Advertisement

ಮೋದಿ –ಕ್ಸಿ ಭೇಟಿಯಿಂದ ವಿಶ್ವಕ್ಕೆ ಸಿಗಲಿದೆ ಹೊಸ ವಿಚಾರ

10:59 AM Apr 24, 2018 | Team Udayavani |

ಬೀಜಿಂಗ್‌: ಪ್ರಧಾನಿ ನರೇಂದ್ರ ಮೋದಿ, ಕ್ಸಿ ಜಿನ್‌ಪಿಂಗ್‌ ನಡುವಿನ ಭೇಟಿಯಿಂದ ಭಾರತ ಮತ್ತು ಚೀನ ನಡುವಿನ ಸಂಬಂಧದ ಧನಾತ್ಮಕವಾದ ಹೊಸ ವಿಚಾರ ವಿಶ್ವಕ್ಕೆ ಗೊತ್ತಾಗಲಿದೆ ಎಂದು ಚೀನ ವಿದೇಶಾಂಗ ಇಲಾಖೆ ಹೇಳಿಕೊಂಡಿದೆ.

Advertisement

ಚೀನದ ವುಹಾನ್‌ ನಗರದಲ್ಲಿ ಎ.27, 28ರಂದು ದೇಶಗಳಲ್ಲಿ ಹೆಚ್ಚುತ್ತಿರುವ ಸ್ವರಕ್ಷಣಾತ್ಮಕ ಕ್ರಮಗಳು, 100 ವರ್ಷಗಳಲ್ಲಿ ವಿಶ್ವದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ, ಎರಡೂ ದೇಶಗಳಿಗೆ ಸಮಾನವಾಗಿ ಆತಂಕಕ್ಕೆ ಕಾರಣವಾಗಿರುವ ಜಾಗತಿಕ ವಿದ್ಯಮಾನಗಳ ಕುರಿತು ಪಿಎಂ ಮೋದಿ, ಅಧ್ಯಕ್ಷ ಕ್ಸಿಜಿನ್‌ ಪಿಂಗ್‌ ಚರ್ಚಿಸಲಿದ್ದಾರೆ ಎಂದು ಇಲಾಖೆ ವಕ್ತಾರ ಹೇಳಿದ್ದಾರೆ. ಇಬ್ಬರು ನಾಯಕರ ಭೇಟಿಯಲ್ಲಿ ಯಾವುದೇ ರಾಜಕೀಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದಿ ಕಲಿಯಬೇಕು: ಭಾರತ ಮತ್ತು ಚೀನದವರು ಹಿಂದಿ ಮತ್ತು ಚೀನೀ ಭಾಷೆ ಕಲಿಯಬೇಕು ಎಂದಿದ್ದಾರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌. ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚೀನದ 16 ವಿವಿಗಳಲ್ಲಿ 400 ಮಂದಿ ವಿದ್ಯಾರ್ಥಿಗಳು ಹಿಂದಿ ಕಲಿಯುತ್ತಿದ್ದಾರೆ. ‘ದಂಗಲ್‌’, ‘ಸೀಕ್ರೆಟ್‌ ಸೂಪರ್‌ಸ್ಟಾರ್‌’ ಗಳಂಥ ಹಿಂದಿ ಸಿನಿಮಾಗಳು ಚೀನದಲ್ಲಿ ಜನ ಪ್ರಿಯಗೊಂಡಿವೆ. ತಮಿಳು, ಬಂಗಾಲಿ ಭಾಷೆ ಕೂಡ ಇತ್ತೀಚಿನ ದಿನಗಳಲ್ಲಿ ಜನಪ್ರಿಯಗೊಳ್ಳುತ್ತಿವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next