ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಸ್ವಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಮೂಲಕ ರಾಜ್ಯದಲ್ಲಿ ಮುಕ್ತ, ಪ್ರಾಮಾಣಿಕ ಮತ್ತು ತಾರತಮ್ಯರಹಿತವಾಗಿ ಆಡಳಿತ ನಡೆಸುವ ಮೂಲಕ ಜನರ ಹೃದಯ ಗೆಲ್ಲಬೇಕು ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ರವಿವಾರ ಸಲಹೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಬಲ್, “ಕರ್ನಾಟಕ ಚುನಾವಣೆ ಗೆಲ್ಲುವುದು ಕಷ್ಟ. ಜನರ ಹೃದಯವನ್ನು ಗೆಲ್ಲುವುದು ಕಠಿಣ! ಮುಂದಿನ 5 ವರ್ಷಗಳ ಕಾಲ ಪ್ರಾಮಾಣಿಕ, ತಾರತಮ್ಯರಹಿತರಾಗಿ ಜನರ ಹೃದಯ ಗೆಲ್ಲಿರಿ” ಎಂದು ಸಲಹೆ ನೀಡಿದ್ದು, ಇದ್ಯಾವುದೂ ಇಲ್ಲದ ಕಾರಣ ಬಿಜೆಪಿ ಸೋತಿದೆ ಎಂದಿದ್ದಾರೆ.
ಚುನಾವಣಾ ಫಲಿತಾಂಶ ಬಗ್ಗೆ ನಿನ್ನೆಯೂ ಟ್ವೀಟ್ ಮಾಡಿದ್ದ ಸಿಬಲ್, ಪ್ರಧಾನಿ ಸೋತರು, ಕರ್ನಾಟಕದ ಜನರು ಗೆದ್ದಿದ್ದಾರೆ. ಇಲ್ಲ 40% ಭ್ರಷ್ಟಾಚಾರ, ಕೇರಳ ಕಥೆ, ವಿಭಜಕ ರಾಜಕೀಯ, ದುರಹಂಕಾರ, ಸುಳ್ಳು ಇವೆಲ್ಲ ಕಾರಣದಿಂದಾಗಿ ಕಾಂಗ್ರೆಸ್ ಗೆಲುವಿಗೆ ನೆರವಾಗಿವೆ ಎಂದು ಹೇಳಿದ್ದರು.