ನವದೆಹಲಿ: ಎಷ್ಟು ಪೀಳಿಗೆವರೆಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಮುಂದುವರಿಯಲಿದೆ? ಇದು ಮರಾಠಾ ಮೀಸಲು ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಸಾಂವಿಧಾನಿಕ ಪೀಠ ವಕೀಲರಿಗೆ ಕೇಳಿದ ಪ್ರಶ್ನೆ.
ಇದನ್ನೂ ಓದಿ:ಚಿತ್ರ ವೀಕ್ಷಣೆಗಾಗಿ ಕಾಯುತ್ತಿರುವ ಅನಿವಾಸಿ ಕನ್ನಡಿಗರು; ಇನ್ನೂ ತೆರೆಯದ ಚಿತ್ರಮಂದಿರಗಳು
ಈಗಿರುವ ಶೇ.50ರಷ್ಟು ಮೀಸಲಾತಿ ಪ್ರಮಾಣ ಮಿತಿಯನ್ನು ತೆಗೆದು ಹಾಕಿದರೆ ಪರಿಣಾಮ ಅಸಮಾನತೆ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಯನ್ನೂ ಅದು ಕೇಳಿದೆ. ನ್ಯಾ.ಅ ಶೋಕ್ ಭೂಷಣ್ ಅವರ ನೇತೃತ್ವದ ಐವರು ಸದಸ್ಯರ ಪಂಚ ಪೀಠ ಈ ಬಗ್ಗೆ ವಿಚಾರಣೆ ನಡೆಸುತ್ತಿದೆ.
ಮಹಾ ರಾಷ್ಟ್ರ ಸರ್ಕಾರದ ಪರವಾದ ಮಂಡಿಸಿದ ಮುಕುಲ್ ರೋಹಟಗಿ ಅವರು, ಬದಲಾದ ಸನ್ನಿ ವೇಶದಲ್ಲಿ ಮತ್ತು ಮಂಡಲ್ ತೀರ್ಪಿನ ಪ್ರಕಾರವಾಗಿ ಮೀಸ ಲಾತಿ ಮಿತಿ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೇ ಬಿಡಬೇಕು ಎಂದು ಹೇಳಿದರು.
ಜತೆಗೆ, ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ನಿರ್ಧಾರ ಮಾಡಿದ್ದು, ಇದೂ ಶೇ.50ರ ಮಿತಿಯನ್ನು ಉಲ್ಲಂಘಿಸಿದೆ ಎಂದು ಉಲ್ಲೇಖಿಸಿದರು.
ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದು ಹೋಗಿದೆ, ರಾಜ್ಯ ಸರ್ಕಾರಗಳು ಕೂಡಾ ಹಲವಾರು ಲಾಭದಾಯಕ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೂ ಯಾವುದೇ ಅಭಿವೃದ್ದಿಯಾಗಿಲ್ಲ ಎಂಬುದನ್ನು ನಾವು ಸ್ವೀಕರಿಸಬೇಕಾ? ಹಿಂದುಳಿದ ಜಾತಿಗಳು ಇದರಿಂದ ಅಭಿವೃದ್ದಿ ಹೊಂದಿಲ್ಲ ಎಂದು ಪೀಠ ಹೇಳಿದೆ.