮೇಲೆ ಮೂರು ದಿನಗಳಷ್ಟೇ ಆಯಸ್ಸು.
ಕೇಪುಳು ಅಣ್ಣಿ ಪೂಜಾರಿ ಅವರ ಸಹೋದರಿ ರಾಮಕುಂಜದಲ್ಲಿ ಔಷಧ ನೀಡುತ್ತಾರೆ. ಈಗ ಎಲ್ಲ ಕಡೆಗಳಲ್ಲಿ ರಬ್ಬರ್ ಕೃಷಿಯಿಂದಾಗಿ ಗಿಡ ಮೂಲಿಕೆಗಳು ನಾಶವಾಗಿವೆ. ಗಿಡಮೂಲಿಕೆಗಳಿಗಾಗಿ ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯದ ವರೆಗೆ ಅಲೆದಾಡಬೇಕಾಗುತ್ತದೆ ಎನ್ನುತ್ತಾರೆ, ಅಣ್ಣಿ ಪೂಜಾರಿ (ಮೊ. 9880140030). ರೇಬಿಸ್‌ಗೆ ಮಾತ್ರವಲ್ಲದೆ ವಿಷಕಾರಿ ಜೇಡ ಕಚ್ಚಿದರೂ ಮೂರು ದಿನಗಳ ಔಷಧ ನೀಡಿ, ಗುಣಪಡಿಸುತ್ತಾರೆ. ಮೂಲವ್ಯಾಧಿಗೂ ಚಿಕಿತ್ಸೆ ನೀಡುತ್ತಾರೆ.
Related Articles
Advertisement